೨೦೨೭ರಲ್ಲಿ ೨೭ನೆಯ ವರ್ಷದ ಹಾಕಿ ಉತ್ಸವ ಆಯೋಜಿಸಲಿರುವ ಅಜ್ಜಿಕುಟ್ಟಿರ ಕುಟುಂಬಸ್ಥರು ಬೆಳಿಗ್ಗೆ ೧೦.೩೦ರ ವೇಳೆಗೆ ಸಾಂಪ್ರದಾಯಿಕ ಧಿರಿಸಿನಲ್ಲಿ ಮೈದಾನಕ್ಕೆ ಆಗಮಿಸಿದರು. ಇವರನ್ನು ಕೊಡವ ಹಾಕಿ ಅಕಾಡೆಮಿ ಪ್ರಮುಖರು, ಚೇನಂಡ ಕುಟುಂಬಸ್ಥರು ಬರಮಾಡಿಕೊಂಡರು. ಕುಪ್ಯಚೇಲೆ ಧರಿಸಿದ್ದ ಪುರುಷರು, ಏಕವರ್ಣ ಸೀರೆ, ತಲೆಗೆ ವಸ್ತç ಧರಿಸಿದ್ದ ಮಹಿಳೆಯರು ಇವರೊಂದಿಗೆ ಮಕ್ಕಳು ಕುಟುಂಬದ ಬ್ಯಾನರ್ ಸಹಿತ ಬಂದಿದ್ದರು. ಇವರನ್ನು ಒಳಗೊಂಡAತೆ ಇತರ ಪ್ರಮುಖರು ಸೇರಿ ಮೈದಾನದ ಸುತ್ತಲೂ ಹೆಜ್ಜೆ ಹಾಕಿದರು.
ತಳಿಯತಕ್ಕಿ ಬೊಳಕ್, ಒಡ್ಡೋಲಗ, ದುಡಿಕೊಟ್ಟ್ ಪಾಟ್ ಸಹಿತವಾಗಿ ಸಾಂಕೇತಿಕವಾಗಿ ಮೆರವಣಿಗೆ ನಡೆಸಿ ಮುಂದಿನ ಹಬ್ಬಕ್ಕೆ ಜನರ ಸಹಕಾರ ಕೋರಲಾಯಿತು. ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಪೊನ್ನಣ್ಣ, ಸರ್ವೋಚ್ಚ ನ್ಯಾಯಾಲಯ ನಿವೃತ್ತ ನ್ಯಾಯಾಧೀಶರಾದ ಅಜ್ಜಿಕುಟ್ಟಿರ ಎಸ್. ಬೋಪಣ್ಣ, ಸುಬ್ರಮಣಿ ಮಾದಯ್ಯ, ಪೃಥ್ವಿ ಸುಬ್ಬಯ್ಯ ಸೇರಿದಂತೆ ಕುಟುಂಬದ ಪುರುಷರು, ಮಹಿಳೆಯರು, ಮಕ್ಕಳು, ಚೇನಂಡ ಕುಟುಂಬಸ್ಥರು, ಕೊಡವ ಅಕಾಡೆಮಿಯವರು ಮೈದಾನದ ಸುತ್ತ ಪ್ರದಕ್ಷಿಣೆಯಲ್ಲಿ ಸಾಗಿ ವಿಶೇಷ ಗ್ಯಾಲರಿಯಲ್ಲಿ ಆಸೀನರಾದರು.
ಅಕಾಡೆಮಿ ಪ್ರಮುಖರು
ಫೈನಲ್ ಸಂದರ್ಭದಲ್ಲಿ ಕೊಡವ ಹಾಕಿ ಅಕಾಡೆಮಿ ಪ್ರಮುಖರುಗಳಾದ ಅಧ್ಯಕ್ಷ ಪಾಂಡAಡ ಬೋಪಣ್ಣ, ಕಾರ್ಯಾಧ್ಯಕ್ಷ ಚೆಪ್ಪುಡಿರ ಪೂಣಚ್ಚ, ಉಪಾಧ್ಯಕ್ಷ ಕೂತಂಡ ಸುರೇಶ್ ಅಪ್ಪಯ್ಯ ಸೇರಿದಂತೆ ಮುದ್ದಂಡ ರಶಿನ್ ಸುಬ್ಬಯ್ಯ, ಮುಕ್ಕಾಟಿರ ಸೋಮಯ್ಯ, ಕಂಬೀರAಡ ರಾಖಿ ಪೂವಣ್ಣ, ಕುಲ್ಲೇಟಿರ ಅರುಣ್ ಬೇಬ, ಸುಳ್ಳಿಮಾಡ ದೀಪಕ್, ನಾಯಕಂಡ ದೀಪು ಚಂಗಪ್ಪ, ಮಂಡೇಪAಡ ಮುಖೇಶ್, ಬಾಚಿನಾಡಂಡ ಪ್ರದೀಪ್, ಕಲಿಯಂಡ ಸಂಪನ್, ಅಜ್ಜಿಕುಟ್ಟಿರಕ್ಕೆ ಧ್ವಜ ಹಸ್ತಾಂತರ ಸಂದರ್ಭ ಪಾಲ್ಗೊಂಡಿದ್ದರು. ಚೇನಂಡ ಕುಟುಂಬ ಪ್ರಮುಖರೂ ಹಾಜರಿದ್ದರು.
