ಗೋಣಿಕೊಪ್ಪ ವರದಿ, ಮೇ. ೬: ಕಂಡAಗಾಲ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮುಲ್ಲೇಂಗಡ ಕುಟುಂಬ ವತಿಯಿಂದ ಆಯೋಜಿಸಿರುವ ಮೊದಲನೇ ವರ್ಷದ ಕೊಡವ ಕೌಟುಂಬಿಕ ಮುಲ್ಲೇಂಗಡ ಕಬಡ್ಡಿ ನಮ್ಮೆಗೆ ಚಾಲನೆ ನೀಡಲಾಯಿತು.
ಸಾಂಸ್ಕೃತಿಕ ಮೆರವಣಿಗೆ, ಕೊಡವ ನೃತ್ಯ, ದುಡಿಕೊಟ್ಟ್ ಪಾಟ್ ಮೆರಗು ನೀಡಿದವು. ಮುಲ್ಲೇಂಗಡ ಕುಟುಂಬ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಮುಲ್ಲೇಂಗಡ ಕುಟುಂಬ ಹಿಂದಿನಿAದಲೇ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಕುಟುಂಬಕ್ಕೆ ಹೆಸರು ತಂದಿರುವAತ ಕುಟುಂಬವಾಗಿದೆ. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆ ಆಯೋಜನೆ ಮೂಲಕ ವಿಶೇಷತೆ ಮೂಡಿಸಿದೆ. ಭವಿಷ್ಯದಲ್ಲಿ ಮತ್ತಷ್ಟು ತಂಡಗಳು ಕಬಡ್ಡಿ ಆಟದಲ್ಲಿ ತೊಡಗಿಕೊಳ್ಳಬೇಕಿದೆ. ಪಂದ್ಯಗಳ ಮೂಲ ಸೌಕರ್ಯಕ್ಕೆ ಆದ್ಯತೆ ಅವಶ್ಯವಾಗಿದ್ದು, ೧ ಲಕ್ಷ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗುವುದು. ಕ್ರೀಡೆಯಿಂದ ಉದ್ಯೋಗ ಗಿಟ್ಟಿಸಿಕೊಳ್ಳುವ ಅವಕಾಶವನ್ನು ಕ್ರೀಡಾಪಟುಗಳು ಕೈಚೆಲ್ಲಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ರಾಜ್ಯ ಸರ್ಕಾರ ಕ್ರೀಡೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಕೊಡವ ಕಬಡ್ಡಿ ಕ್ರೀಡೆಯನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಸಿಂಥೆಟಿಕ್ ಮ್ಯಾಟ್ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ವೀರಾಜಪೇಟೆ ಫೆಡರೇಷನ್ ಅಧ್ಯಕ್ಷ ವಾಟೇರಿರ ಬೋಪಣ್ಣ ಮಾತನಾಡಿ, ಕಬಡ್ಡಿ ಕ್ರೀಡೆಗೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ಮಹಾಬಾರತದಲ್ಲಿ ಕೂಡ ಉಲ್ಲೇಖವಿದೆ. ಇದರಿಂದಾಗಿ ಕಬಡ್ಡಿ ಕ್ರೀಡೆ ವಿಶೇಷತೆ ಪಡೆದುಕೊಂಡಿದೆ. ಕೌಟುಂಬಿಕ ಕ್ರೀಡೆಯಾಗಿ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ವೀರಾಜಪೇಟೆ ಹಿರಿಯ ನಾಗರಿಕ ವೇದಿಕೆ ಕಾರ್ಯದರ್ಶಿ ಪಾರುವಂಗಡ ಸನ್ನಿ ಮೊಣ್ಣಪ್ಪ ಕ್ರೀಡೆ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಕೊಡವ ನೃತ್ಯ ಪ್ರದರ್ಶನಗೊಂಡಿತು. ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಪ್ರಾರ್ಥಿಸಿದರು. ಮುಲ್ಲೇಂಗಡ ಕುಟುಂಬದ ಕಾರ್ಯದರ್ಶಿ ಮುಲ್ಲೇಂಗಡ ಕಿಟ್ಟು ಕುಟ್ಟಪ್ಪ ಸ್ವಾಗತಿಸಿದರು. ಮುಲ್ಲೇಂಗಡ ಮದೋಶ್ ಪೂವಯ್ಯ ನಿರೂಪಿಸಿದರು.
