ಸುತ್ತಲು ಪ್ರಕೃತಿ ರಮಣೀಯ ಹಸಿರು ತಂಗಾಳಿ ಮಧ್ಯದಲ್ಲಿ ಹೂ ಗೊಂಚಲAತೆ ಮನೆಗಳ ಗುಂಪು. ಇಲ್ಲೊಂದು ಕುಟುಂಬವು ಪ್ರಕೃತಿಯ ಮಡಿಲಲ್ಲಿ ತಮ್ಮ ಸಂಸ್ಕೃತಿಯೊAದಿಗೆ ಬದುಕು ಕಟ್ಟಿಕೊಂಡು ಆಕಾಶದಲ್ಲಿ ಪಕ್ಷಿಗಳು ಶಾಂತವಾಗಿ ತೇಲುವಂತೆ ಬದುಕುತ್ತದೆ.

ಈ ಕುಟುಂಬದಲ್ಲಿರುವ ಸಂತೋಷ, ಪ್ರೀತಿ, ಹಿರಿಯರನ್ನು ಕಂಡಾಗ ಗೌರವ ಭಯ, ಜೊತೆಗೆ ಪ್ರಕೃತಿಯ ಸೌಮ್ಯ ಸೌಂದರ್ಯತೆ ಇವರ ಬದುಕಿಗೆ ಮತ್ತಷ್ಟು ಖುಷಿಯನ್ನು ನೀಡುತ್ತದೆ. ಕುಟುಂಬದ ಯಾವುದೇ ಸಮಸ್ಯೆ ಬಂದರೂ ಹಿರಿಯರ ಮೆದುಳಿನ ಶಕ್ತಿಯಿಂದ ಅದು ಕ್ಷಣಮಾತ್ರದಲ್ಲಿ ಮಂಜಿನAತೆ ಕರಗುತ್ತದೆ. ಈ ಕುಟುಂಬಗಳಲ್ಲಿ ಎಂತಹ ದೊಡ್ಡ ಸಮಸ್ಯೆ ಬಂದರೂ ಅದು ಸಮಸ್ಯೆ ಅಲ್ಲವೇ ಅಲ್ಲ. ಉದ್ವೇಗಕ್ಕೆ ಸ್ಥಳಾವಕಾಶವೇ ಇಲ್ಲ. ಇಂತಹ ಸ್ಥಳದಲ್ಲಿ ಸಂಸ್ಕೃತಿಯನ್ನು ಹೇಳಿ ಕಲಿಸಿಕೊಡುವ ಸಂದರ್ಭವಿಲ್ಲ. ಸೋಮೇಶ್ವರ ಶತಕ ಬರೆದ ಕವಿ ಪುಲಿಕೆರೆ (ಪುಲಿಗೆರೆ) ಸೋಮನಾಥರು ಹೇಳುವಂತೆ

"ಕೆಲವA ಬಲ್ಲವರಿಂದ ಕಲ್ತು"

"ಕೆಲವಂ ಮಾಳ್ಪವರಿಂದ ಕಂಡು"ಅAದರೆ

ಕೆಲವನ್ನು ಇತರರ ಆಚರಣೆಯಿಂದ ನೋಡಿ ಕಲಿಯಬೇಕು ಎಂದಿದ್ದಾರೆ. ಇದೆಲ್ಲವೂ ಸಿಗುವುದು ಕುಟುಂಬದಿAದ ಅದರಲ್ಲೂ ಅವಿಭಕ್ತ ಕುಟುಂಬದಿAದ ಯಾವುದೇ ಆರ್ಥಿಕ ಹೊರೆಯಿಲ್ಲದೆ ಸಂಪಾದಿಸಿಕೊಳ್ಳಬಹುದು.

