ಗೋಣಿಕೊಪ್ಪಲು, ಮೇ.೫: ವೀರಾಜಪೇಟೆ, ಪೊನ್ನಂಪೇಟೆ ತಾಲೂಕು ವೀರ ಮಡಿವಾಳ ಮಾಚೀ ದೇವರ ಸಂಘದಿAದ ತಾ.೯ ಹಾಗೂ ೧೦ ರಂದು ಕೊಡಗು ಜಿಲ್ಲೆಗೆ ಸೀಮಿತಗೊಂಡ ಮಡಿವಾಳ ಜನಾಂಗ ಬಾಂಧವರಿಗೆ ಮಡಿವಾಳ ಕ್ರಿಕೆಟ್ ಕಪ್- ೨೦೨೬ ಅನ್ನು ಗೋಣಿಕೊಪ್ಪಲುವಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಅಂಗವಾಗಿ ಮಡಿವಾಳ ಸಂಘದ ಅಧ್ಯಕ್ಷ ಡಿ.ಪಿ ರಾಜೇಶ್ ಸೇರಿದಂತೆ ಪದಾಧಿಕಾರಿಗಳು ಲಾಂಛನ ಬಿಡುಗಡೆ ಮಾಡಿದರು.

ಗೋಣಿಕೊಪ್ಪಲುವಿನ ಮಹಿಳಾ ಸಮಾಜ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಪಿ ರಾಜೇಶ್, ಕಳೆದ ೩ ವರ್ಷಗಳಿಂದ ಮಡಿವಾಳ ಸಮುದಾಯ ಬಂಧುಗಳಿಗೆ ಸೀಮಿತಗೊಂಡAತೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತ ಬಂದಿದ್ದೇವೆ. ಈ ಬಾರಿ ಮಹಿಳೆಯರನ್ನೊಳಗೊಂಡು ವಿವಿಧ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಂದ್ಯಾವಳಿಯಲ್ಲಿ ಜಿಲ್ಲೆಯ ೨೫೦ ಕುಟುಂಬಗಳು ಭಾಗವಹಿಸಲಿವೆ.

ಕ್ರೀಡೋತ್ಸವದ ಅಂಗವಾಗಿ ಮಹಿಳೆಯರಿಗೆ ಹಗ್ಗಜಗ್ಗಾಟ, ಮಕ್ಕಳಿಗೆ ಆಟೋಟ ಸ್ಪರ್ಧೆ ನಡೆಯಲಿದ್ದು ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ. ೨೦ ಸಾವಿರ ನಗದು, ಆಕರ್ಷಕ ಪಾರಿತೋಷಕ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.೧೦ ಸಾವಿರ ನಗದು ಹಾಗೂ ಪಾರಿತೋಷಕಗಳನ್ನು ನೀಡಲಾಗುತ್ತದೆ. ಕಾರ್ಯಕ್ರಮದ ಅಂಗವಾಗಿ ಜನಾಂಗದ ನಿವೃತ್ತ ಸೈನಿಕರಿಗೆ ಕಲೆ, ಸಾಹಿತ್ಯ, ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು. ಕ್ರೀಡೋತ್ಸವದ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್ ಅರುಣ್ ಮಾಚಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲೆಯ ಅಧ್ಯಕ್ಷರಾದ ಎಂ.ಪಿ ಕೇಶವ್ ಕಾಮತ್, ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಮಡಿವಾಳ ಸಮಾಜದ ರಾಜ್ಯಾಧ್ಯಕ್ಷರಾದ ಸಿ ನಂಜಪ್ಪ, ಮೂಡುಬಿದಿರೆಯ ಕಾರಂಜಿ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಘದ ಕ್ರೀಡಾ ಸಮಿತಿಯ ಸಂಚಾಲಕ ವಿನು ಶ್ರೀಜಿತ್, ರತನ್, ರಮ್ಯ, ಗಣೇಶ್, ಸೇರಿದಂತೆ ಸಮಿತಿಯ ಉಪಾಧ್ಯಕ್ಷರುಗಳಾದ ಗಿರಿಜಾ ಕಾಶಿ, ಡಿ.ಜೆ ಕೇಶವ, ಪ್ರಧಾನ ಕಾರ್ಯದರ್ಶಿ ಎಂ ಮಹಾದೇವ, ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಕೆ ರವಿಕುಮಾರ್, ಪದಾಧಿಕಾರಿಗಳಾದ ಡಿ.ಸಿ ಗಿರೀಶ್, ರಮ್ಯ ಗಣೇಶ್ ಉಪಸ್ಥಿತರಿದ್ದರು.