ಚೆಯ್ಯಂಡಾಣೆ, ಮೇ ೬: ವೀರಾಜಪೇಟೆ-ನಾಪೋಕ್ಲು ಮುಖ್ಯರಸ್ತೆಯ ಕಡಂಗ ಪಟ್ಟಣದಲ್ಲಿ ಅಂಗಡಿ ಮಳಿಗೆಗಳು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ.
ಕಡAಗ ಪಟ್ಟಣದ ಹೃದಯಭಾಗದಲ್ಲಿರುವ ಹೊಟೇಲ್, ಮೊಬೈಲ್ ಹಾಗೂ ತರಕಾರಿ ಅಂಗಡಿಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಮಧ್ಯಾಹ್ನ ೩ ಗಂಟೆಯ ಸಮಯದಲ್ಲಿ ಹೊಟೇಲ್ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಬೆಂಕಿಯ ಜ್ವಾಲೆ ಅಂಗಡಿ ಮುಂಗಟ್ಟುಗಳಿಗೆ ಆವರಿಸಿ ಮೊಬೈಲ್ ಅಂಗಡಿಯಲ್ಲಿದ್ದ ಮೊಬೈಲ್, ಲ್ಯಾಪ್‌ಟಾಪ್ ಮತ್ತಿತರ ಬೆಲೆಬಾಳುವ ವಸ್ತುಗಳು, ಹೊಟೇಲ್ ಹಾಗೂ ತರಕಾರಿ ಅಂಗಡಿಯಲ್ಲಿAದ ವಸ್ತುಗಳು ಸುಟ್ಟು ಕರಕಲಾಗಿವೆ.
ಗ್ರಾಮದ ಯುವಕರು ಟ್ರಾಕ್ಟರ್, ಪಿಕಪ್ ಮೂಲಕ ನೀರು, ಜನರೇಟರ್‌ಗಳನ್ನು ತಂದು ವಾಟರ್ ಪಂಪ್‌ಗಳ ಮೂಲಕ ನೀರುಹಾಯಿಸಿ ¨ಂಕಿಯನ್ನು ನಂದಿಸಲು ಶ್ರಮಿಸಿದರು. ದುರಂತ ಸಂಭವಿಸಿದ ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ತಲುಪಲಿಲ್ಲ. ಗೋಣಿಕೊಪ್ಪದಿಂದ ಅಗ್ನಿಶಾಮಕ ದಳ ಬರಬೇಕಾಗಿರುವುದರಿಂದ ಈ ಸಮಸ್ಯೆಯಾಗಿದೆ. ವೀರಾಜಪೇಟೆಯಲ್ಲಿ ಅಗ್ನಿಶಾಮಕ ಠಾಣೆ ಆದರೆ ಉಪಯೋಗವಾಗಲಿದೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.