ಸುಂಟಿಕೊಪ್ಪ, ಮೇ ೬: ಸುಂಟಿಕೊಪ್ಪದಲ್ಲಿ ಮೇ ೨೯ಮತ್ತು ೩೦ ರಂದು ನಡೆಯಲಿರುವ ೧೭ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಕುರಿತಾದ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರು ಹಾಗೂ ಹಣಕಾಸು ಸಮಿತಿಯ ಅಧ್ಯಕ್ಷರು ಆಗಿರುವ ಎ.ಲೋಕೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ಮೇ.೧ ರಂದು ಸಂಜೆ ಸಾಹಿತ್ಯ ಸಮ್ಮೇಳನ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಹಾಗೂ ಜಿಲ್ಲಾ ಸಮ್ಮೇಳನದ ಕಾರ್ಯದರ್ಶಿ ಪಿ.ಎಫ್.ಸಬಾಸ್ಟೀನ್ ಜಿಲ್ಲಾ ಕಸಾಪದ ಸಹಕಾರ್ಯದರ್ಶಿ ಲೀಲಾ ಮೇದಪ್ಪ, ದ್ವಾರ ನಿರ್ಮಾಣ ಸಮಿತಿ ಅಧ್ಯಕ್ಷ ಹೆಚ್.ಯು.ರಫೀಕ್‌ಖಾನ್, ಸ್ಮರಣ ಸಂಚಿಕೆ ಸಂಪಾದಕ ಬಿ.ಸಿ.ದಿನೇಶ್, ಆರೋಗ್ಯ ಸಮಿತಿಯ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್, ಹಿರಿಯ ಪತ್ರಕರ್ತರಾದ ಬಿ.ಡಿ.ರಾಜು ರೈ ಉಪಸ್ಥಿತರಿದ್ದರು.