ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಮೇ ೧೩: ಕರ್ನಾಟಕ ರಾಜ್ಯದಲ್ಲಿ ಮದ್ಯದ ದರಕ್ಕೆ ಸಂಬAಧಿಸಿದAತೆ ಇದೀಗ ರಾಜ್ಯ ಸರಕಾರ ಹಾಗೂ ಅಬಕಾರಿ ಇಲಾಖೆಯ ಹೊಸ ನಿಯಮವೊಂದು ಜಾರಿಗೆ ಬರುತ್ತಿದೆ. ಈ ಬದಲಾವಣೆ ಪ್ರಕ್ರಿಯೆ ಈಗಾಗಲೇ ಆರಂಭಗೊAಡಿದ್ದು, ಸದ್ಯದಲ್ಲಿ ಅಂತಿಮವಾಗಲಿದೆ. ಸದ್ಯದ ಮಟ್ಟಿಗೆ ಮದ್ಯ ಮಾರಾಟಗಾರರು, ವಹಿವಾಟುದಾರರು, ಮದ್ಯಪ್ರಿಯರು ಒಂದಷ್ಟು ಗೊಂದಲವನ್ನೂ ಎದುರಿಸುತ್ತಿದ್ದಾರೆ. ದರಕ್ಕೆ ಸಂಬAಧಿಸಿದAತೆ ಸ್ಪಷ್ಟವಾದ ಮಾಹಿತಿ ಜನಸಾಮಾನ್ಯರಿಗೆ ಅರಿವಿಗೆ ಬರುತ್ತಿಲ್ಲ.
ಸದ್ಯದ ಮಟ್ಟಿಗೆ ಹೇಳುವುದಾದರೆ ಕೆಲವೊಂದು ಬ್ರಾö್ಯಂಡ್‌ನ ಮದ್ಯಕ್ಕೆ ಶೇ ೨೦ ರಷ್ಟು ದರ ಏರಿಕೆಯಾಗಲಿದೆ. ಈ ಪಟ್ಟಿಯಲ್ಲಿ ಬಹುತೇಕ ಕಡಿಮೆ ದರದ (ಚೀಪರ್) ಮದ್ಯ ಸೇರ್ಪಡೆಯಾಗಲಿದೆ. ಇನ್ನು ಹಲವು ಬ್ರಾö್ಯಂಡ್‌ಗಳಿಗೆ ಈಗಿನ ಹೊಸ ನಿಯಮದಂತೆ ಶೇ ೧೦ ರಿಂದ ೨೦ರಷ್ಟು ದರ ಇಳಿಕೆಯಾಗುವ ಸಾಧ್ಯತೆಯೂ ಇದೆ ಎಂಬುದು ಈಗಿನ ದರ ಬದಲಾವಣೆಯ ವಿವರವಾಗಿದೆ.
ಮದ್ಯದ ದರದಲ್ಲಿ ಶೇ ೨೦ರಷ್ಟು ಏರಿಕೆಯಾಗುತ್ತಿರುವುದು ಮದ್ಯಪ್ರಿಯರಿಗೆ ಒಂದಷ್ಟು ಹೆಚ್ಚಿನ ಹೊರೆ (ಕಿಕ್) ತರಿಸಲಿದೆ.
ಬದಲಾವಣೆ ಏನು..?
‘ಶಕ್ತಿ’ ಮದ್ಯದ ದರ ವಿಚಾರಕ್ಕೆ ಸಂಬAಧಿಸಿದAತೆ ಸಂಗ್ರಹಿಸಿದ ಮಾಹಿತಿಯಂತೆ ಇನ್ನೂ ಖಚಿತವಾದ ದರ ನಿಗದಿಯಾಗಿಲ್ಲ. ಆದರೆ, ಮಂಗಳವಾರದಿAದಲೇ ದರದಲ್ಲಿ ಏರಿಕೆಯಾಗಿದೆ. ಮದ್ಯ ತಯಾರಿಕಾ ಸಂಸ್ಥೆ (ಕಾರ್ಖಾನೆ)ಗಳ ಮೂಲಕ ದರ ಅಂತಿಮವಾಗಬೇಕಿದೆ.
ವ್ಯವಸ್ಥೆ ಏನು..ಹೇಗಿತ್ತು..?
