ಮಡಿಕೇರಿ, ಮೇ ೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಡೆಕಲ್ಲು, ಕಡ್ಲೇರ ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿದೆ.
ಪುದಿಯನೆರವನ ಬಿ ಹಾಗೂ ಕುಂಬಳಚೇರಿ ನಡುವಿನ ಪಂದ್ಯದಲ್ಲಿ ಪುದಿಯನೆರವನ ೫ ಓವರ್‌ಗೆ ೩ ವಿಕೆಟ್ ೨೩ ರನ್ ಗಳಿಸಿತು. ಕುಂಬಳಚೇರಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೨೮ ರನ್ ಗಳಿಸಿ ಜಯಗಳಿಸಿತು.
ಕಲ್ಲುಮುಟ್ಲು, ಜೈನಿರ ನಡುವಿನ ಪಂದ್ಯದಲ್ಲಿ ಕಲ್ಲುಮುಟ್ಲು ಯಾವುದೇ ವಿಕೆಟ್ ನಷ್ಟವಿಲ್ಲದೆ ೯೭ ರನ್ ಗಳಿಸಿತು. ಜೈನಿರ ೩ ವಿಕೆಟ್‌ಗೆ ೫೧ ರನ್ ಗಳಿಸಿ ಸೋಲನುಭವಿಸಿತು. ಕಲ್ಲುಮುಟ್ಲು ಕವನ್ ೮ ಸಿಕ್ಸ್, ೧ ಬೌಂಡರಿ ಸೇರಿ ೫೬ ರನ್ ಗಳಿಸಿದರು. ಪಡ್ಡಂಬೈಲು, ದೇವಜನ ನಡುವಿನ ಪಂದ್ಯದಲ್ಲಿ ಪಡ್ಡಂಬೈಲು ೫ ವಿಕೆಟ್‌ಗೆ ೬೧ ರನ್ ಬಾರಿಸಿತು. ದೇವಜನ ೮ ವಿಕೆಟ್‌ಗೆ ೨೬ ರನ್ ಗಳಿಸಿ ಸೋತಿತು.
ಮಜಿಕೋಡಿ, ಮೂವನ ನಡುವಿನ ಪಂದ್ಯದಲ್ಲಿ ಮಜಿಕೋಡಿ ೩ ವಿಕೆಟ್‌ಗೆ ೫೪ ರನ್ ಗಳಿಸಿತು. ಮೂವನ ೨ ವಿಕೆಟ್‌ಗೆ ೫೫ ರನ್ ಗಳಿಸಿ ಜಯಗಳಿಸಿತು. ಮೂವನ ಭರತ್ ೩ ಸಿಕ್ಸ್, ೨ ಬೌಂಡರಿ ಸೇರಿ ೩೫ ರನ್ ಗಳಿಸಿದರು. ಕಡ್ಯ ಹಾಗೂ ಕಲ್ಲುಮುಟ್ಲು ನಡುವಿನ ಪಂದ್ಯದಲ್ಲಿ ಕಡ್ಯ ೬ ವಿಕೆಟ್‌ಗೆ ೪೨ ರನ್ ಗಳಿಸಿತು. ಕಲ್ಲುಮುಟ್ಲು೧ ವಿಕೆಟ್‌ಗೆ ೪೩ ರನ್ ಗಳಿಸಿ ಜಯಗಳಿಸಿತು. ಗುತ್ತಿಮಂಡನ ಹಾಗೂ ಕುಂಬಳಚೇರಿ ನಡುವಿನ ಪಂದ್ಯದಲ್ಲಿ ಗುತ್ತಿಮುಂಡನ ೪ ವಿಕೆಟ್‌ಗೆ ೩೪ ರನ್ ಗಳಿಸಿತು. ಕುಂಬಳಚೇರಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೬ ರನ್ ಗಳಿಸಿ ಜಯ ಸಾಧಿಸಿತು. ಬೈಚನ ಸುಂಟಿಕೊಪ್ಪ ಹಾಗೂ ಚೋಂಡಿರ ನಡುವಿನ ಪಂದ್ಯದಲ್ಲಿ ಬೈಚನ ೩ ವಿಕೆಟ್‌ಗೆ ೩೭ ರನ್ ಗಳಿಸಿತು. ಚೋಂಡಿರ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೩ ರನ್‌ಗಳಿಸಿ ಜಯಿಸಿತು. ಚೋಂಡಿರ ಪವನ್ ೫ ಸಿಕ್ಸ್ ಒಳಗೊಂಡು ೩೧ ರನ್ ಗಳಿಸಿದರು. ಪಡ್ಡಂಬೈಲು ಸುಂಟಿಕೊಪ್ಪ, ಕೊಂಪುಳಿರ ನಡುವಿನ ಪಂದ್ಯದಲ್ಲಿ ಪಡ್ಡಂಬೈಲು ೪ ವಿಕೆಟ್‌ಗೆ ೬೬ ರನ್ ಗಳಿಸಿತು. ಕೊಂಪುಳಿರ ೩ ವಿಕೆಟ್‌ಗೆ ೪೧ ರನ್ ಗಳಿಸಿ ಸೋತಿತು. ಪಡ್ಡಂಬೈಲು ರಂಜು ೬ ಸಿಕ್ಸ್ ಒಳಗೊಂಡು ೩೮ ರನ್ ಗಳಿಸಿದರು.
ಮೊಟ್ಟನ ಹಾಗೂ ಯಾಪರೆ ನಡುವಿನ ಪಂದ್ಯದಲ್ಲಿ ಮೊಟ್ಟನ ೧ ವಿಕೆಟ್‌ಗೆ ೬೮ ರನ್ ಗಳಿಸಿತು. ಯಾಪರೆ ಯಾವುದೇ ವಿಕೆಟ್ ನಷ್ಟವಿಲ್ಲದೆ ೭೧ ರನ್ ಗಳಿಸಿ ಜಯಿಸಿತು. ಯಾಪರೆ ಶ್ರೀಕಾಂತ್ ೫ ಸಿಕ್ಸ್ ಒಳಗೊಂಡು ೪೪ ರನ್ ಗಳಿಸಿದರು. ಕುಂಬಳಚೇರಿ ಹಾಗೂ ಪಡ್ಡಂಬೈಲು ನಡುವಿನ ಪಂದ್ಯದಲ್ಲಿ ಕುಂಬಳಚೇರಿ ೬ ವಿಕೆಟ್‌ಗೆ ೩೬ ರನ್ ಗಳಿಸಿದರೆ, ಪಡ್ಡಂಬೈಲು ೨ ವಿಕೆಟ್‌ಗೆ ೩೮ ರನ್ ಗಳಿಸಿ ಜಯಿಸಿತು. ಮೂವನ ಹಾಗೂ ಕಲ್ಲುಮುಟ್ಲು ನಡುವಿನ ಪಂದ್ಯದಲ್ಲಿ ಮೂವನ ೪ ವಿಕೆಟ್‌ಗೆ ೬೪ ರನ್ ಗಳಿಸಿತು. ಕಲ್ಲುಮುಟ್ಲು ೧ ವಿಕೆಟ್‌ಗೆ ೪೯ ರನ್ ಗಳಿಸಿ ಸೋತಿತು. ಕುಡೆಕಲ್ಲು, ಪಡ್ಡಂಬೈಲು ನಡುವಿನ ಪಂದ್ಯದಲ್ಲಿ ಕುಡೆಕಲ್ಲು ೪ ವಿಕೆಟ್‌ಗೆ ೫೭ ರನ್ ಗಳಿಸಿದರೆ, ಪಡ್ಡಂಬೈಲು ೬ ವಿಕೆಟ್ ಗೆ ೪೪ ರನ್ ಗಳಿಸಿ ಸೋತಿತು. ಪಡ್ಡಂಬೈಲು ಸುಂಟಿಕೊಪ್ಪ ಹಾಗೂ ಯಾಪರೆ ನಡುವಿನ ಪಂದ್ಯದಲ್ಲಿ ಪಡ್ಡಂಬೈಲು ೧ ವಿಕೆಟ್‌ಗೆ ೫೫ ರನ್ ಗಳಿಸಿದರೆ, ಯಾಪರೆ ೨ ವಿಕೆಟ್‌ಗೆ ೫೬ ರನ್ ಗಳಿಸಿ ಜಯಿಸಿತು. ಕಡ್ಲೇರ, ಮೂವನ ನಡುವಿನ ಪಂದ್ಯದಲ್ಲಿ ಕಡ್ಲೇರ ೨ ವಿಕೆಟ್‌ಗೆ ೬೧ ರನ್ ಗಳಿಸಿತು. ಮೂವನ ೩ ವಿಕೆಟ್‌ಗೆ ೩೨ ರನ್ ಗಳಿಸಿ ಸೋತಿತು. ಕಡ್ಲೇರ ಲತೇಶ್ ೨ ಸಿಕ್ಸ್, ೧ ಬೌಂಡರಿ ಸೇರಿ ೨೫ ರನ್ ಗಳಿಸಿದರು. ಪಾಂಡಿಮನೆ, ಕಡ್ಯ ನಡುವಿನ ಪಂದ್ಯದಲ್ಲಿ ಪಾಂಡಿಮನೆ ೫ ವಿಕೆಟ್‌ಗೆ ೪೫ ರನ್ ಗಳಿಸಿತು. ಕಡ್ಯ ೧ ವಿಕೆಟ್‌ಗೆ ೪೬ ರನ್ ಗಳಿಸಿ ಜಯಿಸಿತು. ಮರದಾಳು, ಮೂವನ ನಡುವಿನ ಪಂದ್ಯದಲ್ಲಿ ಮರದಾಳು ೩ ವಿಕೆಟ್‌ಗೆ ೪೯ ರನ್ ಗಳಿಸಿದರೆ ಮೂವನ ೪ ವಿಕೆಟ್‌ಗೆ ೫೦ ರನ್ ಗಳಿಸಿ ಜಯಿಸಿತು. ಕಾಳೇರಮ್ಮನ, ಗುತ್ತಿಮುಂಡನ ನಡುವಿನ ಪಂದ್ಯದಲ್ಲಿ ಕಾಳೇರಮ್ಮನ ೫ ವಿಕೆಟ್‌ಗೆ ೩೧ ರನ್ ಗಳಿಸಿದರೆ ಗುತ್ತಿಮುಂಡನ ೩ ವಿಕೆಟ್‌ಗೆ ೩೪ ರನ್ ಗಳಿಸಿ ಜಯಿಸಿತು.