ಮಡಿಕೇರಿ ಮೇ ೧೪: ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಾ. ೧೫ ರಂದು ನಗರದ ವಿವಿಧ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ವಾರ್ಡ್ ಸಂಖ್ಯೆ ೨೨ ಬ್ಲಾಕ್ ಸಂಖ್ಯೆ ೧೬ರಲ್ಲಿ ರೋಶ್ನಿ ಕಾವೇರಪ್ಪ ಅವರ ಮನೆಯ ಮುಂಭಾಗ ತಡಗೋಡೆ ಕಾಮಗಾರಿ, ವಾರ್ಡ್ ಸಂಖ್ಯೆ ೧೫ ಬ್ಲಾಕ್ ಸಂಖ್ಯೆ ೧೩ ರಲ್ಲಿ ರೆಡ್ ಫರ್ನ್ ಬಳಿ ತಡಗೋಡೆ ನಿರ್ಮಾಣ, ಕ್ರಿಸ್ಟಲ್ ಹಾಲ್ ಮುಂಭಾಗ ಹಾದು ಹೋಗುವ ರಸ್ತೆ ಅಭಿವೃದ್ಧಿ, ಕೊಡವ ರುದ್ರಭೂಮಿಗೆ ಹೋಗುವ ರಸ್ತೆ, ಗೌಡ ಸಮಾಜದಿಂದ ಚೈನ್‌ಗೇಟ್ ರಸ್ತೆ, ಜೂನಿಯರ್ ಕಾಲೇಜ್‌ನಿಂದ ಮೇಲಿನ ಗೌಡಸಮಾಜ ರಸ್ತೆ, ಸಂಪಿಗೆಕಟ್ಟೆಯಿAದ ಮಹದೇವಪೇಟೆ ರಸ್ತೆ, ಅಬ್ಬಿಫಾಲ್ಸ್ ರಸ್ತೆ, ಸಂತ ಜೋಸೆಫರ ಶಾಲೆಗೆ ಹೋಗುವ ರಸ್ತೆ, ಗ್ರಾಮಾಂತರ ಠಾಣೆ ಮುಂಭಾಗ ಮೋರಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಬೆಳಿಗ್ಗೆ ೯ ಗಂಟೆಗೆ ರಾಜಾಸೀಟು ಬಳಿಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ.