ಕೂಡಿಗೆ, ಮೇ ೭: ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ನಿರ್ದೇಶಕ, ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ಅರುಣ್ ರಾವ್ ಅವರಿಗೆ ಕೂಡಿಗೆ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಹಕಾರ ಸಂಘದ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಸನ್ಮಾನಿಸಿದರು.

ಈ ಸಂದರ್ಭ ಉಪಾಧ್ಯಕ್ಷ ವಿ. ಬಸಪ್ಪ, ನಿರ್ದೇಶಕರಾದ ಕೆ.ಟಿ. ಅರುಣ್ ಕುಮಾರ್, ಕೃಷ್ಣೇಗೌಡ, ಕೆ.ಪಿ. ರಾಜು, ಕುಮಾರ್, ನಾಗರಾಜ್, ಕೆ.ಜೆ. ಕುಮಾರ್, ಕೆ.ಬಿ. ರಾಮಚಂದ್ರ, ಎಸ್.ಎಸ್. ಕೃಷ್ಣ, ಜಯಶ್ರೀ, ಪವಿತ್ರ, ವೃತ್ತಿಪರ ನಿರ್ದೇಶಕ ಡಿ.ಎಸ್. ಚಂದ್ರಶೇಖರ, ಮೇಲ್ವಿಚಾರಕ ಎಸ್.ಪಿ. ಅಬ್ದುಲ್ ರಶೀದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಹರ್ಷ, ಗುಮಾಸ್ತೆ ಎ.ಜೆ. ಪೂರ್ಣಿಮ, ಕಂಪ್ಯೂಟರ್ ಆಪರೇಟರ್ ಪೂರ್ಣಿಮ ಸಿಬ್ಬಂದಿಗಳಾದ ಚಂದ್ರಶೇಖರ, ಅಭಿಷೇಕ್, ಕೆ.ಎನ್. ಧಣಿ, ಮಂಜುನಾಥ, ಚೈತನ್ಯ ಸೇರಿದಂತೆ ವಿವಿಧ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು.