ಶನಿವಾರಸAತೆ, ಮೇ ೩: ಸಮೀಪದ ಕೊಡ್ಲಿಪೇಟೆಯ ಅರ್ಕನಹಳ್ಳಿ ಗ್ರಾಮದ ಸೆಂಟ್ ಆ್ಯನ್ಸ್ ಇಂಗ್ಲೀಷ್ ಹೈಯರ್ ಪ್ರೆöÊಮರಿ ಮತ್ತು ಹೈಸ್ಕೂಲ್ ಪ್ರಸ್ತುತ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಸಾಧಿಸಿ ಗಮನಾರ್ಹ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾಗಿದ್ದ ೧೭ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಯಲ್ಲಿ ೧೦ ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು ೭ ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಎಚ್.ಎಂ ಆಶ್ರಿತಾ ೬೨೫ ಕ್ಕೆ ೬೧೪ ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ, ನಫೀಸತ್ ಹಯಾ ೫೮೦ ಅಂಕ ಹಾಗೂ ಎಸ್.ಅಫೀಫಾ ೫೭೭ ಅಂಕ ಪಡೆದಿದ್ದಾರೆ.

ವೀರಾಜಪೇಟೆ: ವೀರಾಜಪೇಟೆಯ ಕಾವೇರಿ ಶಾಲೆಗೆ ಶಾಲೆಗೆ ಶೇ. ೧೦೦ ಫಲಿತಾಂಶ ಬಂದಿದೆ. ಶಾಲೆಯ ವಿದ್ಯಾರ್ಥಿಗಳಾದ ಶ್ರೀವತ್ಸ ಯು. ಎಸ್ ೬೧೯/೬೨೫, ಮೊಹಮ್ಮದ್ ಶಿಫಾನ್ ಕೆ.ಸಿ ೬೧೭/೬೨೫, ಸೃಷ್ಟಿ ಬಿ.ಎಸ್ ೬೧೪/೬೨೫ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಐಗೂರು: ಐಗೂರು ಸರಕಾರಿ ಪ್ರೌಢಶಾಲಾ ವಿಭಾಗ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. ೧೦೦ ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾಗಿದ್ದ ೨೨ ವಿದ್ಯಾರ್ಥಿಗಳ ಪೈಕಿ ೨೨ ಮಂದಿಯೂ ತೇರ್ಗಡೆ ಹೊಂದಿದ್ದು ಶೇ. ೧೦೦ ಫಲಿತಾಂಶ ಬಂದಿದೆ.

ಸೋಮವಾರಪೇಟೆ: ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ಶಾಲೆಗೆ ಶೇ. ೧೦೦ರಷ್ಟು ಫಲಿತಾಂಶ ದೊರೆತಿದೆ. ಶಿವಾನಿ ಶಾರದಮಣಿ ೬೨೫ಕ್ಕೆ ೬೧೯ ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಮೂರನೇ ಸ್ಥಾನವನ್ನು ಗಳಿಸಿದ್ದಾರೆ. ಬಿ.ವೈ. ಸೃಜನ್ ೬೧೨, ಡಿ.ಟಿ. ಸಿರಿ ೬೦೯, ಟಿ.ವಿ. ಘನಿಕ ೬೦೨ ಹಾಗೂ ಎಚ್.ಎಸ್. ಜಿತನ್ ೬೦೨ ಅಂಕವನ್ನು ಗಳಿಸಿದ್ದಾರೆ. ೪೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ತೋಳೂರು ಶೆಟ್ಟಳ್ಳಿ ಅಂಬೇಡ್ಕರ್ ವಸತಿ ಶಾಲೆ, ಐಗೂರು ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಸಂತ ಜೋಸೆಫರ ಪ್ರೌಢಶಾಲೆ ಶೇ. ೧೦೦ ರಷ್ಟು ಫಲಿತಾಂಶ ದೊರೆತಿದೆ. ಅಂಬೇಡ್ಕರ್ ಶಾಲೆಯ ಕೆ.ಕೆ. ಇಂಚರ ೫೮೮, ವಿ. ಸಮೀಕ್ಷಾ ೫೯೮ , ಪುಣ್ಯ ೬೦೭ ಫಲಿತಾಂಶ ಗಳಿಸಿದ್ದಾರೆ.

ಕರಿಕೆ : ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಸರಕಾರಿ ಪ್ರೌಢಶಾಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶವನ್ನು ಪಡೆದಿದೆ.