ಮಡಿಕೇರಿ, ಮೇ ೬: ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಕವಿ, ಕತೆಗಾರ ಅಬ್ದುಲ್ ರಶೀದ್ ಅವರನ್ನು ಆಯ್ಕೆ ಮಾಡಲಾಗಿದೆ.

ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಒಮ್ಮತದಿಂದ ಸರ್ವಾಧ್ಯಕ್ಷರ ಆಯ್ಕೆ ಮಾಡಲಾಯಿತು. ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಸುಂಟಿಕೊಪ್ಪದಲ್ಲಿ ತಾ. ೨೯ ಹಾಗೂ ೩೦ ನಡೆಯಲಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ೧೧ಕ್ಕೂ ಹೆಚ್ಚು ಉಪಸಮಿತಿಗಳನ್ನು ರಚಿಸಿ ಸಮ್ಮೇಳನದ ತಯಾರಿಗೆ ಚಾಲನೆ ನೀಡಲಾಗಿದೆ ಎಂದು ಕೇಶವ ಕಾಮತ್ ವಿವರಿಸಿದರು. ಮೂಲತಃ ಸುಂಟಿಕೊಪ್ಪ ನಿವಾಸಿಯಾದ ಅಬ್ದುಲ್ ರಶೀದ್ ಅವರು ಕನ್ನಡದ ಬರಹಗಾರ, ಕವಿ, ಸಂಪಾದಕ, ಅಂಕಣಕಾರ ಮತ್ತು ಅನುವಾದಕರಾಗಿದ್ದು, ೨೦೦೪ರಲ್ಲಿ ಅವರು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಜೀವಮಾನ ಸಾಧನೆಗಾಗಿ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾಗಿಯೂ ಕಾರ್ಯನಿರ್ವಹಿಸಿದ್ದರು.

ರಶೀದ್ ಅವರು ಎರಡು ಕಾದಂಬರಿಗಳು, ನಾಲ್ಕು ಸಣ್ಣ ಕಥೆಗಳ ಪುಸ್ತಕಗಳು, ನಾಲ್ಕು ಸೃಜನಶೀಲ ಪ್ರಬಂಧಗಳು ಮತ್ತು ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ

ರಶೀದ್ ಅವರ ಪ್ರಶಸ್ತಿ ವಿಜೇತ ಕೃತಿಗಳಲ್ಲಿ ನಾಲ್ಕು ಸಣ್ಣ ಕಥೆಗಳ ‘ಪ್ರಾಣಪಕ್ಷಿ’, ‘ಹಲ್ಲು ಕುಳಿಗಳ ಹುಡುಗ’, ‘ಸಂಪೂರ್ಣ ಪಾರಿಜಾತ’ ಮತ್ತು ‘ಈತನಕದ ಕೇತೆಗಳು’ ಸೇರಿವೆ. ಅವರ ಕೃತಿಗಳನ್ನು ಸಾಹಿತ್ಯ ಅಕಾಡೆಮಿ ಗುರುತಿಸಿ ೨೦೦೪ ರಲ್ಲಿ ತನ್ನ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರು ತಮ್ಮ “ಹಾಲು ಕೂಡಿಗೆ ಹುಡುಗ” ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದೆ. ಇದಲ್ಲದೇ ಅವರು ಪತ್ರಿಕೋದ್ಯಮಕ್ಕಾಗಿ ಸಂದೇಶ ಪ್ರಶಸ್ತಿ, ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಕೆಂಪೇಗೌಡ ಪ್ರಶಸ್ತಿ, ಸೇರಿದಂತೆ ಹಲವಾರು ಇತರ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.