ಮಡಿಕೇರಿ, ಮೇ ೬: ಕೂರ್ಗ್ ಯುನೈಟೆಡ್ ಬಾಸ್ಕೆಟ್‌ಬಾಲ್ ಕ್ಲಬ್ ಪೊನ್ನಂಪೇಟೆ ವತಿಯಿಂದ ಟೀಗಲ್ ಹೂಪ್‌ಸ್ರ‍್ಸ್ ಹಾಗೂ ಡಿ. ಕೋರ್ಟ್ನ ಸಹಯೋಗದಲ್ಲಿ ತಾ. ೧೦ ರಂದು ಪೊನ್ನಂಪೇಟೆಯಲ್ಲಿ ಕೊಡಗು ಬಾಸ್ಕೆಟ್‌ಬಾಲ್ ಲೀಗ್ ಸೀಸನ್-೩ ಪಂದ್ಯಾವಳಿ ನಡೆಯಲಿದೆ. ಕೊಡಗಿನಲ್ಲಿ ಪ್ರಸ್ತುತ ಹಲವಾರು ರೀತಿಯ ಕ್ರೀಡೆಗಳು ನಡೆಯುತ್ತಿವೆ. ಇದರಲ್ಲಿ ಇದೀಗ ಬಾಸ್ಕೆಟ್‌ಬಾಲ್ ಪಂದ್ಯಾಟವೂ ಸೇರ್ಪಡೆಯಾಗಿದ್ದು, ಇದು ಮೂರನೆಯ ವರ್ಷದ ಪಂದ್ಯಾವಳಿಯಾಗಿದೆ.
ಕಳೆದ ೨ ವರ್ಷ ವೀರಾಜಪೇಟೆಯಲ್ಲಿ ಪಂದ್ಯಾಟ ಜರುಗಿದ್ದು, ಈ ಬಾರಿ ಪೊನ್ನಂಪೇಟೆ ಸೆಂಟ್ ಆ್ಯಂಟನೀಸ್ ಹೈಸ್ಕೂಲ್ ಮೈದಾನದಲ್ಲಿ ತಾ. ೧೦ ರಂದು ಪಂದ್ಯಾವಳಿ ನಿಗದಿಯಾಗಿದೆ. ಒಟ್ಟು ೬ ಫ್ರಾಂಚೈಸಿಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಕೊಡಗು ಮೂಲದ ಪ್ರತಿಷ್ಠಿತ ೭೦ ಬಾಸ್ಕೆಟ್ ಬಾಲ್ ಆಟಗಾರರು ವಿವಿಧ ತಂಡಗಳ ಪರ ಆಡಲಿದ್ದು, ಇದರಲ್ಲಿ ಅಂತರರಾಷ್ಟಿçÃಯ, ರಾಷ್ಟಿçÃಯ, ರಾಜ್ಯ ಮಟ್ಟದ ಖ್ಯಾತ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.
ಈ ಬಾರಿಯ ಕೊಡಗು ಬಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಮಾರ್ಷಲ್ಸ್ ಮಡಿಕೇರಿ, ಅವೇಂರ‍್ಸ್ ವೀರಾಜಪೇಟೆ, ಬಿಬಿಸಿ ಗೋಣಿಕೊಪ್ಪಲು, ಡಿ. ಕೋಚ್ ಪೊನ್ನಂಪೇಟೆ, ಟೀಗಲ್ + ಗೋಣಿಕೊಪ್ಪಲು ಹಾಗೂ ಕೂರ್ಗ್ ಯುನೈಟೆಡ್ ಪೊನ್ನಂಪೇಟೆ ತಂಡಗಳು ಭಾಗವಹಿಸಲಿವೆ. ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗಿದೆ.
ವಿಜೇತ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ರನ್ನರ್ಸ್ ತಂಡಕ್ಕೆ ರೂ. ೨೫ ಸಾವಿರ ನಗದು ಬಹುಮಾನವಿದೆ. ಅಲ್ಲದೆ ವೈಯಕ್ತಿಕ ವಿಭಾಗದ ಸಾಧಕರಿಗೆ ರೂ. ೩೦ ಸಾವಿರ ಮೊತ್ತದ ಬಹುಮಾನವಿದೆ. ಈ ಪಂದ್ಯಾಟದಲ್ಲಿ ಚೆನ್ನೆöÊ ಕಸ್ಟಮ್ಸ್ ಪರ ಆಡುತ್ತಿರುವ ಭಾರತ ತಂಡದ ಆಟಗಾರ ಪರದಂಡ ಎನ್ ಬೋಪಣ್ಣ, ರಾಷ್ಟಿçÃಯ ಆಟಗಾರ ಹಾಗೂ ಖೇಲೋ ಇಂಡಿಯಾ ಬೆಳ್ಳಿ ಪದಕ ವಿಜೇತ ಕುಂಬೆಯAಡ ಕರಣ್ ಅಯ್ಯಪ್ಪ, ರಾಷ್ಟಿçÃಯ ಆಟಗಾರರಾದ ಅರ್ಪಣ್ ಪೂಜಾರಿ, ಶ್ರೇಯಸ್ ಶೆಟ್ಟಿ ವಿವಿಧ ತಂಡಗಳ ಪರ ಆಡಲಿದ್ದು, ಮುಖ್ಯ ಆಕರ್ಷಣೆಯಾಗಿದ್ದಾರೆ.
ಆಟಗಾರರೂ ಆಗಿರುವ ಚೊಟ್ಟಂಗಡ ಸೋಮಯ್ಯ, ಮುಕ್ಕಾಟಿರ ಡ್ಯಾನಿ ಕಾವೇರಪ್ಪ, ಕುಂದಚ್ಚಿರ ನಿತಿನ್ ಮತ್ತಿತರರು ಪಂದ್ಯಾವಳಿಯ ಉಸ್ತುವಾರಿ ವಹಿಸಿದ್ದಾರೆ.