ಕಳೆದ ಕೆಲವು ವರ್ಷಗಳಿಂದ ಸಮಾಜದಲ್ಲಿನ ಪರಿಸ್ಥಿತಿಯನ್ನು ನೋಡಿ ಈ ಲೇಖನ ಬರೆಯುತ್ತಿದ್ದೇನೆ. ಈಗ ಶಾಲೆಗೆ ಸರಿಯಾಗಿ ಮಕ್ಕಳು ಅಲ್ಲ ಪೋಷಕರ ಆರ್ಥಿಕ ಪರಿಸ್ಥಿತಿಗೆ ಸರಿಯಾಗಿ ಶಾಲೆ ಎಂಬ ಪರಿಸ್ಥಿತಿ ಬೆಳೆದಿದ್ದು ದೇಶದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ಕಾಣೆಯಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ದುರಂತ. ಸ್ವತಂತ್ರ ಸಿಕ್ಕಿದ ನಂತರ ದೇಶದಲ್ಲಿ ಸರ್ಕಾರ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳು ಆರಂಭವಾಯಿತು. ಇವುಗಳು ಸೇವಾ ಮನೋಭಾವ ಹೊಂದಿದ್ದು ಎಲ್ಲರಿಗೂ ಮುಕ್ತ ಅವಕಾಶ ಇತ್ತು. ಯಾವಾಗ ರಾಜಕಾರಣಿಗಳು ಹಾಗೂ ಸ್ವಾಮೀಜಿಗಳು, ಮಠಾಧೀಶರು ವಿದ್ಯಾಸಂಸ್ಥೆಗಳನ್ನು ಆರಂಭ ಮಾಡಿದರೋ ವಿದ್ಯಾಕ್ಷೇತ್ರದಲ್ಲಿ ಕ್ರಾಂತಿ ಆರಂಭವಾಯಿತು. ಆದರೆ ಇಲ್ಲಿ ವಿದ್ಯೆಗಿಂತ ಹಣ ಮತ್ತು ಜಾತಿ ಮುಖ್ಯವಾಯಿತು. ದೇಶದ ೫೦% ರಷ್ಟು ವಿದ್ಯಾಸಂಸ್ಥೆಗಳ ಪ್ರವೇಶ ನಿರ್ಧಾರವಾಗುವುದು ವಿದ್ಯಾರ್ಥಿಗಳ ಬುದ್ದಿವಂತಿಕೆಯಿAದ ಅಲ್ಲ ಪೋಷಕರು ನೀಡುವ ಹಣದಿಂದ. ಜಾತಿ ಹೆಸರಲ್ಲಿ ನಿಮ್ಮಲ್ಲಿ ಒಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ. ವಿದ್ಯಾಸಂಸ್ಥೆಗಳ ಶೈಕ್ಷಣಿಕ ಸಾಧನೆ ಇರುವುದಕ್ಕೆ ಜನ ಅಂತ ವಿದ್ಯಾಸಂಸ್ಥೆ ಗಳಿಗೆ ಹಣ ಕೊಟ್ಟು ತಮ್ಮ ಮಕ್ಕಳನ್ನು ಸೇರಿಸುವುದು ಅಂತ ನಿಮ್ಮ ಊಹೆ ಆಗಿದ್ದರೆ ತಪ್ಪು. ಇಲ್ಲಿ ಜಟಕಾ ಓಡಿಸುವ ಕುದುರೆ ಕಣ್ಣಿಗೆ ಒಂದು ಪಟ್ಟಿ ಕಟ್ಟಿರುತ್ತಾರೆ. ಹಾಗೆ ಇಲ್ಲಿ ಮಕ್ಕಳ ತಲೆ ಒಳಗೆ ಅಂಕವೆAಬ ಹುಳ ಬಿಟ್ಟು ಅವನನ್ನು ಅಂಕ ತೆಗೆಯುವ ಕೀಲು ಗೊಂಬೆಗಳಾಗಿ ಮಾಡಿ ಬಿಟ್ಟಿರುತ್ತಾರೆ ಅಷ್ಟೇ. ಅವರ ಮೇಲೆ ಒಂದು ಕಡೆ ವಿದ್ಯಾಸಂಸ್ಥೆಯಲ್ಲಿ ಟೀಚರ್ಗಳು, ಮನೆಯಲ್ಲಿ ಪೋಷಕರು ಒತ್ತಡ ಹೇರಿ ಅಂಕ ತೆಗೆಯುವಂತೆ ಮಾಡುತ್ತಾರೆ. ಇನ್ನು ಪೋಷಕರ ಮೀಟಿಂಗ್ನಲ್ಲಿ ವಿದ್ಯಾರ್ಥಿಗಳ ಸಾಧನೆ ಸ್ವಲ್ಪ ಕಡಿಮೆ ಯಾದರೂ ಪೋಷಕರನ್ನು ಜಾಲಾಡಿಸಿ ಬಿಡುತ್ತಾರೆ. ದುಡ್ಡು ಕೊಟ್ಟು ನಾವೇ ಉಗಿಸಿಕೊಳ್ಳುವುದು. ಇಂಥ ವಿದ್ಯಾಸಂಸ್ಥೆಗಳಿAದ ನಾವು ಏನನ್ನು ನಿರೀಕ್ಷೆಮಾಡಬಹುದು. ಏಕೆಂದರೆ ಇಲ್ಲಿ ಎಂಥ ವಿದ್ಯಾರ್ಥಿಗಳು ಇದ್ದಾರೆ ಅಂದರೆ ಅವರಿಗೆ ದೇಶದ ಪ್ರಧಾನಿ ಯಾರು ಅಂತ ಕೇಳಿದರೆ ಗೊತ್ತಿರುವುದಿಲ್ಲ. ಅಂತ ಬುದ್ದಿವಂತರನ್ನು ಸಮಾಜದಲ್ಲಿ ನಾವು ಕಾಣಬಹುದು. ಇಂತಹ ಪರಿಸ್ಥಿತಿಗೆ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ವಿದ್ಯಾಸಂಸ್ಥೆಗಳೇ ಕಾರಣ. ಬದುಕಲು ವಿದ್ಯಾಭ್ಯಾಸ ಮುಖ್ಯ ಅಲ್ಲ. ಜೀವನವನ್ನು ರೂಪಿಸಿಕೊಳ್ಳಲು ವಿದ್ಯಾಭ್ಯಾಸದೊಡನೆ ಪ್ರಪಂಚದ ಅಥವಾ ಸಾಮಾನ್ಯಜ್ಞಾನ ಬಹಳ ಮುಖ್ಯ. ನಾವು ಹೇಗೆ ಬೇಕಾದರೂ ಬದುಕಬಹುದು. ಆದರೆ ಒಂದು ಶಿಸ್ತುಬದ್ದ ಜೀವನ ನಡೆಸಲು ವಿದ್ಯಾಭ್ಯಾಸದ ಜೊತೆಗೆ ಪ್ರಪಂಚದ ಜ್ಞಾನದ ಅವಶ್ಯಕತೆ ಇದೆ. ಇದನ್ನು ಪುರಾತನ ಕಾಲದಿಂದಲೂ ನಾವು ಇತಿಹಾಸವನ್ನು ಅವಲೋಕನ ಮಾಡಿದರೆ ನಮಗೆ ಅರಿವಾಗುತ್ತದೆ. ಅಂದು ಗುರುಕುಲಗಳಿತ್ತು ಅಲ್ಲಿ. ಆದರೆ ಅದು ಕೆಲವು ವರ್ಗಕ್ಕೆ ಸೀಮಿತವಾಗಿತ್ತು. ಅಂದು ವಿದ್ಯಾಭ್ಯಾಸ ಅಂದರೆ ಯುದ್ಧಕ್ಕೆ ಪೂರಕವಾದ ಹಾಗೂ ಸಾಹಿತ್ಯಕ್ಕೆ ಅದು ಕೂಡ ಕೆಲವು ವರ್ಗಗಳಿಗೆ ಸೀಮಿತವಾಗಿತ್ತು. ನಂತರದ ದಿನಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ಅವರ ಗುಮಾಸ್ತ ಕೆಲಸಕ್ಕೆ ಸೀಮಿತವಾದ ವಿದ್ಯಾಭ್ಯಾಸ ಮಾತ್ರ ಭಾರತೀಯರಿಗೆ ಕಲಿಸತೊಡಗಿದರು. ಇಂದಿಗೂ ಅದೇ ಪದ್ಧತಿ ನಡೆದುಕೊಂಡು ಬಂದಿದೆ. ಸ್ವತಂತ್ರಾö್ಯ ನಂತರ ವಿದ್ಯಾಕ್ಷೇತ್ರಕ್ಕೆ ಪ್ರಾಧಾನ್ಯತೆ ಸಿಗತೊಡಗಿತು. ಆದರೂ ಜಾತಿ ಎಂಬ ಕರಿನೆರಳು ಅದಕ್ಕೆ ಆಂಟಿಕೊAಡಿತ್ತು. ಈಗ ಅದು ಹಣ ಎಂಬ ಜಾಲಕ್ಕೆ ಬದಲಾವಣೆಗೊಂಡಿದೆ.
ಸ್ವತಂತ್ರಾö್ಯ ನಂತರ ನಮ್ಮ ಹಿರಿಯರ ಮುಂದಾಲೋಚನೆಯಿAದಾಗಿ ಅನೇಕ ದಾನಿಗಳು ಸರಕಾರದ ಜೊತೆ ಕೈಜೋಡಿಸಿ ಅನೇಕ ವಿದ್ಯಾಸಂಸ್ಥೆಗಳ ನಿರ್ಮಾಣ ಮಾಡಿದರು. ಅಂತಹ ವಿದ್ಯಾಸಂಸ್ಥೆಗಳು ಮಧ್ಯಮ ಮತ್ತು ಬಡವರಿಗೆ ಬಹು ಉಪಕಾರವಾಯಿತು. ಈ ವ್ಯವಸ್ಥೆಯಲ್ಲಿ ಶಿಸ್ತು ಹಾಗೂ ಶಿಕ್ಷಕರ ಮೇಲೆ ಭಯ ಭಕ್ತಿ ಎರಡು ಇತ್ತು. ಆ ಕಾಲದಲ್ಲಿ ಶಿಕ್ಷಕರಿಗಿಂತ ಅವರ ಬೆತ್ತಗಳೇ ಜಾಸ್ತಿ ಮಾತನಾಡುತ್ತಿದ್ದವು. ಅಂದು ಮನೆ ತುಂಬಾ ಮಕ್ಕಳು. ಕಷ್ಟದಲ್ಲಿ ಇದ್ದರೂ ಮಕ್ಕಳ ಸಂಖ್ಯೆ ಹೆಚ್ಚು ಇದ್ದುದರಿಂದ ಮಕ್ಕಳು ಶಾಲೆಗೆ ಹೋದರೂ ಪೋಷಕರು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸುವುದೇ ಇಲ್ಲ. ಆದರೆ ಮಕ್ಕಳು ಹಾಗೂ ಹೀಗೂ ಈಗಿನ ೧೦ ನೇ ತರಗತಿ ಪರೀಕ್ಷೆ ಬರೆದು ಫಲಿತಾಂಶಕ್ಕೂ ಕಾಯದೆ ಮನೆಯಲ್ಲಿ ಹೇಳದೆ ಬಹುತೇಕರು ಸೇನೆ, ಪೊಲೀಸ್ ಹೀಗೆ ಕೆಲಸಕ್ಕೆ ಸೇರಿಬಿಡುತ್ತಿದ್ದರು. ಆಗ ಈಗಿನ ಹಾಗೆ ೯೯.೯೯ ಫಲಿತಾಂಶ ಇರುತ್ತಿರಲಿಲ್ಲ. ಶಾಲೆಗೇ ಒಬ್ಬ ಫಸ್ಟ್ ಕ್ಲಾಸ್ ಬಂದರೆ ದೊಡ್ಡ ವಿಷಯ. ಹಾಗಂತ ಅಂದು ವಿದ್ಯಾಭ್ಯಾಸದ ಗುಣಮಟ್ಟ ಕಡಿಮೆ ಇರಲಿಲ್ಲ. ಆಗ ಮಕ್ಕಳಿಗೇ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇರಲಿಲ್ಲ ಮತ್ತು ಈಗಿನ ಹಾಗೆ ವಿದ್ಯಾಭ್ಯಾಸ ಪದವಿಗಳ ತಯಾರಿಸುವ ಕಾರ್ಖಾನೆಗಳು ಇರಲಿಲ್ಲ. ಜೀವಮಾನ ರೂಪಿಸುವ ಕೇಂದ್ರಗಳಾಗಿದ್ದವು. ಇಂದು ಮಕ್ಕಳು ಏನೋ ೧೦೦ ಕ್ಕೆ ೧೦೦ ಅಂಕ ತೆಗೆಯುತ್ತಾರೆ. ಆದರೆ ಇಂದಿನ ವಿದ್ಯಾ ಕೇಂದ್ರಗಳು ದೇಶಕ್ಕೆ ಒಬ್ಬನೇ ಒಬ್ಬ ದೇಶದ ಆಸ್ತಿ ಆಗುವಂತಹ ಪ್ರಜೆಯನ್ನು ನೀಡುವಲ್ಲಿ ಗಮನ ವಹಿಸಿಲ್ಲ.
ದೊಡ್ಡ-ದೊಡ್ಡ ಕಾಲೇಜುಗಳಿವೆ. ಮಗು ಜನಿಸುವ ಮೊದಲೇ ಸೀಟ್ ಬುಕ್ ಮಾಡಿಸಿಕೊಳ್ಳುವ ಕಿಂಡರ್ಗಾರ್ಡನ್ಗಳಿವೆ. ಕೆಲವರಿಗೆ ಕೆಲವು ಕಾಲೇಜುಗಳಲ್ಲಿ ಓದುವುದು, ಓದಿಸುವುದು ಎರಡು ಪ್ರತಿಷ್ಠೆ ಹೊರತು ಬೇರೆ ಏನು ಸಾಧಿಸುವುದಿಲ್ಲ. ಇಂದು ಸಮಾಜಕ್ಕೆ ಪ್ರಯೋಜನ ಆಗುವಂತ ಪ್ರಜೆಗಳು ಆಳುವವರಿಗೂ ಬೇಡ ಆಳಿಸುವವರಿಗೆ ಬೇಡ. ಇದರ ಪರಿಣಾಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನಕುಸುಮವಾಗಿದೆ. ಇಂದು ಓರ್ವ ವಿದ್ಯಾರ್ಥಿ ಡಾಕ್ಟರ್ ಆಗಬೇಕು ಅಂದರೆ ಸರ್ಕಾರಿ ಮೆಡಿಕಲ್ ಕಾಲೇಜು ಶುಲ್ಕ ವರ್ಷಕ್ಕೆ ಕಡಿಮೆ ಅಂದರೆ ರೂ. ೨ಲಕ್ಷ. ಮಾಸ್ಟರ್ ಕೋರ್ಸ್ ಮಾಡಬೇಕು ಅಂದರೆ ೩ ರಿಂದ ೪ ಕೋಟಿ ಬೇಕು. ಅದು