ಪೊನ್ನಂಪೇಟೆ, ಮೇ ೧೪: ಒಕ್ಕಲಿಗರು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಹೇಳಿದರು.

ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ಆಯೋಜಿಸಲಾಗಿರುವ ಒಕ್ಕಲಿಗರ ಮಿಲನ ಒಕ್ಕಲಿಗರ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಕೊಡಗು ಪುಟ್ಟ ಜಿಲ್ಲೆಯಾದರೂ ಕ್ರೀಡಾ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದೆ. ಒಕ್ಕಲಿಗರು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಕ್ರೀಡೆಯು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡುವುದರ ಜೊತೆಗೆ ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸಿ ಯಶಸ್ಸು ಸಾಧಿಸುವ ಕಲೆಯನ್ನು ಕಲಿಸುತ್ತದೆ ಎಂದರು. ನಂತರ ಶಾಸಕ ಪೊನ್ನಣ್ಣ ಅವರು ವಕೀಲರಾದ ರಾಕೇಶ್ ಅವರ ಬೌಲಿಂಗ್‌ಗೆ ಬ್ಯಾಟ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.

ದಕ್ಷಿಣ ಕೊಡಗು ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಮಧುಸೂದನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿಗಳಾದ

೪ಐದನೇ ಪುಟಕ್ಕೆ

(ಮೊದಲ ಪುಟದಿಂದ)ವಿ.ಈ. ಭದ್ರಯ್ಯ, ಸಮಾಜ ಸೇವಕ ಗೋಪಾಲ್ ವಿ.ಟಿ, ಭವಾನಿ ಪರಮೇಶ್ವರ, ಜಿ.ಕೆ. ಜಯಲಕ್ಷ್ಮಿ ಗಣೇಶ್, ವಿ.ಎಸ್. ಪ್ರಶಾಂತ್, ಹಂಚಿಮನೆ ಸುಜಾತ ಮಹೇಶ್, ವಿ.ಬಿ. ವಿಠಲ, ವಿ.ಎನ್. ಮಹೇಶ್, ವಿ. ಈ. ರಮೇಶ್, ಸುಚಿತ್ರ ಸುರೇಂದ್ರ, ವಿ. ಆರ್. ಕೃಷ್ಣ, ಡಾಲು. ವಿ.ವಿ, ವಿ.ಟಿ. ವೆಂಕಟೇಶ್, ವೇದಿಕೆಯ ಉಪಾಧ್ಯಕ್ಷ ಅಜಿತ್, ಕಾರ್ಯದರ್ಶಿ ಲವ, ಗೌರವ ಅಧ್ಯಕ್ಷ ಡಾಲು, ಖಜಾಂಚಿ ಕಿರಣ್, ಕ್ರೀಡಾ ಸಂಚಾಲಕರಾದ ನಿಖಿಲ್, ಜಗದೀಶ್, ಸಹ ಕಾರ್ಯದರ್ಶಿ ಮನು, ನಿರ್ದೇಶಕರು, ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗ ಸಮುದಾಯದವರು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಒಕ್ಕಲಿಗ ಸಮುದಾಯದವರು ಬೈಗೋಡ್ ಜಂಕ್ಷನ್‌ನಿAದ ಮೈದಾನದವರೆಗೆ ಸಾಂಪ್ರದಾಯಿಕ ಉಡುಪು ತೊಟ್ಟು ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದರು. ಮಹಿಳೆಯರು ಕಳಸದೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು. ದೀಪು ಪ್ರಾರ್ಥಿಸಿ, ಚಂದನ ಮಂಜುನಾಥ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

- ಚನ್ನನಾಯಕ