ಸೋಮವಾರಪೇಟೆ, ಮೇ ೯: ಇಲ್ಲಿನ ಜೂನಿಯರ್ ಕಾಲೇಜು ಟರ್ಫ್ ಮೈದಾನದಲ್ಲಿ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿ ಯೇಷನ್ ವತಿಯಿಂದ ಇದೇ ಪ್ರಥಮ ಬಾರಿಗೆ ಆಯೋಜಿಸಿರುವ ಆಹ್ವಾನಿತ ಪ್ರತಿಷ್ಠಿತ ತಂಡಗಳ ನಡುವಿನ ಯಿಫಾ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾಟದ ಫೈನಲ್ ಪಂದ್ಯ ತಾ. ೧೦ರಂದು (ಇಂದು) ನಡೆಯಲಿದೆ.

ಇಂದು ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಸದನ್ ಕಮಾಂಡೋ ತಂಡವು ಕರ್ನಾಟಕ ಪೊಲೀಸ್ ತಂಡವನ್ನು ಮಣಿಸಿ ಫೈನಲ್‌ಗೇರಿದರೆ, ಎಜಿಓಆರ್‌ಸಿ ತಂಡ ಡಿವೈಇಎಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು.

ಇಂದು ನಡೆದ ಪ್ರಥಮ ಲೀಗ್‌ನಲ್ಲಿ ಯಿಫಾ ತಂಡವು ಸೌತ್ ವೆಸ್ಟçನ್ ಕಮಾಂಡೋ ತಂಡವನ್ನು ೫-೨ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಯಿಫಾ ತಂಡದ ಪರವಾಗಿ ಅಂತರರಾಷ್ಟಿçÃಯ ಹಾಕಿ ಆಟಗಾರ ಶೇಷೇಗೌಡ ೧ ಗೋಲು ಗಳಿಸಿದರೆ, ಪ್ರಣಾಮ್ ಗೌಡ ೨, ಶ್ರೀಜಿತ್ ಹಾಗೂ ನಾಚಪ್ಪ ಅವರುಗಳು ತಲಾ ಒಂದು ಗೋಲು ಗಳಿಸಿದರು. ಸೌತ್ ವೆಸ್ಟçನ್ ರೈಲ್ವೇ ಪರವಾಗಿ ಚೇತನ್ ಹಾಗೂ ವೀರಣ್ಣ ಪಾಟೀಲ್ ಒಂದೊAದು ಗೋಲು ಗಳಿಸಿದರು.

ಎರಡನೇ ಲೀಗ್‌ನಲ್ಲಿ ಎಜಿಓಆರ್‌ಸಿ ತಂಡ ೨-೧ ಗೋಲುಗಳ ಅಂತರದಿAದ ಡಿವೈಇಎಸ್ ತಂಡವನ್ನು ಮಣಿಸಿತು. ವಿಜೇತ ತಂಡದ ಪರವಾಗಿ ಮಂಜಿತ್ ಹಗೂ ತ್ರಿಶೂಲ್ ಗೋಲು ಗಳಿಸಿದರು. ಡಿವೈಇಎಸ್ ಪರವಾಗಿ ಗೌರವ್ ಗಣಪತಿ ಗೋಲು ದಾಖಲಿಸಿದರು.

೩ನೇ ಲೀಗ್‌ನಲ್ಲಿ ಕರ್ನಾಟಕ ಸ್ಟೇಟ್ ಪೊಲೀಸ್ ತಂಡವು ಸೌತ್ ವೆಸ್ಟçನ್ ರೈಲ್ವೇ ತಂಡದ ವಿರುದ್ಧ ೪-೭ ಗೋಲುಗಳ ಅಂತರದಿAದ ಪರಾಭವಗೊಂಡಿತು. ವಿಜೇತ ತಂಡದ ಪರವಾಗಿ ಆರ್ಯನ್ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ದಾಖಲೆ ಬರೆದರು. ಉಳಿದಂತೆ ಚಿರಾಗ್, ಪಾಂಡಿ, ಶರ್ಮ ಭರತ್, ಶಕ್ತಿ ಅವರುಗಳು ತಲಾ ಒಂದೊAದು ಗೋಲು ಗಳಿಸಿದರು. ಪೊಲೀಸ್ ತಂಡದ ಪರವಾಗಿ ಶ್ರೀನಿವಾಸ್ ತಳವಾರ್ ೨, ವಿವೇಕ್ ಹಾಗೂ ಸಾಕ್ಷಾತ್ ಒಂದೊAದು ಗೋಲು ಗಳಿಸಿದರು.

೪ನೇ ಲೀಗ್‌ನಲ್ಲಿ ಕೆನರಾ ಬ್ಯಾಂಕ್ ತಂಡ ಕಸ್ಟಮ್ಸ್ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿತು. ತಂಡದ ಪರವಾಗಿ ಪವನ್, ಕೆ.ಎಂ. ಸೋಮಣ್ಣ ಗೋಲು ಗಳಿಸಿದರು.

ಅಂತಿಮವಾಗಿ ಸದನ್ ಕಮಾಂಡೋ ಹಾಗೂ ಎಜಿಓಆರ್‌ಸಿ ತಂಡಗಳು ಫೈನಲ್‌ಗೇರಿದರೆ, ೩ ಸ್ಥಾನಕ್ಕಾಗಿ ಯಿಫಾ ಹಾಗೂ ಕೆನರಾ ಬ್ಯಾಂಕ್ ತಂಡಗಳ ನಡುವೆ ತಾ. ೧೦ರಂದು (ಇಂದು) ಪಂದ್ಯಾಟ ನಡೆಯಲಿದೆ. ೩ ನೇ ಸ್ಥಾನದ ಪಂದ್ಯ ಪೂರ್ವಾಹ್ನ ೧೧ ಗಂಟೆಗೆ ಫೈನಲ್ ಪಂದ್ಯಾಟ ಅಪರಾಹ್ನ ೩ ಗಂಟೆಗೆ ಟರ್ಫ್ ಮೈದಾನದಲ್ಲಿ ನಡೆಯಲಿದೆ.

ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡಕ್ಕೆ ರೂ. ೨ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.೧ ಲಕ್ಷ ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯುಕ್ತಿಕ ವಿಭಾಗದಲ್ಲಿಯೂ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದು ಯಿಫಾ ಸಂಘಟನೆಯ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ತಿಳಿಸಿದ್ದಾರೆ.

ಇಂದಿನ ಪಂದ್ಯಕ್ಕೆ ಶಾಸಕ ಡಾ. ಮಂತರ್ ಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಸೇರಿದಂತೆ ಇತರ ಪ್ರಮುಖರು ಆಗಮಿಸಿ ಆಟಗಾರರಿಗೆ ಶುಭಕೋರಿದರು.