ವೀರಾಜಪೇಟೆ, ಮೇ ೬: ಅಮೆರಿಕ ಮತ್ತು ಇರಾನ್ ಮಹಾಯುದ್ಧದಿಂದಾಗಿ ಗೃಹ ಬಳಕೆ ಸಿಲಿಂಡರ್‌ಗೆ ರೂ, ೬೦ ಹಾಗೂ ವಾಣಿಜ್ಯ ಬಳಕೆಗಳ ಸಿಲಿಂಡರ್‌ಗೆ ಸಾವಿರ ರೂ ಹೆಚ್ಚುಮಾಡಿರುವುದು ಜನರ ಮೇಲೆ ಹೊರೆ ಹಾಕಿದಂತಾಗಿದೆ ಎಂದು ಸಿ.ಪಿ.ಐ.ಎಂ ಪಕ್ಷದ ಕೇಂದ್ರ ಸಮಿತಿ (ಪಿಬಿ) ಸದಸ್ಯರಾದ ಬಿ.ಬಿ.ರಾಘವಲು ಹೇಳಿದರು.
ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಮಿತಿ ವತಿಯಿಂದ ವೀರಾಜಪೇಟೆ ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದಲ್ಲಿ ತಾ. ೩ ರಿಂದ ೭ರ ವರೆಗೆ ಆಯೋಜಿಸಲಾಗಿದ್ದ ಸಿಪಿಐಎಂ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ಮುಖ್ಯ ಅತಿಥಿಯಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಎಲ್ಲಾ ದೇಶಗಳಿಗೆ ಇರಾನ್ ಇಂಧÀ£ ಅವಲಂಬಿತವಾಗಿರುವುದರಿAದ ತೈಲ ಉತ್ಪನ್ನ ಸಮಸ್ಯೆಯಾಗಿ ಉಳಿದುಕೊಂಡಿದೆ. ಯುದ್ಧ ನಿಲ್ಲಿಸುವಂತೆ ಭಾರತದ ಪ್ರಧಾನಿ ಮಧ್ಯಪ್ರವೇಶ ಮಾಡಬೇಕೆಂದು ಜನರ ಒತ್ತಾಯವಾಗಿದೆ. ಎಂದ ರಾಘವನ್ ಅವರು ಏಪ್ರಿಲ್ ತಿಂಗಳಲ್ಲಿ ಐದು ರಾಜ್ಯಗಳ ಚುನಾವಣೆ ಸಂದರ್ಭ ಬಿಜೆಪಿ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿಚಾರ ತರುವ ಅಗತ್ಯವಿರಲಿಲ್ಲ ಇದರಲ್ಲಿ ರಾಜಕಿಯ ಷಡ್ಯಂತ್ರ ಅಡಗಿದೆ ಎಂದು ರಾಘವನ್ ದೂರಿದರು.
ಅತಿಥಿಯಾಗಿದ್ದ ಸಿಪಿಐಎಂ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಪ್ರಕಾಶ್ ಅವರು ಮಾತನಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಜಾತಿ ಹೆಸರಿನಲ್ಲಿ ಸಂಘಟನೆ ಕಟ್ಟುವ ಪ್ರವರ್ತಿ ನಡೆಯುತ್ತಿದೆ. ಸರಕಾರ ಸಣ್ಣ ಸಣ್ಣ ಹಿಡುವಳಿದಾರರು ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ರೈತರ ಭೂಮಿಯನ್ನು ಅರಣ್ಯ ಎಂದು ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಸರಕಾರ ಚುನಾವಣೆ ಸಂದರ್ಭ ಈ ಹಿಂದೆ ಬಿಜೆಪಿ ಮಾಡಿದಂತ ಕೆಲವೊಂದು ನೀತಿಗಳನ್ನು ಬದಲಾಯಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತಾದÀರೂ ಇದುವರೆಗೆ ಮಾಡಿಲ್ಲ. ಎಂದ ಕೆ.ಪ್ರಕಾಶ್ ಅವರು ಕೊಡಗಿನಲ್ಲಿ ಮೊಟ್ಟ ಮೊದಲು ಮೊಣ್ಣಯ್ಯ ಎಂಬುವರು ಭಾರತ ಕಮ್ಯೂನಿಸ್ಟ್ ಪಕ್ಷದ ಚಳವಳಿಯನ್ನು ಪ್ರಾರಂಬಿಸಿದ್ದರು ಎಂದು ಸ್ಮರಿಸಿದರು.
ಅಧ್ಯಕ್ಷತೆಯನ್ನು ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿಯ ಡಾ.ಐ.ಆರ್.ದುರ್ಗಾಪ್ರಸಾದ್ ವಹಿಸಿ ಮಾತನಾಡಿ ಕೊಡಗಿನಲ್ಲಿ ಕಮ್ಯೂನಿಸ್ಟ್ ಪಕ್ಷದ ಬೆಳವಣಿಗೆಗೆ ಮತ್ತು ದುಡಿಯುವ ಜನರ ಅನುಕೂಲಕ್ಕಾಗಿ ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತ ಬರುತ್ತಿದ್ದೇವೆ ಮುಂದೆಯು ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಹಿರಿಯ ವಕೀಲರಾದ ಐ.ಆರ್.ಪ್ರಮೋದ್ ಅವರು ಸಿಪಿಐ ಎಂ. ಬೆಳವಣಿಗೆ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಕಾರ್ಯಕಾರಿ ಮಂಡಳಿಯ ಯಾದವಶೆಟ್ಟಿ, ಯು.ಬಸವರಾಜ್, ಚಂದ್ರಪ್ಪ ವನಕಾರಿ, ಸಿಐಟಿಯು ರಾಜ್ಯ ಅಧ್ಯಕ್ಷೆ ಮಿನಾಕ್ಷಿ ಸುಂದರA, ಕೆ.ವಿಮಲ, ಎ.ಸಿ.ಸಾಬು, ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಧ್ಯಯನ ಶಿಬಿರದ ಮುಂದಾಳತ್ವ ವಹಿಸಿದ್ದ ಪಿ.ಆರ್.ಭರತ್ ಸ್ವಾಗತಿಸಿದರು,
ಶಾಜಿ ರಮೇಶ್ ವಂದಿಸಿದರು. ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ರಾಜ್ಯದ ೩೧ ಜಿಲ್ಲೆಗಳಿಂದ ೧೫೪ ಶಿಬಿರಾರ್ಥಿಗಳು ಭಾಗವಹಿಸಿದ್ದರು.