ಗೋಣಿಕೊಪ್ಪಲು, ಮೇ ೧೧: ಒಂದೆಡೆ ಕ್ರಿಕೆಟ್, ಮತ್ತೊಂದೆಡೆ ಹಗ್ಗಜಗ್ಗಾಟ, ನೃತ್ಯ, ಮಕ್ಕಳ ಕಾರ್ಯಕ್ರಮ,ಮೈದಾನದ ಸುತ್ತಲೂ ಸಮಾಜ ಬಾಂಧವರ ಶಿಳ್ಳೆ ಚಪ್ಪಾಳೆಯ ನಡುವೆ ೨ ದಿನಗಳ ಕಾಲ ವೀರ ಮಡಿವಾಳ ಮಾಚೀದೇವರ ಸಂಘದಿAದ ಆಯೋಜನೆಗೊಂಡಿದ್ದ ೩ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಳೆಲೆಯ ಮಾರಮ್ಮ ಯೂತ್ ಕ್ಲಬ್ ಗೆಲುವು ಸಾಧಿಸುವ ಮೂಲಕ ಪ್ರತಿಷ್ಠಿತ ಮಡಿವಾಳ ಕ್ರಿಕೆಟ್ ಕಪ್ ಅನ್ನು ಎತ್ತಿ ಹಿಡಿಯಿತು. ರನ್ನರ್ ಅಪ್ ಪ್ರಶಸ್ತಿಯನ್ನು ಅಳುವಾರದ ಮಡಿವಾಳ ಸ್ಟೆçöÊರ‍್ಸ್ ತನ್ನದಾಗಿಸಿಕೊಂಡಿತು. ತೃತೀಯ ಸ್ಥಾನವನ್ನು ಮಾದಪುರದ ರಾಯಲ್ ಮಾಚೀ ಕ್ರಿಕೆರ‍್ಸ್ ಹಾಗೂ ೪ನೇ ಸ್ಥಾನವನ್ನು ಹಾಗೂ ಕಿರುಗೂರಿನ ವಿನಾಯಕ ಯೂತ್ಸ್ ಪಡೆಯಿತು.

ಗೋಣಿಕೊಪ್ಪಲುವಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನ ವೀರ ಮಡಿವಾಳ ಮಾಚೀ ದೇವರ ಸಂಘದಿAದ ಲೀಗ್ ಮಾದರಿಯಲ್ಲಿ ೨ ದಿನಗಳ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ೧೦ ತಂಡಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ಜಿಲ್ಲೆಯ ನಾನಾ ಭಾಗದಿಂದ ಮಡಿವಾಳ ಸಮಾಜ ಬಾಂಧವರು ನಿರೀಕ್ಷೆಗೂ ಮೀರಿ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದರು. ವಿಜೇತ ತಂಡಕ್ಕೆ ನಗದು ಬಹುಮಾನ ಸೇರಿದಂತೆ ಆಕರ್ಷಕ ಪಾರಿತೋಷಕ ವಿತರಿಸಲಾಯಿತು.

ಒಗ್ಗಟ್ಟಿಗೆ ಸಹಕಾರಿ

ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮೂಡಬಿದಿರೆಯ ಶ್ರೀ ಜಗದ್ಗುರು ರಾಘವೇಂದ್ರ ಪೀಠ, ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ, ಸಮಾಜ ಬಾಂಧವರು ಒಂದೆಡೆ ಸೇರುವುದರಿಂದ ಸಮಾಜಕದ ಒಗ್ಗಟ್ಟನ್ನು ಮೂಡಿಸಬಹುದಾಗಿದೆ. ಸಮಾಜ ಬಾಂಧವರು ಮಾಚೀದೇವರ ಆದರ್ಶ ಗುಣಗಳನ್ನು ಹೊಂದಬೇಕು. ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು. ಮಡಿವಾಳದ ಸಂಘಟನೆ ಬಲಿಷ್ಠವಾಗಿ ಬೆಳೆಯಲು ಕ್ರೀಡೆ ಸಹಕಾರಿಯಾಗಲಿದೆ. ಮಡಿವಾಳರ ರಥವನ್ನು ಮುನ್ನಡೆಸಿ ಎಂದಿಗೂ ನಿಲ್ಲದಿರಲಿ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒಲವು ನೀಡುವಂತಾಗಬೇಕು ಎಂದು ಕರೆ ನೀಡಿದರು.

