ಬಾಡಗರಕೇರಿ ಪೊರಾಡು ನಿವಾಸಿ ಮಲ್ಲೇಂಗಡ ಪ್ರದೀಪ್ ಅವರ ಪತ್ನಿ ಗಂಗಮ್ಮ (ಗಂಗಾ-೬೫) ಅವರು ತಾ. ೧ ರಂದು ನಿಧನರಾದರು.

ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

* ಈ ಹಿಂದೆ ಸುಂಟಿಕೊಪ್ಪದ ಕಾನ್ಸ್ ಕಾಫಿ ತೋಟದಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಇದೀಗ ಚಿಕ್ಕಮಗಳೂರಿನಲ್ಲಿ ವಾಸವಿದ್ದ ಪಿ.ಕೆ. ರಮೇಶ್ (೯೦) ಅವರು ತಾ. ೧ ರಂದು ನಿಧನರಾದರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

* ಮರಗೋಡು (ಬಕ್ಕ) ಗ್ರಾಮದ ತಾತಪಂಡ ಕಟ್ಟಿ ಕಾವೇರಿಯಪ್ಪ (೯೧-ನಿವೃತ್ತ ಯೋಧ) ಅವರು ತಾ. ೨ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೩ ರಂದು (ಇಂದು) ಮಧ್ಯಾಹ್ನ ೧ ಗಂಟೆಯ ನಂತರ ಸ್ವಗ್ರಾಮದಲ್ಲಿ ನಡೆಯಲಿದ್ದು, ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.