ಚೆಯ್ಯಂಡಾಣೆ, ಮೇ ೭: ಸ್ಥಳೀಯ ಚೇಲಾವರ ಗ್ರಾಮದ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ನಡೆಯುತ್ತಿರುವ ತೃತೀಯ ವರ್ಷದ ನೇಮೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿದರು.

ನಂತರ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಶಾಸಕರು, ಕೊರಗಜ್ಜ ಸ್ಥಾನಕ್ಕೆ ವೈಯಕ್ತಿಕ ಧನಸಹಾಯ ನೀಡಿದರು. ಕೊರಗಜ್ಜ ಸ್ಥಾನದ ಅಭಿವೃದ್ಧಿಗೆ ಸ್ಥಳೀಯರು ಬೇಡಿಕೆ ಸಲ್ಲಿಸಿದ ಸಂದರ್ಭ ಶಾಸಕರು ತಮ್ಮ ವೈಯಕ್ತಿಕ ಕೊಡುಗೆಯಾಗಿ ರೂ. ೧ ಲಕ್ಷ ನೀಡಿದರಲ್ಲದೆ ಸರಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಐತಿಚಂಡ ಪ್ರಕಾಶ್ ಕಾರ್ಯಪ್ಪ, ಮಣಿ ಅಯ್ಯಮ್ಮ, ಸೀತಾರಾಂ, ಡಾಲಿ ಸುಬ್ರಮಣಿ, ಮೀನಾ, ಮಾಚಮ್ಮ, ಮೊಹಮ್ಮದ್, ಪಿ. ಪುತ್ರ, ಜಯ, ಶ್ರೀ ಕೊರಗಜ್ಜ ದೈವ ಸನ್ನಿಧಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.