ವೀರಾಜಪೇಟೆ, ಮೇ ೩: ಫಲಾನುಭವಿಗಳ ಹಿತರಕ್ಷಣೆ ಅಧಿಕಾರಿಗಳ ಆದ್ಯ ಕರ್ತವ್ಯ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸರಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವಂತೆ ವೀರಾಜಪೇಟೆ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಿ.ವಿ. ಜಾನ್ಸನ್ ಹೇಳಿದರು.

ನಗರದಲ್ಲಿನ ಶಾಸಕರ ಕಚೇರಿಯಲ್ಲಿ ನಡೆದ ವೀರಾಜಪೇಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹಲಕ್ಷಿö್ಮ ಯೋಜನೆ ಕುರಿತು ಅಧಿಕಾರಿ ತಂಗಮ್ಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಬಿವೃದ್ಧಿ ಅಧಿಕಾರಿ ರೀತಾ ಮಾಹಿತಿ ನೀಡಿದರು. ೨೧,೬೯೧ ಫಲಾನುಭವಿಗಳು ಇರುವುದಾಗಿಯೂ ೪೫ ಜನ ಫಲಾನುಭವಿಗಳು ಮರಣ ಹೊಂದಿರುವುದಾಗಿ ತಿಳಿಸಿದರು ಮರಣಗೊಂಡ ವರದಿ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಪತ್ರ ರವಾನಿಸಿ ಸರಿಯಾದ ಮಾಹಿತಿ ಕ್ರೋಢೀಕರಿಸಲು ಅಧ್ಯಕ್ಷರು ಸೂಚಿಸಿದರು. ಇದಕ್ಕೆ ಅಧಿಕಾರಿಗಳು ಪ್ರತಿಕ್ರಿಯಿಸಿ ಸ್ಪೆçಡ್ ಶೀಟ್ ಹಾಕಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅನ್ನಭಾಗ್ಯ ಯೋಜನೆ ಕುರಿತು ಮಾತನಾಡಿ ಹೊಸ ಕಾರ್ಡು ತಿದ್ದುಪಡಿ ಇತ್ಯಾದಿಗಳಿಗೆ ಅವಕಾಶ ಇಲ್ಲ. ೨೦೨೫ ರವರೆಗೆ ಏನ್‌ಆರ್‌ಸಿ ಆಗಿರುತ್ತದೆ ಬಿಪಿಎಲ್ ಪಡಿತರ ಚೀಟಿ ಎಪಿಎಲ್ ಆಗಲು ೪೯೨ ಅರ್ಜಿ ಪೈಕಿ ೨೯೨ ವಿಲೇವಾರಿ ಆಗಿದ್ದಾಗಿ ತಿಳಿಸಿದರು. ವೈದ್ಯಕೀಯ ಸೌಲಭ್ಯಕ್ಕಾಗಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸುವುದನ್ನು ಮತ್ತು ಈಗಾಗಲೇ ಪ್ರಸ್ತುತ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ವಿಳಾಸ ಬದಲಾವಣೆ, ಹೆಸರು ಸೇರ್ಪಡೆ ಮಾಡುವ ಪ್ರಕ್ರೀಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದಾಯ ತೆರಿಗೆ ಪಾವತಿದಾರರೆಂದು ಅನರ್ಹಗೊಂಡಿದ್ದ ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಅದರಲ್ಲಿ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಯಿಂದ ಬಿಪಿಎಲ್ ಪಡಿತರ ಚೀಟಿಗೆ ಬದಲಾಯಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಯುವನಿಧಿಗೆ ಸಂಬAಧಿಸಿದAತೆ ಮಾಹಿತಿ ಪಡೆದು ಗ್ಯಾರಂಟಿ ಯೋಜನಾ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಜಾನ್ಸನ್ ಅವರು, ಹಣ ಪಾವತಿಯಲ್ಲಿ ವಿದ್ಯಾರ್ಥಿಗಳಿಗೆ ವಂಚನೆಯಾಗದAತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ತಾಲೂಕಿನ ಯಾವುದೇ ಕಾಲೇಜುಗಳಲ್ಲಿ ಯುವನಿಧಿ ಯೋಜನೆಯ ಅರಿವು ಮತ್ತು ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದರು. ಯುವನಿಧಿ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು ಮಾರ್ಚ್ ಅಂತ್ಯಕ್ಕೆ ೩೦೫ ಡಿಗ್ರಿಯವರು ಹಾಗೂ ೬ ಡಿಪ್ಲೋಮಾದವರು ನೋಂದಾಯಿಸಿದ್ದು ಅವರಿಗೆ ೯೦,೬೦,೦೦೦ ಡೆಬಿಟ್ ಆಗಿರುತ್ತದೆ ಎಂದರು.