ಯಾವುದೇ ರೀತಿಯ ಮದ್ಯಗಳು, ಡಿಸ್ಟಿಲರಿ, ಬ್ರೂವರಿ, ವೈನರಿಗಳಲ್ಲಿ ತಯಾರಾಗುತ್ತವೆ. ಇದರಲ್ಲಿ ವಿಸ್ಕಿ, ರಮ್, ಬ್ರಾö್ಯಂಡಿ ಇನ್ನಿತರ ಮದ್ಯ, ಬಿಯರ್‌ಗಳು ಬರುತ್ತವೆ. ಈ ಹಿಂದೆ ಹಾಟ್ ಡ್ರಿಂಕ್ಸ್ಗೆ ಸಂಬAಧಿಸಿದAತೆ ಒಟ್ಟು ೧೬ ಹಂತಗಳಿದ್ದು (ದರ) ಇದೀಗ ಇದು ೮ ಹಂತಗಳಿಗೆ ಇಳಿಯುತ್ತಿದೆ. ಹದಾಹಣೆಗೆ ೧೦೦ ರಿಂದ ೧೫೦, ೨೦೦ ರಿಂದ ೨೫೦ ಈ ರೀತಿಯ ದರ ಚೀಪರ್‌ನಿಂದ ಹಿಡಿದು ದುಬಾರಿ ಮೌಲ್ಯದ ಮದ್ಯದ ತನಕ ಇತ್ತು.
ಈಗಿನ ಬದಲಾವಣೆಯಂತೆ ಮದ್ಯ ಉತ್ಪಾದಿಸುವ ಕಾರ್ಖಾನೆ-ಸಂಸ್ಥೆಗಳು ಆಯಾ ಬಗೆಯ ಮದ್ಯಕ್ಕೆ ಎಷ್ಟು ಪ್ರಮಾಣದ ಆಲ್ಕೋಹಾಲ್ ಅನ್ನು ಬಳಸುವುದೋ ಅದರ ಆಧಾರದಲ್ಲಿ ದರ ನಿಗದಿಯಾಗಲಿದೆ. ಹಾಟ್ ಡ್ರಿಂಕ್ಸ್ಗೆ ಸಂಬAಧಿಸಿದAತೆ ಶೇ ೪೨ ರಷ್ಟು ಆಲ್ಕೋಹಾಲ್‌ನ ಪ್ರಮಾಣ ಬಳಸಲ್ಪಡುತ್ತದೆ. ಇದೀಗ ಇದನ್ನು ಮದ್ಯ ತಯಾರಕರು ಶೇ ೪೦ಕ್ಕೂ ಇಳಿಸಿಕೊಳ್ಳಬಹುದು ಅಥವಾ ಯಥಾಸ್ಥಿತಿಯಂತೆಯೇ ಮುಂದುವರಿಸಬಹುದು. ಆದರೆ, ನಿರ್ದಿಷ್ಟ ಪ್ರಮಾಣದ ಆಲ್ಕೋಹಾಲ್‌ಗೆ ಸರಿಯಾಗಿ ಇನ್ನಿತರ ತೆರಿಗೆ (ಉತ್ಪಾದನಾ ವೆಚ್ಚ, ಸಾಗಾಟ ವೆಚ್ಚ ಸೇರಿ)ಆಯಾ ಡಿಸ್ಟಿಲರಿಗಳು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಬಕಾರಿ ಇಲಾಖೆಗೆ ಪೂರ್ಣ ವಿವರ ನೀಡಿ (ಡಿಕ್ಲೆರ‍್ಡ್ ಪ್ರೆöÊಸ್, ಮ್ಯಾಕ್ಸಿಮಮ್ ರಿಟೈಲ್ ಪ್ರೆöÊಸ್) ಅಂತಿಮ ದರ ನಿಗದಿಪಡಿಸಿ ಮಾರಾಟ ಮಾಡಬಹುದು. ಇದರಲ್ಲಿ ಕೆಎಸ್‌ಬಿಸಿಎಲ್‌ಗೆ ಶೇ ೫ ರೀಟೈಲ್ ಹಾಗೂ ಬಾರ್‌ಗಳಿಗೆ ಶೇ ೧೦ರಷ್ಟು ಲಾಭಾಂಶ ಎಂದಿನAತೆ ಇರಲಿದೆ. ಈ ಹಿಂದೆ ಇದರಲ್ಲಿ ಏರಿಳಿತಗಳಿದ್ದವು. ಇದೀಗ ಆಲ್ಕೋ ಹಾಲ್‌ನ ಪ್ರಮಾಣದಂತೆ ದರ ನಿಗದಿಯಾಗುತ್ತದೆ. ಇದು ಕಡಿಮೆ ದರದ ಮದ್ಯದ ವಿಚಾರದಲ್ಲಿ ಶೇ ೨೦ ರಷ್ಟು ತುಟ್ಟಿಯಾಗಲಿದೆ. ಒಂದಷ್ಟು ದುಬಾರಿ ಮೌಲ್ಯದ ಮದ್ಯದಲ್ಲಿ ಮಾತ್ರ ಆಲ್ಕೋಹಾಲ್‌ನ ಪ್ರಮಾಣದಂತೆ ಶೇ ೧೦ ರಿಂದ ೨೦ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.
