ಮಡಿಕೇರಿ ಮೇ ೫: ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಮ್ ಕಾರ್ಯಪ್ಪ ಕಾಲೇಜಿನ ಎನ್.ಎಸ್ .ಎಸ್ ಘಟಕಗಳು ಸಂಯುಕ್ತವಾಗಿ “ಮಾದಕ ವಸ್ತು ದುರುಪಯೋಗ ಮತ್ತು ಮಾದಕ ವಸ್ತು ಮುಕ್ತ ಜಿಲ್ಲೆ” ಕುರಿತು ಜಾಗೃತಿ ಉಪನ್ಯಾಸವನ್ನು ಆಯೋಜಿಸಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವೃತ್ತ ನಿರೀಕ್ಷಕರಾದ ಪಿ.ಕೆ. ರಾಜು ಅವರು ಭಾಗವಹಿಸಿ ಮಾತನಾಡಿ, ಯುವಕರಲ್ಲಿ ಹೆಚ್ಚುತ್ತಿರುವ ಮದ್ಯ/ಮಾದಕ ವಸ್ತುಗಳ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದಾದ ವಿವಿಧ ಸಹಾಯವಾಣಿ ಸಂಖ್ಯೆಗಳನ್ನು ಹಾಗೂ ಏSP ಆ್ಯಪ್ ಸಂಬAಧಿತ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ “ಸಮ್ಮಿತ್ರಾ ಆಪ್” ಕುರಿತು ಮಾಹಿತಿ ನೀಡಿ, ಮಾದಕ ವಸ್ತುಗಳನ್ನು ದುರುಪಯೋಗಪಡಿಸುವವರ ಬಗ್ಗೆ ವಿವರಗಳನ್ನು ನೀಡುವ ಮೂಲಕ ಸಮಾಜದಲ್ಲಿ ಈ ಸಮಸ್ಯೆಯನ್ನು ನಿರ್ಮೂಲಗೊಳಿಸಲು ವಿದ್ಯಾರ್ಥಿಗಳು ಸಹಕರಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೇಜರ್ ಪ್ರೊ. ರಾಘವ ಬಿ. ಅವರು ಮಾತನಾಡಿ, ನಮ್ಮ ಜಿಲ್ಲೆಯನ್ನು ಡ್ರಗ್ ಮುಕ್ತ ಜಿಲ್ಲೆಯಾಗಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಿದರು. ಎ.ಎಸ್.ಐ ಎಂ.ಡಿ ಗಣೇಶ್ ಅವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಪ್ರದೀಪ್ ಆರ್. ಭಂಡಾರಿ ಅವರು ಸ್ವಾಗತ ಭಾಷಣ ಮಾಡಿದರು ಹಾಗೂ ಧನ್ಯವಾದಗಳನ್ನು ಎನ್.ಎಸ್.ಎಸ್ ಅಧಿಕಾರಿ ಆಲೋಕ್ ಬೆಜೈ ಅವರು ಸಲ್ಲಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಶೈಲಶ್ರೀ ಕೆ, ಇತರ ಪೊಲೀಸ್ ಸಿಬ್ಬಂದಿ, ಎನ್.ಎಸ್.ಎಸ್ ನಾಯಕರು, ಸ್ವಯಂಸೇವಕರು ಮತ್ತು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.