ವೀರಾಜಪೇಟೆ, ಮೇ ೧೪: ವೀರಾಜಪೇಟೆಯ ಮಗ್ಗುಲದಲ್ಲಿರುವ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೊಡಗಿನಲ್ಲಿ ಸುಸ್ಥಿರ ಉದ್ಯಮಶೀಲತೆಗಾಗಿ ನೀಡಲಾಗುವ ಕಂಜಿತAಡ ರಾಣಿ ಅಯ್ಯಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಸುನಿಲ್ ಮುದ್ದಯ್ಯ ಅವರು, ಸುಸ್ಥಿರ ಉದ್ಯಮಶೀಲತೆಗಾಗಿ ನೀಡುವ ರಾಣಿ ಅಯ್ಯಪ್ಪ ಪ್ರಶಸ್ತಿಯು ಒಂದು ವಿಶಿಷ್ಟ ಗೌರವವಾಗಿದ್ದು, ಅವÀರ ಹೆಸರಿನ ಮೌಲ್ಯ ಮತ್ತು ಪರಂಪರೆಯನ್ನು ಪ್ರತಿಬಿಂಬಿಸಲಾಗುತ್ತಿದೆ. ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಸುಸ್ಥಿರತೆಗಾಗಿ ಜಗತ್ತು ಇಂದು ಹೋರಾಡುತ್ತಿದೆ. ಸುಸ್ಥಿರ ಕೃಷಿಯು ಮುಂದಕ್ಕೆ ಒಂದು ಪ್ರಮುಖ ಮಾರ್ಗವನ್ನು ನೀಡುತ್ತದೆ. ಪರಿಸರವನ್ನು ರೂಪಿಸುವಲ್ಲಿ ನವೀನ ಅವಕಾಶಗಳೊಂದಿಗೆ ಯುವ ಜನಾಂಗವನ್ನು ಕೃಷಿಯತ್ತ ಸೆಳೆಯಬೇಕು. ಈ ನಿಟ್ಟಿನಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿದೆ ಎಂದರು.

ಕೊಡಗಿನಲ್ಲಿ ಸುಸ್ಥಿರ ಉದ್ಯಮಶೀಲತೆಗಾಗಿ ಉದ್ಯಮಗಳ ಮೂಲಕ ಸುಸ್ಥಿರತೆಯನ್ನು ಹೆಚ್ಚಿಸಲು ಬದ್ಧರಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇದ್ದಲ್ಲಿ ಅಂತವರನ್ನು ಗುರುತಿಸಿ ಗೌರವಿಸಲಾಗುತ್ತದೆ. ಇದು ಭವಿಷ್ಯದ ಪೀಳಿಗೆಗೂ ಮಾದರಿಯಾಗಲಿದೆ. ರಾಣಿ ಅಯ್ಯಪ್ಪ ಅವರು ಕೊಡಗಿನ ಪರಿಸರದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದವರಾಗಿದ್ದು, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಅಪಾರ ಪ್ರಮಾಣದ ಸಾಮಾಜಿಕ ಭದ್ದತೆಯನ್ನು ಹೊಂದಿದ್ದ ಅವರು ಕೃಷಿಯಲ್ಲಿ ತೊಡಗಿಸಿಕೊಂಡ ಯುವ ಪೀಳಿಗೆ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭ ರಾಣಿ ಅಯ್ಯಪ್ಪ ಪ್ರಶಸ್ತಿ-೨೦೨೬ನ್ನು ಜೇನು ಕೃಷಿಯಲ್ಲಿ ಸಾಧನೆ ತೋರಿದ ನಡಿಕೇರಿಯಂಡ ಸುಬ್ಬಯ್ಯ ಅವರಿಗೆ ಪ್ರದಾನ ಮಾಡಲಾಯಿತು. ಕಂಜಿತAಡ ಅಯ್ಯಪ್ಪ, ಕೊಡಗು ದಂತ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯವರು, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಇದ್ದರು.