ಇದೆಲ್ಲದಕ್ಕೂ ಪೂರಕವಾಗಿ ಇಂದು ಮೇ ೧೫ "ಅಂತರರಾಷ್ಟ್ರೀಯ ಕುಟುಂಬ ದಿನ"ವನ್ನು ಆಚರಿಸಲಾಗುತ್ತದೆ. ಈ ದಿನವನ್ನು ೧೯೯೩ ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಂ/ಖಇS/೪೭/೨೩೭ ನಿರ್ಣಯದೊಂದಿಗೆ ಘೋಷಿಸಿತು. ಅಂತರರಾಷ್ಟ್ರೀಯ ದಿನವು ಕುಟುಂಬಗಳಿಗೆ ಸಂಬAಧಿಸಿದ ಸಮಸ್ಯೆಗಳ ಕುರಿತು ಅರಿವು ಮೂಡಿಸಲು, ಸಾಮಾಜಿಕ, ಆರ್ಥಿಕ ಮತ್ತು ಜನಸಂಖ್ಯೆ ಜ್ಞಾನವನ್ನು ನೀಡಲು ಪ್ರತಿ ವರ್ಷ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂತರರಾಷ್ಟ್ರೀಯ ಕುಟುಂಬಗಳ ದಿನಕ್ಕೆ ಒಂದು ಥೀಮ್‌ನ್ನು ಘೋಷಿಸುತ್ತಾರೆ.

೨೦೨೬ ರ ಆಚರಣೆಯ ಥೀಮ್, "ಕುಟುಂಬಗಳು, ಅಸಮಾನತೆಗಳು ಮತ್ತು ಮಕ್ಕಳ ಯೋಗಕ್ಷೇಮ". ಅಸಮಾನತೆಗಳು ಕುಟುಂಬ ಜೀವನವನ್ನು ಹೇಗೆ ರೂಪಿಸುತ್ತವೆ. ಮಕ್ಕಳ ಭವಿಷ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ವಿವರಿಸುತ್ತದೆ.

ಕುಟುಂಬಗಳಲ್ಲಿ ಘಟಿಸುವ ಜಗಳ, ಕೋಪ, ಆಸ್ತಿ ವೈಷಮ್ಯ, ದಾಯಾದಿ ಕಲಹ ಮೊದಲಾದ ಅಸಮಾಧಾನಕರ ಘಟನೆಗಳು ಮಕ್ಕಳ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ಪ್ರತಿಯೊಂದು ಕುಟುಂಬವು ನೆನಪಿಟ್ಟುಕೊಳ್ಳಬೇಕು. ಇಂತಹ ಘಟನೆಗಳು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಭೀಕರ ಪ್ರಭಾವವನ್ನು ಬೀರಿ ಮಾನಸಿಕವಾಗಿ ದೈಹಿಕವಾಗಿ ಹಿಂಜರಿಯುವAತಹ ವಾತಾವರಣವನ್ನು ಸೃಷ್ಟಿಮಾಡುತ್ತದೆ. ಕುಟುಂಬದ ನೆನಪುಗಳು ಮಗುವಿನ ಮನಸ್ಸಿನ ಮೇಲೆ ಶಾಶ್ವತವಾಗಿ ಗಾಢವಾದ ಪ್ರಭಾವವನ್ನು ಬೀರುತ್ತದೆ. ಭರತ ಖಂಡದಲ್ಲಿ "ವಸುದೈವ ಕುಟುಂಬಕA" ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊAದರ ಮಹತ್ವವನ್ನು ಜಗತ್ತಿಗೆ ಸಾರುತ್ತದೆ. ಹೀಗೆ ಕುಟುಂಬಗಳನ್ನು ಗೌರವಿಸುವ ಸಮಾಜಕ್ಕೆ ಅವುಗಳ ಮಹತ್ವವನ್ನು ಸಾರುವುದಕ್ಕೆ ಈ ದಿನ.

