ನಾಪೋಕ್ಲು, ಮೇ ೬: ಮಡಿಕೇರಿ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕಡಂಗ - ಅರಪಟ್ಟು ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾ. ೨೫ ರಿಂದ ನಡೆಯಲಿರುವ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ಮಡಿಕೇರಿ ತಾಲೂಕಿಗೆ ಒಳಪಟ್ಟ ಆಸಕ್ತ ಕಲಾ ವಿದರಿಂದ ಕಲಾತಂಡಗಳಿAದ ಅರ್ಜಿ ಆಹ್ವಾನಿಸಲಾಗಿದೆ. ಭಾಗವ ಹಿಸುವ ಕಲಾವಿದರು ಹಾಗೂ ಕಲಾತಂಡಗಳು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಬಿಂಬಿ ಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಆಸಕ್ತರು ತಮ್ಮ ಹೆಸರನ್ನು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರು ಪೆಮ್ಮಂಡ ಕೌಶಿ ಕಾವೇರಮ್ಮ, ಮೊಬೈಲ್ ಸಂಖ್ಯೆ ೯೪೮೨೮೩೯೦೬೮ ಪಾಂಡAಡ ರಾಣಿ ಗಣಪತಿ, ಸಂಚಾಲಕರು, ಮೊಬೈಲ್ ಸಂಖ್ಯೆ ೯೪೮೦೧೭೦ ೮೦೪, ಕುಲ್ಲಚಂಡ ಶೋಭಾ ಸದಾ, ಕಾರ್ಯದರ್ಶಿ ಮೊಬೈಲ್ ಸಂಖ್ಯೆ ೯೯೦೨೧೪೪೯೩೧ ಇವರಲ್ಲಿ ತಾ. ೧೦ ರ ಸಂಜೆ ೫ ಗಂಟೆಯ ಒಳಗೆ ನೋಂದಾಯಿಸಿಕೊಳ್ಳುವAತೆ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಬಾಳೆಯಡ ದಿವ್ಯ ಮಂದಪ್ಪ ತಿಳಿಸಿದ್ದಾರೆ.