ಮಡಿಕೇರಿ, ಮೇ ೨: ನಗರದ ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಮುತ್ತು ಮಾರಿಯಮ್ಮ ದೇವಾಲಯದಲ್ಲಿ ತಾ. ೩ ರಿಂದ ತಾ. ೬ ರವರಗೆ ಶ್ರೀ ಮಾರಿಯಮ್ಮ ಕರಗೋತ್ಸವ ನಡೆಯಲಿದೆ. ಮಡಿಕೇರಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದ ಶ್ರೀ ಮಾರಿಯಮ್ಮ ಬೇವಿನ ಸೊಪ್ಪಿನ ಕರಗೋತ್ಸವ ಪ್ರಯುಕ್ತ ತಾ. ೩ ರಂದು ಪಂಪಿನ ಕೆರೆಯಿಂದ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಮುತ್ತು ಮಾರಿಯಮ್ಮ ಬೇವಿನ ಸೊಪ್ಪಿನ ಕರಗಗಳು ಶೃಂಗಾರಗೊAಡು ಸಂಜೆ ಅಲ್ಲಿಂದ ವಿಶೇಷ ಪೂಜೆಯ ನಂತರ ಮೆರವಣಿಗೆ ಮೂಲಕ ಹೊರಟು ಮುಖ್ಯಬೀದಿಗಾಗಿ ದೇವಾಲಯವನ್ನು ಸೇರಲಿವೆ. ತಾ. ೪ ಮತ್ತು ೫ ರಂದು ದೇವಾಲಯದಲ್ಲಿ ಶ್ರೀ ಮಾರಿಯಮ್ಮ ಕರಗಗಳಿಗೆ ವಿಶೇಷ ಪೂಜೆ ನಡೆಯಲಿದ್ದು, ತಾ. ೬ ರಂದು ಕರಗಗಳ ವಿಸರ್ಜನೋತ್ಸವ ನಡೆಯಲಿದೆ.