ಬಿಯರ್
ಬಿಯರ್‌ನಲ್ಲೂ ಕೂಡ ಈ ಹಿಂದೆ ಮೂರು ಸ್ಲಾಟ್‌ಗಳಿದ್ದವು. ಬಿಲೋ ೫%,, ಆಲ್ಕೋಹಾಲ್ ಎಬಲ್ ೫%, ಆಲ್ಕೋಹಾಲ್ ಹಾಗೂ ನಾಟ್ ಎಕ್ಸೀಡಿಂಗ್ ೮% ಆಲ್ಕೋಹಾಲ್ ಎಂಬ ಹಂತಗಳಿದ್ದವು, ಇದೀಗ ಬಿಯರ್‌ನಲ್ಲೂ ಆಲ್ಕೋಹಾಲ್‌ನ ಪ್ರಮಾಣದ ನಿಖರ ಮಾಹಿತಿಯಂತೆ ದರ ನಿಗದಿಯಾಗಲಿದೆ. ಈ ಹಿಂದೆ ಕೆಲವು ಬಿಯರ್‌ಗೆ ಸಂಬAಧಿಸಿದAತೆ ಉದಾಹರರಣೆಗೆ ಅದರಲ್ಲಿ ಶೇ ೬.೫ರಷ್ಟು ಆಲ್ಕೋಹಾಲ್ ಇದ್ದರೂ ಶೇ ೮ ರಷ್ಟು ಆಲ್ಕೋಹಾಲ್‌ನಂತೆ ದರ ಇರುತಿತ್ತು.
ಇದೀಗ ನಿಖರ ಪ್ರಮಾಣದಂತೆ ದರ ಜಾರಿಗೆ ಬರಬೇಕಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇವರ ಮಾತಿನಂತೆ ಈಗಿನ ನಿಯಮದಲ್ಲಿ ಸರಕಾರಕ್ಕೂ ನಷ್ಟವಿಲ್ಲ, ಗ್ರಾಹಕರಿಗೂ ನಷ್ಟವಿಲ್ಲ ಆಲ್ಕೋಹಾಲ್ ಪ್ರಮಾಣದಂತೆ ದರ ಪಾವತಿಸಬೇಕಿದೆ. ಆದರೆ, ಸಹಜವಾಗಿ ಬಹುತೇಕ ಜನತೆ ರಾಜ್ಯದಲ್ಲಿ ಕಡಿಮೆ ದರದ ಮದ್ಯವನ್ನೇ ಹೆಚ್ಚಾಗಿ ಬಳಸುತ್ತಾರೆ. ಈ ಮದ್ಯಕ್ಕೆ ಸಂಬAಧಿಸಿದAತೆ ಶೇ ೨೦ ರಷ್ಟು ದರ ಏರಿಕೆಯಾಗಲಿರುವುದು ಮಾತ್ರ ಮದ್ಯಪ್ರಿಯರಿಗೆ ನಿಜಕ್ಕೂ ‘ಶಾಕ್’ ಆಗಲಿದೆ. ಸರಕಾರಕ್ಕೆ ಮಾತ್ರ ಒಂದಷ್ಟು ಆದಾಯ ಹೆಚ್ಚಾಗಲಿದೆ ಎಂಬುದು ಜನಸಾಮಾನ್ಯರ ಮಾತು. ಆಯಾ ಡಿಸ್ಟಿಲರಿಗಳು ಆನ್‌ಲೈನ್‌ನಲ್ಲಿ ವಿವರ ತೋರಿಸಬೇಕಿದ್ದು, ಇದರಂತೆ ದರ ನಿಗದಿಯಾಗಲಿದೆ.