ಮಡಿಕೇರಿ ಮೇ.೬: ಕರ್ನಾಟಕ ಕಂಗ್ ಫೂ ಸಂಸ್ಥೆ ವತಿಯಿಂದ ಸೋಮವಾರಪೇಟೆಯಲ್ಲಿ ಕಂಗ್ ಫೂ ಕಲರ್ ಬೆಲ್ಟ್ ಪರೀಕ್ಷೆ ನಡೆಯಿತು.

ಚನ್ನಬಸಪ್ಪ ಹಾಲ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ೩೦ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ವಿತರಿಸಲಾಯಿತು. ಕರ್ನಾಟಕ ಕಂಗ್ ಫೂ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಷ್ಟಿçÃಯ ತರಬೇತುದಾರ ಎನ್.ಸಿ ಸುದರ್ಶನ್ ಅವರ ನೇತೃತ್ವದಲ್ಲಿ ಪರೀಕ್ಷಕ ಚಂದ್ರು ಡಿ. ಪರೀಕ್ಷೆ ನಡೆಸಿಕೊಟ್ಟರು.