ಸೋಮವಾರಪೇಟೆ, ಮೇ ೩: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವಲರ್ ಹಾಗೂ ಸುಜುಕಿ ಸೆಲೆರಿಯೋ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಘಟನೆ ಸಮೀಪದ ಯಡೂರು ಬಿ.ಟಿ.ಸಿ.ಜಿ. ಕಾಲೇಜಿನ ಮುಂಭಾಗ ನಡೆದಿದ್ದು, ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾಸನ ಜಿಲ್ಲೆಯಿಂದ ಕೊಡಗು ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರಿದ್ದ ಟೆಂಪೊ ಪ್ರಾವೆಲರ್ ವಾಹನ ಮಲ್ಲಳ್ಳಿ, ಶಾಂತಳ್ಳಿ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸುತ್ತಿದ್ದ ಸಂದರ್ಭ, ಯಡೂರು ಬಿಟಿಸಿಜಿ ಕಾಲೇಜಿನ ತಿರುವಿನಲ್ಲಿ ಶಾಂತಳ್ಳಿ ಕಡೆಗೆ ತೆರಳುತ್ತಿದ್ದ ಬೀದಳ್ಳಿ ಗ್ರಾಮದ ವೀರರಾಜು ಎಂಬವರ ಕಾರಿಗೆ ಢಿಕ್ಕಿಯಾಗಿದೆ.

ಘಟನೆಯಿಂದ ಎರಡೂ ವಾಹನಗಳ ಮುಂಭಾಗ ಜಖಂಗೊAಡಿದ್ದು, ಕಾರಿಗೆ ಢಿಕ್ಕಿಯಾದ ಟೆಂಪೋ ವಾಹನ ನಿಯಂತ್ರಣ ತಪ್ಪಿ ಮಣ್ಣಿನ ಬರೆಗೆ ಗುದ್ದಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.