ಕುಶಾಲನಗರ, ಮೇ ೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾಗಿದ್ದ ಲೀಲಾವತಿ ಅವರಿಗೆ ವರ್ಗಾವಣೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಲೀಲಾವತಿ ಅವರು ಚನ್ನರಾಯಪಟ್ಟಣದ ಕೇಂದ್ರ ಕಚೇರಿಗೆ ವರ್ಗವಾಗಿದ್ದು ಅವರ ಸ್ಥಾನಕ್ಕೆ ವಿಠಲ ಸಾಲಿಯಾನ್ ಅವರನ್ನು ನೇಮಕ ಮಾಡಲಾಗಿದೆ.