ಕೂಡಿಗೆ, ಮೇ. ೧೩: ಕೂಡಿಗೆ ಗ್ರಾಮ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳು ಸೇರಿದಂತೆ ಘಟಕದ ಕೇಂದ್ರದಲ್ಲಿರುವ ಹಳೆಯ ಪಾರಂಪರಿಕ ಕಸ ವಿಲೇವಾರಿಗೆ ಸಂಬAಧಿಸಿದAತ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ರೂ ೩.೫೦ ಕೋಟಿ ವೆಚ್ಚದಲ್ಲಿ ಹಳೆಯ ಕಸವನ್ನು ವಿಲೇವಾರಿ ಮಾಡುವ ಕಾರ್ಯದ ಪ್ರಥಮ ಹಂತ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ ಸದ್ಯದಲ್ಲಿ ಇದು ಕಾರ್ಯಾರಂಭಗೊಳ್ಳಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭುವನಗಿರಿ ಕಸ ವಿಲೇವಾರಿ ಘಟಕದ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ತಿಳಿಸಿದರು.

ಕಳೆದ ೧೫ ವರ್ಷಗಳಿಂದಲೂ ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮಸ್ಥರಿಗೆ ತೊಂದರೆ ಎದುರಾಗುತ್ತಿತ್ತು. ಈ ಬಗ್ಗೆ ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿ ಘಟಕದ ಕೇಂದ್ರದಲ್ಲಿ ಕಸ ವಿಲೇವಾರಿಗೆ ಸಂಬAಧಿಸಿದAತೆ ನಗರ ಪ್ರದೇಶಗಳಲ್ಲಿ ಅಳವಡಿಕೆ ಮಾಡಿರುವಂತೆ ಆಧುನಿಕ ತಂತ್ರಜ್ಞಾನದ ನೂತನ ಯಂತ್ರಗಳ ಬಳಕೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಮತ್ತು ಆರೋಗ್ಯ ಅಧಿಕಾರಿ ಉದಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಸ ವಿಲೇವಾರಿ ಕಾಮಗಾರಿ ಜಿಲ್ಲಾಧಿಕಾರಿ ಸೂಚನೆಯಂತೆ ಟೆಂಡರ್ ಪ್ರಕ್ರಿಯೆ ನಡೆದು ಚಾಲನೆಗೊಂಡಿದೆ. ಭುವನಗಿರಿ ಕಸ ವಿಲೇವಾರಿ ಘಟಕದಲ್ಲಿ ಟೆಂಡರ್ ಪಡೆದ ಗುತ್ತಿಗೆದಾರ ನೂತನ ಯಂತ್ರಗಳ ಅಳವಡಿಕೆಗೆ ಸಂಬAಧಿಸಿದAತೆ ಬೃಹತ್ ಯಂತ್ರಗಳನ್ನು ರಾಜ್ಯ ಮತ್ತು ಹೊರ ರಾಜ್ಯಗಳಿಂದ ತಂದು ಅಳವಡಿಕೆ ಮಾಡಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿ ಕಾರ್ಯಾರಂಭಕ್ಕೆ ಸಂಬAಧಿಸಿದAತೆ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಅಲ್ಲದೆ ರೂ. ೭೫ ಲಕ್ಷದಲ್ಲಿ ೪ ನೂತನ ಕಸ ವಿಲೇವಾರಿ ಯಂತ್ರಗಳು ಮತ್ತು ೩೩ ಲಕ್ಷ ವೆಚ್ಚದಲ್ಲಿ ಅದಕ್ಕೆ ಸಂಬAಧಿಸಿದ ಕಸ ಜಾರಣಿ ಮತ್ತು ಹಸಿಕಸ, ಒಣಕಸ, ಮತ್ತು ಪ್ಲಾಸ್ಟಿಕ್‌ಗಳು ವಿಭಾಗವಾಗಲು ಸೇರಿದಂತೆ ನೂತನ ತಂತ್ರಜ್ಞಾನದ ಹಲವಾರು ಯಂತ್ರಗಳ ಅಳವಡಿಕೆ ಮತ್ತು ಯಾವುದೇ ರೀತಿಯ ದುರ್ವಾಸನೆ ಬಾರದ ಹಾಗೆ ಕೈಗೊಳ್ಳುವ ವಿವಿಧ ಯಂತ್ರಗಳ ಅಳವಡಿಕೆಯ ಕಾರ್ಯವು ಘಟಕದಲ್ಲಿ ನಡೆಯುತ್ತಿದೆ. ಕುಶಾಲನಗರ ಪುರಸಭೆಯ ಕಾರ್ಮಿಕ ವೃಂದದವರಿಗೆ ಅದಕ್ಕೆ ಸಂಬAಧಿಸಿದ ತರಬೇತಿಯನ್ನು ಬೆಂಗಳೂರು ಸೇರಿದಂತೆ ವಿವಿಧೆಡೆ ನೀಡಲಾಗಿದೆ. ಇದರಿಂದಾಗಿ ಬಹುದಿನಗಳ ಬೇಡಿಕೆಯಾಗಿದ್ದ ಘಟಕದ ಸಮೀಪದಲ್ಲಿರುವ ಗ್ರಾಮಗಳ ರೈತರ ಮತ್ತು ಗ್ರಾಮಸ್ಥರ ಮನವಿಗೆ ಶಾಶ್ವತ ಪರಿಹಾರ ಸಿಗುವಂತಾಗುತ್ತಿದೆ.

ಹಳೆಯ ಕಸವನ್ನು ಸಂಪೂರ್ಣವಾಗಿ ಘಟಕದಿಂದ ತೆಗೆದು ಅದರಲ್ಲಿರುವ ಪ್ಲಾಸ್ಟಿಕ್, ಒಣಕಸ, ಸೇರಿದಂತೆ ಬೇರೆ-ಬೇರೆ ಹಂತಗಳಲ್ಲಿ ವಿಭಾಗ ಮಾಡಿ ಸಿಮೆಂಟ್ ಕಾರ್ಖಾನೆಗೆ ಕಳುಹಿಸುವ ವ್ಯವಸ್ಥೆ ಕೆಲಸ ಸೇರಿದಂತೆ ಘಟಕದ ಅಭಿವೃದ್ಧಿಗೆ ಪೂರಕವಾದ ಕಾಮಗಾರಿಗಳನ್ನು ಕೈಗೊ ಳ್ಳಲು ಕಾರ್ಯ ನಡೆಯುತ್ತಿದೆ ಎಂದು ನಿರ್ವಹಣೆ ಮಾಡುವ ಆರೋಗ್ಯ ಅಧಿಕಾರಿ ಉದಯ್ ಕುಮಾರ್ ತಿಳಿಸಿದ್ದಾರೆ.

ಇದರ ಜೊತೆಯಲ್ಲಿ ಕುಶಾಲನಗರ ರೋಟರಿ ಕ್ಲಬ್‌ನ ೫೦ ವರ್ಷದ ಸಂಭ್ರಮ ಆಚರಣೆ ಅಂಗವಾಗಿ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ಎಸ್.ಎಲ್.ಎನ್. ಘಟಕದ ಸಿ.ಎಸ್.ಆರ್. ಸಾರ್ವಜನಿಕ ಸೇವಾ ನಿಧಿಯ ಹಣ ರೂ. ೨೦ ಲಕ್ಷ ವೆಚ್ಚದಲ್ಲಿ ಘಟಕದ ಕೇಂದ್ರದಲ್ಲಿ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲು ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಯಂತ್ರವನ್ನು ಅಳವಡಿಕೆ ಮಾಡಲಾಗಿದೆ.

ಕುಶಾಲನಗರ ಪುರಸಭೆ ವ್ಯಾಪ್ತಿಯು ಕಸ ವಿಲೇವಾರಿ ಕೇಂದ್ರವಾದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ನೂತನ ತಂತ್ರಜ್ಞಾನದ ಯಂತ್ರಗಳ ಅಳವಡಿಕೆ ಮೂಲಕ ಸಮರ್ಪಕವಾಗಿ ಕಸ ವಿಲೇವಾರಿ ಮತ್ತು ಯಾವುದೇ ರೀತಿಯಲ್ಲಿ ಸ್ಥಳೀಯರಿಗೆ ಅನಾನುಕೂಲಗಳು ಆಗದಂತೆ ಪುರಸಭೆ ವತಿಯಿಂದ ಸಮಗ್ರವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ಮಾಹಿತಿ ನೀಡಿದ್ದಾರೆ.