ಪಂದ್ಯಾವಳಿ ನಿರ್ದೇಶಕ ನಾಯಕಂಡ ದೀಪು ಚಂಗಪ್ಪ, ಅಂಪರ‍್ಸ್, ಮ್ಯಾನೇಜರ್, ನಿವೃತ್ತ ಯೋಧ ಚೆಯ್ಯಂಡ ಅಪ್ಪಚ್ಚು ತಂಡಕ್ಕೆ ಜೇನುಪೆಟ್ಟಿಗೆಯನ್ನು ಕೊಡುಗೆಯಾಗಿ ನೀಡಲಾಯಿತು.
ವೀಕ್ಷಕ ವಿವರಣೆಗಾರರು, ಮೈದಾನ ಸಿದ್ಧಪಡಿಸಿದ ರಾಜು, ಲೈನ್‌ಮೆನ್ಸ್ ಸೇರಿದಂತೆ ಇತರರಿಗೂ ಜೇನುಪೆಟ್ಟಿಗೆಯನ್ನು ಕೊಡುಗೆಯಾಗಿ ನೀಡಲಾಯಿತು.
೨೫ನೆ ವರ್ಷದ ಬೆಳ್ಳಿಹಬ್ಬದ ಸಂಭ್ರಮದ ಕೌಟುಂಬಿಕ ಹಾಕಿ ಉತ್ಸವ ಆಯೋಜನೆ ಮಾಡಿದ ಮುದ್ದಂಡ ಕುಟುಂಬದ ವತಿಯಿಂದ ಕೊಡವ ಹಾಕಿ ಅಕಾಡೆಮಿಗೆ ರೂ. ೫ ಲಕ್ಷ ಹಣ ನೀಡಲಾಯಿತು. ಮುದ್ದಂಡ ಕಪ್ ಸಂಚಾಲಕ ರಶಿನ್ ಸುಬ್ಬಯ್ಯ ತಂಡದಿAದ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಹಾಗೂ ಪದಾಧಿಕಾರಿಗಳು ಚೆಕ್ ಸ್ವೀಕರಿಸಿದರು.
ಮಹಿಳಾ ಹಾಕಿಯ ರನ್ನರ್ಸ್ ತಂಡ ಕಂಬೀರAಡ ಕುಟುಂಬ ರೂ. ೧ ಲಕ್ಷ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.
ಪAದ್ಯಾಟದ ಅರ್ಧಾವಧಿಯಲ್ಲಿ ಚೇನಂಡ ಕುಟುಂಬದವರು ತವರುಮನೆಯವರು ಮೈದಾನದ ಸುತ್ತಲೂ ಮೆರವಣಿಗೆಯಲ್ಲಿ ಸಾಗಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರೇಕ್ಷಕರಿಗೆ ಧನ್ಯವಾದ ಸಮರ್ಪಿಸಿದ್ದು ವಿಶೇಷವಾಗಿತ್ತು. ಬಳಿಕ ಚೇನಂಡ ಹಾಕಿ ಹಬ್ಬದ ಅಂಗವಾಗಿ ತಯಾರಿಸಿರುವ ಹಾಡಿಗೆ ಧ್ವಜ ಸಹಿತವಾಗಿ ಕುಣಿದು ಕುಪ್ಪಳಿಸಿ ಪಂದ್ಯಾವಳಿಯ ಯಶಸ್ಸಿನ ಸಂಭ್ರಮಾಚರಣೆ ಮಾಡಿದರು. ಹಾಕಿ ಫೈನಲ್‌ನಲ್ಲಿ ಬಗೆ-ಬಗೆಯ ಪೋಷಾಕಿನಲ್ಲಿ ಪಾಲ್ಗೊಂಡಿದ್ದ ಯುವಕ-ಯುವತಿಯರು ವಿಶೇಷ ಗಮನ ಸೆಳೆದರು. ಕಣ್ಣಿಗೆ ಗಾಗಲ್ಸ್, ಟೀ ಶರ್ಟ್, ಜೀನ್ಸ್ ಧರಿಸಿದ್ದವರು ಪ್ರಮುಖ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕಂಡುಬರುವ ಹೈಟೆಕ್ ಜನರ ಮಾದರಿಯಲ್ಲಿ ಹಾಕಿ ಉತ್ಸವದಲ್ಲೂ ಉತ್ಸಾಹಭರಿತವಾಗಿ ಪಾಳ್ಗೊಳ್ಳುವುದೂ ಹಾಕಿ ಉತ್ಸವದ ಯಶಸ್ಸಿನ ಒಂದು ಭಾಗವಾಗಿದೆ.