'ಕುಟುಂಬ' ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ, ಅದು ಮಗುವಾಗಿರಲಿ ಅಥವಾ ವಯಸ್ಕರಾಗಿರಲಿ. ಕುಟುಂಬವು ನಮ್ಮ ಇಡೀ ಜೀವನವನ್ನು ನಿರ್ಮಿಸುವ ಅಡಿಪಾಯವಾಗಿದೆ. ನಮ್ಮನ್ನು ಪೋಷಿಸುವ ಮತ್ತು ಉನ್ನತ ಮಟ್ಟಕ್ಕೆ ಏರಿಸುವ, ನಮ್ಮನ್ನು ಅತ್ಯುತ್ತಮ ವ್ಯಕ್ತಿಯನ್ನಾಗಿ ಪರಿವರ್ತಿಸುವ, ಬೆಂಬಲಿಸುವ, ಭಾವನಾತ್ಮಕವಾಗಿ ಆರೋಗ್ಯಕರ ಕುಟುಂಬವನ್ನು ಹೊಂದಿದ್ದರೆ ಅದು ಅದೃಷ್ಟವಂತ ಕುಟುಂಬ.

ಕುಟುAಬ ಬಾಂಧವ್ಯ ಬೆಳೆಸಲು ಹಿರಿಯರಿಂದ ಪೂರ್ವಜರ ವಂಶಾವಳಿಯ ಕಥೆ, ದಾನ ಧರ್ಮಗಳನ್ನು ಮಾಡಿ ಉಲ್ಲೇಖಿತವಾಗಿರುವ ಸ್ಥಳ, ವೀರತನ, ಕೃಷಿ, ಸಮಾಜ ಸೇವೆ, ರಾಜಕೀಯ ಗಳಲ್ಲಿ ಪೂರ್ವಜರು ತೊಡಗಿಸಿಕೊಂಡಿದ್ದರೆ ಆ ಘಟನೆಗಳನ್ನು ಸಂಗ್ರಹಿಸಬಹುದು.

ಹಾಗೆಯೇ ತಮ್ಮ ಕುಟುಂಬದ ಹಳೆಯ ಛಾಯಾಚಿತ್ರಗಳನ್ನು ಸಂಗ್ರಹಿಸಿ ನೆನಪಿನಲ್ಲಿ ಉಳಿಯುವಂತೆ ಲೇಖನ ಮಾದರಿಯಲ್ಲಿ ಘಟನೆಗಳನ್ನು ನಮೂದಿಸಿ "ಕುಟುಂಬ ಸ್ಮರಣ ಸಂಚಿಕೆ"ಯನ್ನು ಸಂಶೋಧನಾತ್ಮಕವಾಗಿ ಮಾಡಿ ದಾಖಲಾಗಿ ಇಟ್ಟುಕೊಳ್ಳಬಹುದು.

ಕಥೆ, ನಗುವನ್ನು ಹಂಚಿಕೊಳ್ಳಲು ನೆನಪುಗಳನ್ನು ಸೃಷ್ಟಿಸಲು ಜೀವನವಿಡಿ ನೆನಪಿಡಲು ಸಹಕಾರಿ.

ಆಧುನಿಕ ಯುಗದಲ್ಲಿ ಗೆಳೆಯರೊಂದಿಗೆ ಹೊರ ಹೋಗುವುದು ಪಾರ್ಟಿಗಳನ್ನು ನಡೆಸುವುದು ಸಹಜ. ಆದರೆ ಕುಟುಂಬದವರೊAದಿಗೆ ಒಟ್ಟುಗೂಡಿ ಸಂಭ್ರಮಾಚರಣೆ ಮಾಡಲು ಸಂಬAಧಗಳನ್ನು ಗಟ್ಟಿ ಮಾಡಲು ಈ ದಿನವಿದೆ. ಕುಟುಂಬದಲ್ಲಿಯೇ ಪೂಜೆ ಸಹ ಭೋಜನಗಳನ್ನು ಏರ್ಪಡಿಸಬಹುದು. ಹಾಗೆಯೇ ಕುಟುಂಬದ ಬಂಧಗಳು ಎಲ್ಲಕ್ಕಿಂತ ಹೆಚ್ಚು ಬಲವಾದವು ಅವುಗಳನ್ನು ಯಾವಾಗಲೂ ಪಾಲಿಸುವುದು ಮುಖ್ಯ. ಮಕ್ಕಳೊಂದಿಗೆ ಮಕ್ಕಳಾಗಿಯೇ ಇರಲಿ, ಒಡಹುಟ್ಟಿದವರು ಪರಸ್ಪರ ಬಾಂಧವ್ಯ ಬೆಳೆಸಿಕೊಳ್ಳಲು ಅಜ್ಜ-ಅಜ್ಜಿಯರೊಂದಿಗಿದ್ದು ಸಮಯ ಕಳೆಯಲು ಕುಟುಂಬ ಸ್ವರ್ಗ ಸುಖವನ್ನು ನೀಡುತ್ತದೆ.