ಹಾಡಿಗಳಲ್ಲಿರುವ ಭಾಗಕ್ಕೆ ಆ ಭಾಗದಲ್ಲಿರುವ ಗ್ಯಾರಂಟಿ ಸಮಿತಿ ಸದಸ್ಯರೊಂದಿಗೆ ಹೆಚ್ಚು ಪ್ರಚಾರ ಕಾರ್ಯ ಇರಬೇಕು. ಹಾಡಿಗಳಲ್ಲಿ ಪದವಿ ಹೊಂದಿದವರು ಬಿಟ್ಟು ಹೋಗದಂತೆ ಹಾಡಿಗಳಲ್ಲಿರುವ ಭಾಗಕ್ಕೆ ಗ್ಯಾರಂಟಿ ಸಮಿತಿ ಸದಸ್ಯರು ಪ್ರಚಾರ ಕಾರ್ಯ ಮಾಡಲು ಅಧ್ಯಕ್ಷರು ಸೂಚಿಸಿದರು. ತಾ.ಪಂ. ಇಒ ಮಾತನಾಡಿ, ಶೀಘ್ರದಲ್ಲಿ ಪ್ರಚಾರ ನಡೆಸಿ ವಾರಕ್ಕೆ ಒಂದರAತೆ ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು. ಶಕ್ತಿ ಯೋಜನೆ ಬಗ್ಗೆ ಮಾತನಾಡಿದ ಅಧ್ಯಕ್ಷರು ಮಾಲ್ದಾರೆ, ಪಿರಿಯಾಪಟ್ಟಣ ಭಾಗದಲ್ಲಿ ಹೆಚ್ಚಿನ ಶಾಲಾ ಮಕ್ಕಳಿದ್ದು ಬಸ್ಸು ಸೌಲಭ್ಯವಿಲ್ಲದೆ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಿದ್ದು ಮೇ ತಿಂಗಳಿನಿAದ ಆ ಭಾಗಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಲು ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು. ಹಾಗೆಯೇ ವೀರಾಜಪೇಟೆ ಭಾಗಕ್ಕೆ ಒಂದು ಬಸ್ಸಿನ ವ್ಯವಸ್ಥೆ ಅವಶ್ಯಕತೆ ಇದ್ದು ಕ್ರಮ ವಹಿಸಲು ಅಧಿಕಾರಿಗೆ ಸೂಚಿಸಿದರು. ವೀರಾಜಪೇಟೆಯಿಂದ ಗೋಣಿಕೊಪ್ಪ ಭಾಗಕ್ಕೆ ಗೋಣಿಕೊಪ್ಪ ಸಂತೇ ದಿನ ಹೆಚ್ಚಿನವರು ಸಂತೆಗೆ ತೆರಳಲು ನಿತ್ಯ ಸಂಚಾರ ಬಸ್ಸು ಸೌಲಭ್ಯ ಇಲ್ಲ. ಜನರು ಹೆಚ್ಚು ತೊಂದರೆಗೊಳಾಗುತ್ತಿದ್ದು ದಿನನಿತ್ಯ ಓಡಾಡುವ ಬಸ್ಸನ್ನು ಯಥಾವತ್ತಾಗಿ ಬಿಡಲು ಕ್ರಮ ಕೈಗೊಳ್ಳಬೇಕು ಎಂದರು. ಡಿಪೋ ವ್ಯವಸ್ಥಾಪಕರಾದ ದರ್ಶನ್ ಅವರು ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ ಅಪ್ಪಣ್ಣ ಮಾತನಾಡಿ, ಶಕ್ತಿ ಯೋಜನೆ ಬಂದಮೇಲೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಗೃಹಜ್ಯೋತಿಗೆ ಸಂಬAಧಿಸಿದAತೆ ಮಾತನಾಡಿದ ಸೆಸ್ಕ್ ಎಇಟಿ ಸುನೀತ ೩೩,೩೭೮ ಫಲಾನುಭವಿಗಳ ಪೈಕಿ ೩೩೧೯೮ ಫಲಾನುಭವಿಗಳಿಗೆ ಗೃಹಜೋತಿ ಸೌಲಭ್ಯ ನೀಡಲಾಗಿದೆ. ಆಧಾರ್ ಕಾರ್ಡ್ ಮಿಸ್ ಮ್ಯಾಚ್ ಇದ್ದು ೧೦೦% ಸಾಧ್ಯವಾಗಿಲ್ಲವೆಂದು ತಿಳಿಸಿದರು. ಟ್ರಾನ್ಸ್ಫಾರ್ಮರ್ ಬದಲಾವಣೆಗೆ ಹಲವು ಸಭೆಗಳಲ್ಲಿ ತಿಳಿಸಿದರೂ ಇದುವರೆಗೂ ಕ್ರಮ ಕೈಗೊಳ್ಳದಿರುವ ಬಗ್ಗೆ ಸದಸ್ಯರು ಹಾಗೂ ಅಧ್ಯಕ್ಷರು ಆಕ್ಷೇಪಣೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಅರ್ಧಂಬರ್ಧ ಕೆಲಸ ಆಗುವಷ್ಟರಲ್ಲಿ ಇಡಲಾದ ಹಣ ಮುಗಿದಿದ್ದು, ಇನ್ನು ಹೊಸ ಅನುದಾನ ಬಂದ ಕೂಡಲೇ ಕೆಲಸ ಪೂರ್ಣಗೊಳಿಸುವುದಾಗಿ ತಿಳಿಸಿದರು. ಆದಷ್ಟು ಬೇಗ ಕಾರ್ಯಪ್ರವೃತ್ತರಾಗಲು ಸದಸ್ಯರು ತಿಳಿಸಿದರು. ಸಭೆಯಲ್ಲಿ ಸದಸ್ಯರು ಗ್ಯಾರಂಟಿ ಯೋಜನೆ ಅನುಷ್ಠಾನ ಬಗ್ಗೆ ಹಲವು ಮಾಹಿತಿ ನೀಡಿದರು.

ವಿಷಯ ನಿರ್ದೇಶಕ ಮೋಹನ್ ವಿ.ಟಿ. ಕಾರ್ಯಕ್ರಮ ನಿರ್ವಹಿಸಿದರು. ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣ, ಗ್ಯಾರಂಟಿ ಯೋಜನೆಯ ಸದಸ್ಯರುಗಳಾದ ಮುಕ್ಕಾಟಿರ ಕಾವೇರಮ್ಮ, ಇಂದಿರಾ ಜೆ.ಆರ್. ನಿಶಿತಾ ಕೆ.ಎ. ಹರೀಶ್, ಮಹಾದೇವ, ಎಂ.ಪಿ. ಗಣೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.