ಚೇನಂಡ ಕಪ್ ಅಂಗವಾಗಿ ಏರ್ಪಡಿಸಲಾಗಿದ್ದ ಕುಟುಂಬವಾರು ಮೆರಥಾನ್ ಸ್ಪರ್ಧೆಯಲ್ಲಿ ಚೆಕ್ಕೇರ, ನಂಬುಡುಮಾಡ, ಕಿಮ್ಮುಡಿರ ಮೊದಲ ಸ್ಥಾನ ಪಡೆದುಕೊಂಡಿವೆ. ಈ ತಂಡಗಳಿಗೆ ತಲಾ ರೂ. ೪೦ ಸಾವಿರ, ರೂ. ೩೦ ಸಾವಿರ, ರೂ. ೨೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.ಮೈದಾನದ ಎದುರು ಭಾಗದಲ್ಲಿ ಚೇನಂಡ ಕುಟುಂಬದಿAದ ಭಾರತವನ್ನು ಒಲಂಪಿಕ್ಸ್ನಲ್ಲಿ ಪ್ರತಿನಿಧಿಸಿದ್ದ ಬಾಕ್ಸಿಂಗ್‌ಪಟು ಸಿ.ಸಿ. ಮಾಚಯ್ಯ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ವಿಶು ಕುಟ್ಟಪ್ಪ, ಅವರುಗಳ ಕಟೌಟ್ ಅನ್ನು ಅಳವಡಿಸಲಾಗಿತ್ತು.ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಅವರು ರಾಜ್ಯ ಸರಕಾರದ ಪರವಾಗಿ ಕ್ರೀಡಾ ಚಟುವಟಿಕೆಗಳ ಅಗತ್ಯತೆಗಳ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸೂಕ್ ಮಾಂಡವೀಯ ಅವರಿಗೆ ಮನವಿ ಸಲ್ಲಿಸಿದರು. ಪಂದ್ಯಾವಳಿಯಲ್ಲಿ ವೈಯಕ್ತಿಕ ಸಾಧನೆಯಿಂದ ಹಲವರು ಪ್ರಶಸ್ತಿ ಪಡೆದುಕೊಂಡರು. ಸರಣಿ ಪುರುಷೋತ್ತಮನಿಗೆ ಏಥರ್ ಬೈಕ್‌ನ ಕೊಡುಗೆ ವಿಶೇಷವಾಗಿತ್ತು.
ಸರಣಿ ಶ್ರೇಷ್ಠ: ಕುಲ್ಲೇಟಿರ ವಚನ್ ಕಾಳಪ್ಪ, ಪಂದ್ಯಪುರುಷೋತ್ತಮ : ಕುಲ್ಲೇಟಿರ ನಾಚಪ್ಪ, ಬೆಸ್ಟ್ ಪಾರ್ವರ್ಡ್ : ಚೆಪ್ಪುಡಿರ ಪ್ರಣವ್, ಬೆಸ್ಟ್ ಹಾಫ್ ಬ್ಯಾಕ್ : ಪರದಂಡ ರಂಜನ್ ಅಯ್ಯಪ್ಪ, ಬೆಸ್ಟ್ ಫುಲ್‌ಬ್ಯಾಕ್ : ಪೆಮ್ಮಂಡ ಸೋಮಣ್ಣ, ಬೆಸ್ಟ್ ಗೋಲ್‌ಕೀಪರ್ : ಪಳಂಗAಡ ಪೊನ್ನಣ್ಣ , ಬೆಸ್ಟ್ ಅಪ್ ಕಮ್ಮಿಂಗ್ ಪ್ಲೇಯರ್ : ಕುಲ್ಲೇಟಿರ ಬೆಳ್ಯಪ್ಪ, ಶಿಸ್ತು ಬದ್ಧ ತಂಡ : ಮೂಕೋಂಡ