ಚೆಯ್ಯಂಡಾಣೆ, ಮೇ ೧೪: ಸ್ಥಳೀಯ ಎಡ ಪಾಲದಿಂದ ಹಜ್ಗೆ ತೆರಳುವ ಕಾರ್ಯಕರ್ತರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ಆಯೋಜಿಸಲಾಗಿತ್ತು.
ಸಮಸ್ತ ಕೇಂದ್ರ ಮುಷಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ನಾಇಬ್ ಖಾಝಿಗಳಾದ ಶೈಖುನಾ ಎಂ.ಎA.ಅಬ್ದುಲ್ಲಾ ಪೈಝಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಬ್ದುಲ್ ಖಾದರ್ ಪೈಝಿ ಉದ್ಘಾಟಿಸಿದರು. ಎಡಪಾಲ ಪೋಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಎ.ಬಶೀರ್ ಹಾಜಿ,ಜಲೀಲ್ ದಾರಿಮಿ ಹಿತನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಹಜ್ ಯಾತ್ರೆ ಕೈಗೊಂಡ ಅಬೂಬಕ್ಕರ್ ಮುಸ್ಲಿಯಾರ್, ಅಬ್ದುಲ್ ಸಲಾಂ ಪೈಝಿ, ಈಶ ಕುಪ್ಪೋಡಂಡ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪೋಯಾಪಳ್ಳಿ ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಕೆ.ಇ.ಮಹಮ್ಮದ್, ಎಸ್ವೈಎಸ್ ಮತ್ತು ಎಸ್ಕೆಎಸ್ಎಸ್ಎಫ್ ಸದಸ್ಯರು ಉಪಸ್ಥಿತರಿದ್ದರು. ಹಾರಿಸ್ ದಾರಿಮಿ ಕುರಿಕಡೆ ಸ್ವಾಗತಿಸಿ, ಹಾರಿಸ್ ಭಾಖವಿ ಕುಪ್ಪೋಡಂಡ ವಂದಿಸಿದರು.