ನಮ್ಮ ಪ್ರೀತಿಯ ಕುಟುಂಬ ನಮ್ಮ ಸಮಾಜದ ಬೆನ್ನೆಲುಬು. ನಮ್ಮ ಪೂರ್ವಜರು, ಕುಟುಂಬದ ಬಗ್ಗೆ ತಿಳಿದುಕೊಳ್ಳಲು ರೋಮಾಂಚಕಾರಿಯದ ವಿಷಯಗಳನ್ನು ಗ್ರಹಿಸಲು ವಂಶಾವಳಿಯ ಸಂಶೋಧನೆಯು ಒಂದು ರೋಮಾಂಚಕಾರಿ ದಾಖಲೆಯಾಗುತ್ತದೆ. ತಂತ್ರಜ್ಞಾನದೊAದಿಗೆ ನಾವು ಬದುಕುತ್ತಿರುವುದರಿಂದ ವಾಟ್ಸಪ್ ಗ್ರೂಪ್ ಗಳನ್ನು ಮಾಡಿಕೊಳ್ಳುವುದು.

ಕುಟುಂಬ ವಂಶಾವಳಿ ಪಟ್ಟಿ (ವಂಶವೃಕ್ಷ) ಸಿದ್ಧಪಡಿಸಿ ಸಹೋದರತೆಯನ್ನು ಗಟ್ಟಿಗೊಳಿಸಿಕೊಂಡರೆ ಧೈರ್ಯ ಬಾಂಧವ್ಯ ಹೆಚ್ಚುತ್ತದೆ. ವಂಶಾವಳಿ ಪಟ್ಟಿಯಿಂದ ಆ ಕಾಲ, ಕಾಲಘಟ್ಟದ ಹಿರಿಯರ ಹೆಸರುಗಳು, ಅವರ ಸಾಧನೆ, ಹೊಂದಿದ್ದ ಹುದ್ದೆ, ಕೃಷಿ ಚಟುವಟಿಕೆಗಳು, ಪ್ರಕೃತಿ ವಿಸ್ಮಯಗಳು, ಪ್ರಕೃತಿ ವಿಕೋಪಗಳು, ಆಹಾರ ಪದ್ಧತಿ ಸಂಸ್ಕೃತಿ ಎಲ್ಲವನ್ನು ಅರಿತುಕೊಳ್ಳಲು ಸಂಪ್ರದಾಯವನ್ನು ಮುಂದುವರಿಸಲು ಯುವ ಪೀಳಿಗೆಗೆ ತುಂಬಾ ಸಹಕಾರಿಯಾಗುತ್ತದೆ.

ಕುಟುಂಬದಲ್ಲಿರುವ ಹೆಣ್ಣು ಮಕ್ಕಳಿಗೆ ಭದ್ರತೆ ಮತ್ತು ರಕ್ಷಣೆ ಸಿಗುತ್ತದೆ. ಹಬ್ಬ ಹರಿ ದಿನಗಳಲ್ಲಿ ಬಂದು ಸೇರಲು ಒಗ್ಗಟ್ಟಿನಿಂದ ಆಚರಿಸಲು ಹುಮ್ಮಸ್ಸು ಹೆಚ್ಚುತ್ತದೆ.