ಶ್ರೀ ವೀರ ಮಡಿವಾಳ ಮಾಚೀದೇವರ ಸಂಘದ ಜಿಲ್ಲಾಧ್ಯಕ್ಷ ಡಿ.ಪಿ.ರಾಜೇಶ್ ಪದ್ಮನಾಭ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ೨೧ ದಿನಗಳಿಂದ ಕ್ರೀಡೋತ್ಸವವನ್ನು ಆಯೋಜಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಸಮಾಜ ಬಾಂಧವರು ನಿರೀಕ್ಷೆಗೂ ಮೀರಿ ಆರ್ಥಿಕ ಸಹಕಾರ ನೀಡಿರುವುದರಿಂದ ಇಂದು ಕಳೆದ ೧೦ ವರ್ಷಗಳಿಂದ ನಿಂತುಹೋಗಿದ್ದ ಕ್ರೀಡೋತ್ಸವವನ್ನು ಯಶಸ್ವಿಯಾಗಿಸಿದ್ದೇವೆ. ಸಮಾಜ ಬಾಂಧವರು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದು ಸಮಾಜದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ, ಮುಂದೆ ಸಮಾಜದ ವತಿಯಿಂದ ವಿದ್ಯಾ ಸಂಸ್ಥೆಯನ್ನು ಆರಂಭಿಸಬೇಕೆAಬ ಚಿಂತನೆ ಹೊಂದಲಾಗಿದೆ. ಈಗಾಗಲೇ ಇದಕ್ಕೆ ಬೇಕಾದ ಸ್ಥಳದ ಬಗ್ಗೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಲ್ಲಿ ಮನವಿ ಮಾಡಲಾಗಿದೆ. ಶಾಸಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಸಮುದಾಯ ಭವನದ ಬದಲಾಗಿ ವಿದ್ಯಾ ಸಂಸ್ಥೆಯನ್ನು ನಿರ್ಮಿಸಿ ಮಡಿವಾಳರಿಗೆ ಉತ್ತಮ ಶಿಕ್ಷಣ ನೀಡುವ ಅಭಿಲಾಷೆ ಹೊಂದಿದ್ದೇವೆ. ಸಮಾಜ ಬಾಂಧವರ ಸಹಕಾರ ನಿರೀಕ್ಷೆ ಮಾಡಲಾಗುತ್ತಿದೆ ಎಂದರು. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ. ನಂಜಪ್ಪ ಮಾತನಾಡಿ, ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಹಲವು ಸಮಾವೇಶಗಳನ್ನು ನಡೆಸಿ ಮುಖ್ಯಮಂತ್ರಿಗಳನ್ನು ಸಭೆಗೆ ಕರೆಸಿ ಸಮಾಜದ ಒಗ್ಗಟ್ಟನ್ನು ಪ್ರದರ್ಶನ ಮಾಡಲಾಗಿದೆ. ಆದರೆ ಕೆಲವರಿಂದ ವಿರೋಧಗಳು ವ್ಯಕ್ತಗೊಂಡಿದೆ. ಪರಿಶಿಷ್ಟ ಜಾತಿಗೆ ಸೇರಿಸಲು ವಿಘ್ನಗಳು ಆರಂಭವಾಗಿವೆ. ಬದಲಾಗಿ ಮಡಿವಾಳರಿಗೆ ವಿದ್ಯಾಭ್ಯಾಸದಲ್ಲಿ ಮೀಸಲಾತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದೇವೆ. ಇದರಿಂದ ಉನ್ನತಮಟ್ಟದ ಶಿಕ್ಷಣ ಪಡೆಯಲು ಅವಕಾಶಗಳು ಒದಗಿಬರಲಿದೆ. ಮಕ್ಕಳಿಗೆ ಪ್ರೋತ್ಸಾಹಿಸಲು ವಾರ್ಷಿಕವಾಗಿ ಮಡಿವಾಳ ಸಮಾಜದಿಂದ ದೊಡ್ಡ ಪ್ರಮಾಣದಲ್ಲಿ ಸಮಾರಂಭ ಏರ್ಪಡಿಸಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ಪುರುಷರ ಹಗ್ಗಜಗ್ಗಾಟ

ಪುರುಷರಿಗಾಗಿ ಏರ್ಪಡಿಸಲಾಗಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಜಿಲ್ಲೆಯ ಹತ್ತು ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಟೀಮ್ ಮಡಿವಾಳ ಗೋಣಿಕೊಪ್ಪ ತಂಡವು ಪ್ರಬಲ ಪೈಪೋಟಿ ನೀಡುವ ಮೂಲಕ ಮಡಿಕೇರಿಯ ಮಾಚೀದೇವ ವಾಂರ‍್ಸ್ ತಂಡವಬನ್ನು ಸೋಲಿಸುವ ಮೂಲಕ ಗೆಲುವು ಸಾಧಿಸಿತು.

ಮಹಿಳಾ ಹಗ್ಗಜಗ್ಗಾಟ: ಮಹಿಳೆಯರಿಗೆ ಏರ್ಪಡಿಸಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಜಿಲ್ಲೆಯ ೮ ತಂಡಗಳು ಭಾಗವಹಿಸಿದ್ದವು ಅಂತಿಮವಾಗಿ ಗೋಣಿಕೊಪ್ಪ ವೀರ ಮಹಿಳಾ ತಂಡ ಬಲ್ಯಮುಂಡೂರುವಿನ ಕ್ವೀನ್ಸ್ ತಂಡವನ್ನು ಸೋಲಿಸುವ ಮೂಲಕ ಮೊದಲ ಸ್ಥಾನ ಪಡೆಯಿತು. ವಿಜೇತ ತಂಡಕ್ಕೆ ನಗದು ಬಹುಮಾನ ಸೇರಿದಂತೆ ಆಕರ್ಷಕ ಪಾರಿತೋಷಕ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಡಿವಾಳ ಸಂಘದ ಉಪಾಧ್ಯಕ್ಷರುಗಳಾದ ಗಿರಿಜಾ ಪ್ರೇಮ, ಡಿ.ಜೆ. ಕೇಶವ, ಸಹಕಾರ್ಯದರ್ಶಿ ಎಂ.ಕೆ. ಗಣೇಶ್, ಎಂ.ಬಿ.ಅಭಿಷೇಕ್, ಖಜಾಂಚಿ ವನಿತ ವಸಂತ್, ಕ್ರೀಡಾ ಸಂಚಾಲಕ ವಿನು, ದಾನಿಗಳಾದ ರಾಜ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ, ಪುರುಷರಿಗೆ,ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸೈಕ್ಲೋನ್ ತಂಡದಿAದ ನೃತ್ಯ ಪ್ರದರ್ಶನ, ಮಕ್ಕಳ ಛಧ್ಮವೇಶ ಗಮನ ಸೆಳೆಯಿತು. ಕಾರ್ಯಕ್ರಮದ ಅಂಗವಾಗಿ ಜನಾಂಗದ ಹಿರಿಯ ಸಾಧಕರಿಗೆ, ನಿವೃತ್ತ ಸೈನಿಕರಿಗೆ ಕಲೆ, ಸಾಹಿತ್ಯ, ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಆರ್. ಮಹಾದೇವ ಸ್ವಾಗತಿಸಿ, ವೃಂದ ಪ್ರಾರ್ಥಿಸಿ, ಶ್ವೇತ ಕಾಂತರಾಜ್ ನಿರೂಪಿಸಿ, ವಂದಿಸಿದರು. ಸಂಘದ ಪ್ರಮುಖರುಗಳಾದ ಎಂ.ಕೆ.ರವಿಕುಮಾರ್, ರತನ್, ಶ್ರೀಜಿತ್, ಎಸ್.ಜೆ. ಪ್ರಸಾದ್, ಎಂ.ಸಿ. ಗಣೇಶ್, ಪ್ರೇಮ, ರಂಜಿತ, ಪೂಜಾ, ವಿನಿತ, ಲೇಪು. ಸತೀಶ್ ಕುಮಾರ್, ಗಣೇಶ್ ಸೇರಿದಂತೆ ಅನೇಕ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದರು.