ಸುAಟಿಕೊಪ್ಪ, ಮೇ. ೧೩: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ೪ ದಿನಗಳ ಕಾಲ ನೆರವೇರಿತು.

ತಾ. ೧೦ ರಂದು ಮೈಸೂರು ಧರ್ಮಾಧ್ಯಕ್ಷರಿಂದ ವಿಶೇಷ ಆಡಂಬರ ಗಾಯನ ಬಲಿಪೂಜೆಯೊಂದಿಗೆ ಸಂತ ಅಂತೋಣಿಯವರ ತೇರಿನ ಮೆರವಣಿಗೆಯೊಂದಿಗೆ ಉತ್ಸವ ಸಂಪನ್ನಗೊAಡಿತು.

ದೇವಾಲಯದ ಧರ್ಮಗುರುಗಳು ಹಾಗೂ ಭಕ್ತಾದಿಗಳು ಕನ್ನಡ ವೃತ್ತದಲ್ಲಿ ಮೈಸೂರು ಧರ್ಮಕ್ಷೇತ್ರದ ಮೈಸೂರು ಧರ್ಮಕ್ಷೇತ್ರ ಧರ್ಮಾಧ್ಯಕ್ಷರಾದ ಡಾ. ಎಸ್.ಜೆ. ಫ್ರಾನ್ಸಿಸ್ ಸೆರಾವೋ ಅವರನ್ನು ಸ್ವಾಗತಿಸಿ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಕರೆದೊಯ್ಯಲಾಯಿತು. ಫ್ರಾನ್ಸಿಸ್ ಸೆರಾವೋ ಹಬ್ಬದ ಆಡಂಬರ ಗಾಯನ ದಿವ್ಯ ಬಲಿಪೂಜೆಯನ್ನು ಮಡಿಕೇರಿ ವಲಯದ ಶೇಷ್ಠ ಗುರುಗಳಾದ ಜಾರ್ಜ್ ದೀಪಕ್, ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ವಲಯದ ಶ್ರೇಷ್ಠ ಧರ್ಮ ಗುರುಗಳಾದ ಜೇಮ್ಸ್ ಡೋಮಿನಿಕ್ ಅವರೊಂದಿಗೆ ನೇರವೇರಿಸಿದರು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಒಳಾಂಗಣವನ್ನು ಬಣ್ಣ ಹೂಗಳು, ಬಂಟಿಗ್ಸ್ ಹಾಗೂ ಹೊರಾಂಗಣವನ್ನು ವಿದ್ಯುತ್ ದೀಪಾಗಳಿಂದ ಅಲಂಕಾರಿಸಲಾಗಿತ್ತು. ಹಟ್ಟಿಹೊಳೆ ದೇವಾಲಯದ ಧರ್ಮಗರುಗಳಾದ ಗಿಲ್ಬರ್ಟ್ ಡಿಸಿಲ್ವ, ಕೂಡಿಗೆ ಚಾರ್ಲ್ಸ್ ನರೋನ, ಪೌಲ್ ಹೇರ್ಸ, ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ರೇ. ಪಾ. ಅವಿನಾಶ್, ರಾಯಲ್ ಕ್ರಾಸ್ತಾ, ಹ್ಯಾರಿಟೇರಿ, ಆರ್ಜಿ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಎನ್.ಟಿ.ಜೋಸೆಫ್, ಆಮ್ಮತಿ ಸಂತ ಅಂತೋಣಿ ದೇವಾಲಯದ ಮದಲೈಮುತು,ಪುಷ್ಪಗೀರಿ ಬಾಲ ಯೇಸು ದೇವಾಲಯದ ಮರಿಯನ್ ಕ್ಸೇವಿಯರ್, ರೇ.ಪಾ.ಚಾಲ್ಸ್ ಹಾಗೂ ಸಂತ ಅಂತೋಣಿ ದೇವಾಲಯದ ಫಾಧರ್ ವಿಜಯಕುಮಾರ್ ಮತ್ತಿತರರು ಇದ್ದರು.

ಅಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತ ಅಂತೋಣಿಯವರ ಪ್ರತಿಮೆಯನ್ನು ಇರಿಸಿ ಬ್ಯಾಂಡ್‌ಸೆಟ್ ಹಾಗೂ ಕೇರಳ ಚಂಡೆಯೊAದಿಗೆ ಕ್ರೆöÊಸ್ತ ಬಾಂದವರು ಪ್ರಾರ್ಥನೆ ಹಾಗೂ ಭಕ್ತಿ ಗಾಯನಗಳನ್ನು ಹಾಡುತ್ತ, ಮೊಂಬತ್ತಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು. ನಂತರ ದೇವಾಲಯದಲ್ಲಿ ಪರಮ ಪ್ರಸಾದ ಆರಾಧನೆ ಹಾಗೂ ಆರ್ಶಿವಚನದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊAಡಿತು.