ವೀರಾಜಪೇಟೆ, ಮೇ. ೧೩: ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ದಕ್ಷಿಣಾ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಕರಗ ಮಹೋತ್ಸವವು ಶ್ರದ್ದಾಭಕ್ತಿಯಿಂದ ನಡೆದು ಸಂಪನ್ನಗೊAಡಿತ್ತು. ಐದು ದಿನಗಳ ಕಾಲ ಕರಗ ಮಹೋತ್ಸವವು ಶ್ರೀ ಮಾರಿಯಮ್ಮ ದೇವಿಯ ವಿವಿಧ ಆರಾಧನೆಗಳೊಂದಿಗೆ ನಡೆಯಿತು.
ಮೊದಲ ದಿನ ಕರಗ ಆರಾಧನೆ ನಡೆದು ಪೇಟೆ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಭಕ್ತರು ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಕರಗ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಐದು ದಿನಗಳು ನಂದಾ ದೀಪಾರತಿ, ದೇವಿಯ ಮಹಾಪೂಜೆ ದೇವಿಯ ವಿಶೇಷ ಅಲಂಕಾರ ಪೂಜೆ ಮತ್ತು ಮಹಾಪೂಜೆ ಸರ್ವ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು.
ಕೊನೆಯ ದಿನ ಕರಗ ವಿಸರ್ಜನಾರಾಧನೆ ಹಾಗೂ ದೇವಿಯ ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ ನಡೆದು ವಾರ್ಷಿಕ ಕರಗ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು, ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿದ ಭಕ್ತರು ಹಾಜರಿದ್ದು ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು.