ಮಡಿಕೇರಿ, ಮೇ.೮: ಬಸ್ ಚಲಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾ ಘಾತವಾಗಿ ಸಾವನ್ನಪ್ಪಿದ ಘಟನೆ ಮಡಿಕೇರಿ-ಮಂಗಳೂರು ರಸ್ತೆಯ ತಾಳತ್ತಮನೆ ಬಳಿ ನಡೆದಿದೆ.

ಇಂದು ಮುಂಜಾನೆ ಘಟನೆ ಸಂಭವಿಸಿದ್ದು, ಹೃದಯಾಘಾತಕ್ಕೊಳಗಾದ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತಯ ಬಲ ಬದಿ ಸರಿದು ಉರುಳಿ ಚರಂಡಿಗೆ ಬಿದ್ದಿದೆ. ಅದೃಷ್ಟವಶಾತ್ ಬಸ್‌ನಲ್ಲಿನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ ಸುಮಾರು ೫:೩೦ ಹೊತ್ತಿಗೆ ಮಂಗಳೂರು ರಸ್ತೆಗಾಗಿ ನಾಪೋಕ್ಲುವಿಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ‘ಪೂರ್ಣಿಮಾ’ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಸರಿದು ಚರಂಡಿಗೆ ಉರುಳಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ಸಂದರ್ಭ ಪ್ರಯಾಣಿಕರು ಬಸ್‌ನಿಂದ ಹೊರಕ್ಕೆ ಸುರಕ್ಷಿತವಾಗಿ ಇಳಿದ ಬಳಿಕವಷ್ಟೆ ಚಾಲಕನಿಗೆ ಹೃದಯಾಘಾತವಾಗಿರುವ ಬಗ್ಗೆ ಅರಿವಾಗಿದೆ.

ಮೂಲತಃ ಕೊಳ್ಳೆಗಾಲದವರಾದ ಚಾಲಕ ಶಿವಕುಮಾರ್ ಸ್ವಾಮಿ (೫೨) ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.