ಇರಲಿ ನಾವು ಓದುವಾಗ ಡಾಕ್ಟರ್, ಇಂಜಿನಿಯರ್, ಅದು ಬುದ್ಧಿವಂತರಿಗೆ. ಇನ್ನು ಅದು ಬಿಟ್ಟರೆ ಪದವಿ ಮತ್ತೆ ಮಾಸ್ಟರ್ ಪದವಿ ಅದರಲ್ಲಿ ಕೈ ಬೆರಳು ಎಣಿಕೆಯಷ್ಟು ಕೋರ್ಸ್. ಆದರೆ ಇಂದು ನೂರಾರು ಕಾಲೇಜು, ನೂರಾರು ಕೋರ್ಸ್ಗಳು. ಅದಕ್ಕೆ ಸರಿಯಾದ ಫೀಸ್. ಅಂದು ನಾವು ಮೂರು ವರ್ಷ ಕಟ್ಟಿದ ಫೀಸ್ ಇಂದು ಒಂದು ಸೆಮಿಸ್ಟರ್ ಕೊಡುವ ಫೀಸ್ಗಿಂತ ಕಡಿಮೆ ಇತ್ತು. ಇದರ ಪರಿಣಾಮ ಪೋಷಕರು ತಮ್ಮ ಜೀವನದ ಪೂರ್ತಿ ದುಡಿದುದನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಮಾಡಿ ಮುಪ್ಪಿನಲ್ಲಿ ಮಕ್ಕಳ ಮುಂದೆ ಕೈಚಾಚಿ ಬದುಕುವ ಪರಿಸ್ಥಿತಿ ಪೋಷಕರದ್ದು. ಮಕ್ಕಳು ಓದಿ ಕೆಲಸಕ್ಕೆ ಸೇರಿದ್ರೆ ತಂದೆ ತಾಯಿಯನ್ನು ವರ್ಷಕ್ಕೆ ಒಮ್ಮೆ ಭೇಟಿಯಾಗುವುದಿಲ್ಲ. ಕೆಲವರು ಅಂತ್ಯಸAಸ್ಕಾರಕ್ಕೂ ಬರುವುದಿಲ್ಲ. ಹೀಗಿದೆ ನಮ್ಮ ಶಿಕ್ಷಣ ವ್ಯವಸ್ಥೆ. ಇನ್ನು ಇವರಿಗೆ ಎಲ್ಲಿರುತ್ತದೆ ದೇಶದ ಚಿಂತೆ ?
ಕೊನೆ ಮಾತು ; "ಅಂದು ಬಡತನದ ನಡುವೆ ಹಸಿವು ಹರಿದ ಬಟ್ಟೆ, ಸೀಮೆಎಣ್ಣೆ ಬುಡ್ಡಿ ದೀಪದಲ್ಲಿ ಕಷ್ಟದಲ್ಲಿ, ಇಷ್ಟಪಟ್ಟು ಓದಿ ದೇಶದ ಆಸ್ತಿ ಆಗುತ್ತಿದ್ದರು. ಇಂದು ಅಂತಹ ಪರಿಸರ ಶಿಕ್ಷಣ ವಿಭಾಗದಲ್ಲಿ ಮಾಯವಾಗಿರುವುದು ಖೇದಕರ. ಈ ದಿಸೆಯಲ್ಲಿ ಶಿಕ್ಷಣ ಸಂಸ್ಥೆಗಳ ಧೋರಣೆ ಕಿಂಚಿತ್ ಪರಿವರ್ತಿತವಾಗಲಿ. ದೇಶಕ್ಕೆ ಆಸ್ತಿಯಾಗುವ ಕೆಲವು ಶಿಕ್ಷಾರ್ಥಿ ಗಳನ್ನಾದರೂ ರೂಪಿಸುವ ದಿಸೆಯಲ್ಲಿ ಹೆಜ್ಜೆಯಿರಿಸಲಿ.
-ಬಾಳೆಯಡ ಕಿಶನ್ ಪೂವಯ್ಯ
ವಕೀಲರು, ಮಡಿಕೇರಿ
ಮೊ: ೯೪೪೮೮೯೯೫೫೪