ಮಡಿಕೇರಿ, ಮೇ ೬: ಬ್ಯೂಟಿ ಪಾರ್ಲರ್‌ನವರ ಸೇವೆಯಲ್ಲಿನ ನ್ಯೂನತೆಯಿಂದಾಗಿ ಗ್ರಾಹಕರೊಬ್ಬರು ಕೂದಲು ಉದುರುವಿಕೆಯಾದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೂ. ೧ ಲಕ್ಷ ಪರಿಹಾರ ನೀಡಲು ಆದೇಶಿಸಿದೆ.
ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ, ವಕೀಲೆಯೂ ಆಗಿರುವ ಕಾವ್ಯ ಹೆಚ್.ಎಲ್. ಅವರು ಹೇರ್ ಸ್ಟೆçöÊಟ್ನಿಂಗ್ ಮತ್ತು ಇತರೆ ಸೇವೆಗಳನ್ನು ಮಾಡಿಸಿಕೊಳ್ಳಲು ಗೋಣಿಕೊಪ್ಪದ ನೆಲ್ಚಿ ದ ಬ್ಯೂಟಿ ಬೇ ಪಾರ್ಲರ್‌ಗೆ ರೂ. ೧೫ ಸಾವಿರ ಪಾವತಿಸಿ ಸೇವೆ ಪಡೆದುಕೊಂಡಿದ್ದರು. ಪಾರ್ಲರ್‌ನವರು ಕಡಿಮೆ ಗುಣಮಟ್ಟದ ಹಾನಿಕಾರಕ ಕ್ರೀಮ್‌ಗಳನ್ನು ಬಳಸಿದ್ದರಿಂದ ೨ ದಿನಗಳ ನಂತರ ಅವರ ಕೂದಲು ಒಣಗಿ ಉದುರುವಿಕೆಯಾಗಲು ಪ್ರಾರಂಭಿಸಿತು. ಪಾರ್ಲರ್‌ನವರ ಸೇವಾ ನಿರ್ಲಕ್ಷö್ಯತನದಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಕೊಡಿಸಿಕೊಡಬೇಕೆಂದು ಅವರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಕಾವ್ಯ ದೂರು ದಾಖಲಿಸಿ ತಾನು ಅನುಭವಿಸಿರುವ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಿಸಿಕೊಡಬೇಕಾಗಿ ಕೋರಿದ್ದರು. ಇವರ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿ ಜಿಲ್ಲಾ ಗ್ರಾಹಕರ ಆಯೋಗದ ಅನ್ಯ ಕರ್ತವ್ಯದ ಮೇರೆಗೆ ಇರುವ ಅಧ್ಯಕ್ಷರಾದ ಚಂಚಲ ಸಿ.ಎಂ. ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರು ಬ್ಯೂಟಿ ಪಾರ್ಲರ್ ಅವರ ಸೇವೆಯಲ್ಲಿ ನ್ಯೂನತೆ ಕಂಡುಬAದಿರುವುದರಿAದ ದೂರುದಾರರಿಗೆ ರೂ. ೧ ಲಕ್ಷ ಪರಿಹಾರವನ್ನು ಪಾವತಿಸಬೇಕೆಂದು ಆದೇಶಿಸಿದರು. ದೂರು ನೀಡಿದ ಕಾವ್ಯ ಅವರು ಸ್ವತಃ ವಕೀಲರಾಗಿದ್ದು, ಅವರೇ ಈ ಪ್ರಕರಣದ ಪರ ವಾದ ಮಂಡಿಸಿದರು.