ಮಡಿಕೇರಿ, ಮೇ. ೫: ಕೊಟ್ಟಮುಡಿ ಮತ್ತು ಆಝದ್ ನಗರದಿಂದ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಯಾತ್ರಿಕರಿಗೆ ಕೊಟ್ಟಮುಡಿ ಜಮಾಅತ್ ವತಿಯಿಂದ ಮಸೀದಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಹೆಚ್.ಎ. ಹಂಸ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಜ್ ಯಾತ್ರೆಗೆ ಸಜ್ಜಾಗಿರುವ ಯಾತ್ರಿಕರನ್ನು ಜಮಾಅತ್ ವತಿಯಿಂದ ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು. ಸಮಾರಂಭದಲ್ಲಿ ಜಮಾಅತ್ ಪ್ರಮುಖರು, ಧಾರ್ಮಿಕ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.