ಬೇರಳಿನಾಡ್ ತಕ್ಕ ಮಳವಂಡ ಭುವೇಶ್ ದೇವಯ್ಯ, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಕೆಂಜAಗಡ ಗಣಪತಿ ಧ್ವಜಾರೋಹಣ ನೆರವೇರಿಸಿದರು. ಮುಲ್ಲೇಂಗಡ ಕುಟುಂಬ ಸದಸ್ಯರು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪಾಲ್ಗೊಂಡರು. ನಮ್ಮೆ ಆಯೋಜನೆ ಸಂದರ್ಭ ಮೊದಲ ಬಾರಿಗೆ ನೋಂದಣಿ ಮಾಡಿಕೊಂಡ ೧೦ ತಂಡಗಳಾದ ಮಾಚಂಗಡ, ದೇಯಂಡ, ನಡಿಕೇರಿಯಂಡ, ಚೆಪ್ಪುಡಿರ, ಬಾಚಮಾಡ, ಚಂದುರ, ಪಟ್ರಪಂಡ, ನಂದಿನೆರವAಡ, ಬಲ್ಲಡಿಚಂಡ ಹಾಗೂ ಮೀದೇರಿರ ಕುಟುಂಬಕ್ಕೆ ವಿಶೇಷ ಗೌರವ ಸಲ್ಲಿಸಲಾಯಿತು. ಹಿರಿಯರಾದ ಮುಲ್ಲೇಂಗಡ ಮಣಿ ಮುತ್ತಣ್ಣ ಇದ್ದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ)
ಫಲಿತಾಂಶ
ಚAದುರ ತಂಡ ಆದೇಂಗಡ ವಿರುದ್ದ ೩೫-೧೫ ಅಂಕಗಳ ಮೂಲಕ ಜಯಿಸಿತು. ಕಂಬೇಯAಡ ಚೆಟ್ಟಂಗಡ ತಂಡವನ್ನು ೩೬-೧೮ ಅಂಕಗಳಿAದ ಸೋಲಿಸಿತು. ಬಲ್ಲಡಿಚಂಡ ನೆಲ್ಲಚಂಡ ವಿರುದ್ದ ೧೯-೧೬ ಅಂಕಗಳಿAದ ಗೆಲುವು ಪಡೆಯಿತು. ಮಾಚಂಗಡ ೩೮ - ೩೪ ಅಂಕಗಳಿAದ ಕಂಜಿತAಡ ವಿರುದ್ಧ ಜಯಿಸಿತು. ಕೋಲತಂಡ ಗೈರಿನಿಂದ ಸಣ್ಣುವಂಡ, ಮಳವಂಡ ಗೈರಿನಿಂದ ಮೀದೇರಿರ, ಪಟ್ರಪಂಡ ಗೈರಿನಿಂದ ಕುಟ್ಟಂಡ (ಮಾದಾಪುರ) ಗೆಲುವು ಪಡೆಯಿತು. ಮಲ್ಲಂಡ ೩೮-೧೦ ಅಂಗಳಿAದ ಚಾರಿಮಂಡವನ್ನು ಸೋಲಿಸಿತು. ಚೊಟ್ಟೆಯಾಂಡಮಾಡಕ್ಕೆ ನಂಬುಡುಮಾಡ ವಿರುದ್ಧ ೨೩-೧೫ ಅಂಕಗಳ ಗೆಲುವು ಲಭಿಸಿತು. ನೆರವಂಡ ೧೪-೨ ಅಂಕಗಳಿAದ ನಡಿಕೇರಿಯಂಡ ತಂಡವನ್ನು ಪರಾಭವಗೊಳಿಸಿತು. ಮಾಚಂಗಡ ೨೮-೧೬ ಅಂಕಗಳಿAದ ಸಣ್ಣುವಂಡ ತಂಡವನ್ಗನು ಮಣಿಸಿತು. ಕಾಳಿಮಾಡ ಅಪ್ಪಂಡೇರAಡ ತಂಡವನ್ನು ೨೪-೫ ಅಂಕಗಳಿAದ, ಬೊಟ್ಟೋಳಂಡ ತಂಡ ಬಾಚಮಾಡ ತಂಡವನ್ನು ೩೦-೧೧ ಅಂಕಗಳಿAದ ಸೋಲಿಸಿತು.