ವರ್ಷಕ್ಕೊಮ್ಮೆ ಕುಟುಂಬ ಕುಟುಂಬಗಳು ಸೇರಿ ಆಚರಿಸುವ ಆಟೋಟಗಳು, ಕ್ರೀಡೆ, ಟೂರ್ನಮೆಂಟ್‌ಗಳು ಹೆಣ್ಣು ಮಕ್ಕಳು ತವರೂರಿಗೆ, ಮನೆಗೆ ಬರಲು ಒಳ್ಳೆಯ ಅವಕಾಶ. ಸಮಾಜದ ಆಗು-ಹೋಗುಗಳ ಕುರಿತು ಚರ್ಚಿಸಲು, ಹಾಸ್ಯ, ಸ್ವಾರಸ್ಯಕರ ವಿಷಯಗಳ ಚರ್ಚೆ, ಪರಸ್ಪರ ಆರೋಗ್ಯಕರ ಕಾಲೆಳೆದು ಮಾತನಾಡುತ್ತಾ ಸಂತೋಷ ಪಡಲು ಅವಕಾಶವಾಗುತ್ತದೆ. ಸಹ ಭೋಜನದೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಸುವರ್ಣ ಅವಕಾಶ. ಸಣ್ಣ ಪುಟ್ಟ ಸಾಧನೆಗೂ ಮೆಚ್ಚುಗೆ ವ್ಯಕ್ತಪಡಿಸಲು ಒಳ್ಳೆಯ ವೇದಿಕೆ ವಾಟ್ಸಪ್ ಗ್ರೂಪ್. ಕುಟುಂಬದ ಸಂಬAಧಿಕರನ್ನು ಗುರುತಿಟ್ಟುಕೊಳ್ಳಲು ಮಗುವಿಗೆ ಬಾಲ್ಯದಿಂದಲೂ ಸಾಧ್ಯವಾಗುತ್ತದೆ.

ಹಿರಿಯರ ಮಾರ್ಗದರ್ಶನ ಒಡನಾಟ ಧೈರ್ಯ ಗೌರವ ನೀಡುವುದು ಸೇರಿದಂತೆ ಮನೆಯ ಸಂಸ್ಕೃತಿ ಅಭಿವೃದ್ಧಿಗೆ ಸಹಕಾರಿ.

ಕುಟುಂಬದ ಏಳಿಗೆಗೆ ಕೆಲಸವನ್ನು ಹಂಚಿಕೆ ಮಾಡಿಕೊಂಡು ಕುಟುಂಬವನ್ನು ಮುಂದೆ ತರಲು ಸಹಕಾರಿ. ತಿಳಿಯದಿರುವ ವಿಷಯಗಳನ್ನು ಚರ್ಚಿಸಿ ತಿಳಿದುಕೊಳ್ಳಬಹುದು ಶೈಕ್ಷಣಿಕ ವಿಷಯಗಳು ಆರ್ಥಿಕ ಪರಿಸ್ಥಿತಿಯ ಅವಲಂಬನೆಗೂ ಸಹಕಾರಿ.

ಅವಿಭಕ್ತ ಕುಟುಂಬವಿದ್ದರೆ ಕೃಷಿ ಕೆಲಸವನ್ನು ನಿರ್ವಹಿಸಿಕೊಳ್ಳಲು ಅತ್ಯುತ್ತಮವಾದ ಸಲಹೆ ಸೂಚನೆ ನೀಡುವ ವೇದಿಕೆಯಾಗುತ್ತದೆ. ಸಂಸ್ಕೃತಿ ಸಂಪ್ರದಾಯದ ಮೂಲ ಬೇರು ಕುಟುಂಬ.

ಕೊನೆಹನಿ : ಒಗ್ಗಟ್ಟಿನ ಕುಟುಂಬಕ್ಕೆ ಶಕುನಿಯ ಪ್ರವೇಶವನ್ನು ನಿಷೇಧಿಸಿದೆ.

-ಎಸ್.ಎಂ. ರಜನಿ,

ಉಪನ್ಯಾಸಕಿ

ಕಾವೇರಿ ಕಾಲೇಜು,

ಗೋಣಿಕೊಪ್ಪಲು.