ವೀರಾಜಪೇಟೆ, ಮೇ ೩: ವೀರಾಜಪೇಟೆ ಬಾಳುಗೋಡು ಅಂಬಟ್ಟಿ ಗ್ರಾಮದ ವಿಜಯ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಅಂಬಟ್ಟಿ ಗ್ರಾಮದಲ್ಲಿ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಮಿತಿಯ ಮನವಿಯ ಮೇರೆಗೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಕೈಜೋಡಿಸಿದ್ದು, ಸಮಿತಿಯ ಸದಸ್ಯರು ಕಾವೇರಿ ಕಾಲೇಜು ಅನತಿ ದೂರದ ತಿರುವು ಭಾಗದಿಂದ ಚೇನಂಡ ಗಣಪತಿ ಅವರ ಮನೆಯವರೆಗೆ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಮತ್ತು ನಿರುಪಯುಕ್ತ ವಸ್ತುಗಳ ಹೆಕ್ಕಿ ಸ್ವಚ್ಚಗೊಳಿಸಿತು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಎನ್.ಸಿ. ವಿಜಯ ಕುಮಾರ್, ಉಪಾಧ್ಯಕ್ಷ ಆಟ್ರಂಗಡ ವಿಶ್ವನಾಥ್, ಕಾರ್ಯದರ್ಶಿ ಪ್ರಮೋದ್, ಹೇಮಾ, ವಕೀಲರಾದ ಅಮೃತ್, ಚೇನಂಡ ಸುರೇಶ್, ಗಣೇಶ್, ಮಂಜುನಾಥ್ ಹರಿಣಿ, ಶರಿ, ಬಿಬಿನ್ ಹಾಗೂ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.