ಕಡAಗ, ಮೇ ೮: ಒಂಬತ್ತು ದಿನಗಳ ಕಾಲ ನಡೆದ ಪುಡಿಯಂಡ ಕುಟುಂಬಸ್ಥರು ಆಯೋಜಿತ ಕೊಡವ ಜಮ್ಮಾ ಮುಸ್ಲಿಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಕ್ರೀಡಾಕೂಟಕ್ಕೆ ತೆರೆ ದೊರಕಿತು. ಅರಮೇರಿ ಎಸ್.ಎಂ.ಎಸ್ ಶಾಲಾ ಮೈದಾನದಲ್ಲಿ ಕೊಡವ ಜಮ್ಮಾ ಮುಸ್ಲಿಂ ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಗಿತ್ತು. ಕೊಡಗಿನ ೬೨ ಕೊಡವ ಜಮ್ಮಾ ಮುಸ್ಲಿಂ ಕುಟುಂಬದ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಕಿಕ್ಕರೆ ತಂಡ ಹಾಗೂ ಚಿಟ್ಟೆಡೆಯ ಕುವೆಲರ ತಂಡವು ಸೆಣೆಸಾಡಿ ಕಿಕ್ಕರೆ ತಂಡವು ಗೆಲುವು ಸಾಧಿಸಿತು. ಸೆಮಿಫೈನಲ್ ಪಂದ್ಯದಲ್ಲಿ ವೈಕೊಲಂಡ ಕುಂಜಿಲ ತಂಡವು ವಿಜಯ ಸಾಧಿಸಿ ಮೂರನೇ ಸ್ಥಾನ ಪಡೆಯಿತು. ಕುರುಳಿಕಾರಂಡ ಎಮ್ಮೆಮಾಡು ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕ್ರೀಡಾಕೂಟವನ್ನು ಆಯೋಜನೆ ಮಾಡುವುದು ಸುಲಭದ ಕೆಲಸವಲ್ಲ. ಅದು ಶ್ರಮದ ಕಾರ್ಯ ಎಂದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ಜಿಲ್ಲೆಯ ಯಾವುದೇ ಕ್ರೀಡೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇಲ್ಲಿನ ಮೈದಾನಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ಒದಗಿಸುವುದಾಗಿ ಭರವಸೆ ಇತ್ತರು. ಬಹುಮಾನ ವಿತರಣೆ ಸಂದರ್ಭ ಕೊಡವ ಜಮ್ಮಾ ಮುಸ್ಲಿಂ ಕುಟುಂಬದ ಕ್ರಿಕೆಟ್ ಪಂದ್ಯದ ಸ್ಥಾಪಕ ಅಧ್ಯಕ್ಷ ಅನೀಸ್, ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಹಿರಿಯರಾದ ಎರ್ಮು ಹಾಜಿ, ಹನೀಫ್, ಕೋಳುಮಂಡ ರಫೀಕ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಜಮ್ಮಾ ಮುಸ್ಲಿಂ ಕುಟುಂಬದ ಸಾಧಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪುಡಿಯಂಡ ಕುಟುಂಬದ ಮುನೀರ್, ಮೊÊದು, ಶಫೀಕ್, ಪಡಿಯತ್ ಮುನಿರ್, ನಿಸಾರ್, ನೌಶಾದ್, ರಿಯಾಜ್ ಹಾಜರಿದ್ದರು. - ನೌಫಲ್