ಮಡಿಕೇರಿ, ಮೇ ೬: ಕೊಡಗು ಗೌಡ ಯುವವೇದಿಕೆ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್ ಪಂದ್ಯಾಟದಲ್ಲಿ ಚೆಟ್ಟಿಮಾಡ, ಊರುಬೈಲು, ಬಾರಿಕೆ ತಂಡ ಮುಂದಿನ ಹಂತ ಪ್ರವೇಶಿಸಿದೆ.
ಬಾರಿಕೆ ಹಾಗೂ ದಂಡಿನ ನಡುವಿನ ಪಂದ್ಯದಲ್ಲಿ ಬಾರಿಕೆ ಜಯಗಳಿಸಿತು. ಬಾರಿಕೆ ೨ ವಿಕೆಟ್ ನಷ್ಟಕ್ಕೆ ೬೯ ರನ್ ಗಳಿಸಿತ್ತು. ದಂಡಿನ ೪ ವಿಕೆಟ್ ನಷ್ಟಕ್ಕೆ ೬೨ ರನ್ ಬಾರಿಸಿ ಸೋಲನುಭವಿಸಿತು. ನಡುವಟ್ಟಿರ ಹಾಗೂ ಚೆಟ್ಟಿಮಾಡ ನಡುವಿನ ಪಂದ್ಯದಲ್ಲಿ ಚೆಟ್ಟಿಮಾಡ ೮ ವಿಕೆಟ್‌ಗಳ ಜಯ ದಾಖಲಿಸಿತು. ನಡುವಟ್ಟಿರ ೩ ವಿಕೆಟ್ ನಷ್ಟಕ್ಕೆ ೫೦ ರನ್ ಪೇರಿಸಿತು. ಚೆಟ್ಟಿಮಾಡ ೪.೫ ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ೫೪ ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಬಳ್ಳಡ್ಕ ವಿರುದ್ಧ ಮೂಡಗದ್ದೆ ಪರಾಜಿತಗೊಂಡಿತು. ೩ ವಿಕೆಟ್ ನಷ್ಟಕ್ಕೆ ೫೨ ರನ್ ಮೂಡಗದ್ದೆ ತಂಡ ಕಲೆಹಾಕಿತು. ಗುರಿ ಬೆನ್ನತ್ತಿದ ಬಳ್ಳಡ್ಕ ೧ ವಿಕೆಟ್ ನಷ್ಟಕ್ಕೆ ೫೬ ರನ್ ಗಳಿಸಿ ಗೆಲುವು ಕಂಡಿತು. ಬಳ್ಳಡ್ಕ ಪರ ಜಿತು ೧೪ ಎಸೆತದಲ್ಲಿ ೭ ಸಿಕ್ಸರ್‌ವೊಂದಿಗೆ ಅಜೇಯ ೪೩ ರನ್ ಸಿಡಿಸಿ ಮಿಂಚಿದರು. ಗೋವಿಂದಮ್ಮನ ವಿರುದ್ಧ ಪೈಕೇರ ಗೆಲುವು ಪಡೆಯಿತು. ಗೋವಿಂದಮ್ಮನ ೬ ವಿಕೆಟ್ ನಷ್ಟಕ್ಕೆ ೬೦ ರನ್ ಗಳಿಸಿತು. ಪೈಕೇರ ೪.೪ ಓವರ್‌ನಲ್ಲಿ ೨ ವಿಕೆಟ್‌ಗೆ ೬೧ ರನ್ ಬಾರಿಸಿ ಜಯ ದಾಖಲಿಸಿತು.
ಕುದುಪಜೆ ಬಿ ವಿರುದ್ಧ ಹೊಸೊಕ್ಲು ಬಿ ಪರಾಭವಗೊಂಡಿತು. ಹೊಸೋಕ್ಲು ೧ ವಿಕೆಟ್ ನಷ್ಟಕ್ಕೆ ೬೦ ರನ್ ಬಾರಿಸಿತು. ಕುದುಪಜೆ ಬಿ ೩.೩ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೬೫ ರನ್ ಬಾರಿಸಿ ಗೆಲುವು ಪಡೆಯಿತು. ಪೋರೆ ಕುಂಜಿಲನ ವಿರುದ್ಧ ಊರುಬೈಲು ಜಯಗಳಿಸಿತು. ಪೋರೆಕುಂಜಿಲನ ೭ ವಿಕೆಟ್ ನಷ್ಟಕ್ಕೆ ೫೯ ರನ್ ಕಲೆಹಾಕಿತು. ಊರುಬೈಲು ೪.೪ ಓವರ್‌ಗಳಲ್ಲಿ ೬೧ ರನ್ ಗಳಿಸಿ ಗೆಲುವು ದಾಖಲಿಸಿತು. ಬಳ್ಳಡ್ಕ ವಿರುದ್ಧ ಚೆಟ್ಟಿಮಾಡ ಜಯಗಳಿಸಿತು. ೩ ವಿಕೆಟ್ ನಷ್ಟಕ್ಕೆ ೪೭ ರನ್ ಬಳ್ಳಡ್ಕ ದಾಖಲಿಸಿತು. ಚೆಟ್ಟಿಮಾಡ ೪.೧ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೫೨ ರನ್ ಪೇರಿಸಿ ವಿಜಯಿಯಾಯಿತು. ಕುದುಪಜೆ (ಬಿ) ವಿರುದ್ಧ ಊರುಬೈಲು ಜಯಗಳಿಸಿತು. ಕುದುಪಜೆ (ಬಿ) ೪ ವಿಕೆಟ್ ನಷ್ಟಕ್ಕೆ ೪೫ ರನ್ ಪೇರಿಸಿತು. ಊರುಬೈಲು ೩.೨ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೪೭ ರನ್ ಬಾರಿಸಿ ಗೆಲುವು ದಾಖಲಿಸಿತು. ಪೈಕೇರ ತಂಡವನ್ನು ಚೆಟ್ಟಿಮಾಡ ಮಣಿಸಿತು. ಪೈಕೇರ ೨ ವಿಕೆಟ್ ಕಳೆದುಕೊಂಡು ೪೬ ರನ್ ದಾಖಲಿಸಿತು. ಚೆಟ್ಟಿಮಾಡ ೨ ವಿಕೆಟ್ ನಷ್ಟಕ್ಕೆ ೫೨ ರನ್ ದಾಖಲಿಸಿ ಗೆಲುವು ದಾಖಲಿಸಿತು.