ಮಡಿಕೇರಿ, ಮೇ. ೧೪: ಈ ಬಾರಿಯ ಐ.ಸಿ.ಎಸ್.ಸಿ ಪಠ್ಯಕ್ರಮದ ೧೦ನೇ ತರಗತಿ ಪರೀಕ್ಷೆಯಲ್ಲಿ ಗೋಣಿಕೊಪ್ಪ ಕಾಪ್ಸ್ ಶಾಲೆಯ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ.

ಶಾಲೆಗೆ ಶೇ.೧೦೦ ಫಲಿತಾಂಶ ಬಂದಿದ್ದು, ಸತತ ೨೮ ವರ್ಷಗಳಿಂದ ಈ ಸಾಧನೆ ಆಗಿದೆ. ವಿದ್ಯಾರ್ಥಿ ಪಿ.ಎಚ್ ಅಧೃತ್ ಶರ್ಮಾ ಶೇ.೯೮.೨ ಪಡೆದು ಶಾಲೆಗೆ ಮೊದಲ ಸ್ಥಾನ ಗೈದಿದ್ದಾರೆ ಹಾಗೂ ಕೊಡಗು ಜಿಲ್ಲೆಗೂ ಮೊಲದ ರ‍್ಯಾಂಕ್ ಪಡೆದಿದ್ದಾರೆ. ಶಾಲೆಯ ಧನ್ವಂತ್ ಪಿ ಪಾಟಿಲ್ ಶೇ.೯೭.೮ ಹಾಗೂ ಅನರ್ಗ್ಯ ಎ ಒಲೇಟಿ ಅವರು ಶೇ.೯೭.೭೦ ಪಡೆದುಕೊಂಡಿದ್ದಾರೆ.

ಶಾಲೆಯ ಒಟ್ಟು ೧೦೨ ವಿದ್ಯಾರ್ಥಿಗಳ ಪೈಕಿ ೭೭ ಮಂದಿ ಡಿಸ್ಟಿಂಕ್ಷನ್, ಪಡೆದುಕೊಂಡಿದ್ದಾರೆ. ೨೯ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳಿಸಿದ್ದಾರೆ.