ನಾಪೋಕ್ಲು, ಮೇ ೨: ಕೊಡವ ಹಾಕಿ ಅಕಾಡೆಮಿ ಸಹಭಾಗಿತ್ವದಲ್ಲಿ ಪ್ರತಿ ವರ್ಷ ಕೌಟುಂಬಿಕ ಹಾಕಿ ನಡೆಯುತ್ತದೆ. ಅಕಾಡೆಮಿಗೆ ಕೇಂದ್ರ ಸರಕಾರದಿಂದ ಆರ್ಥಿಕ ಸಹಕಾರವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾಗಿರುವ ಡಾ.ಮನ್ಸೂಕ್ ಮಾಂಡವೀಯ ಅವರು ಭರವಸೆ ನೀಡಿದರು.
ಚೇನಂಡ ಕಪ್‌ನ ಫೈನಲ್ ಪಂದ್ಯಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕ್ರೀಡೆ ಎಂಬುದು ರಾಜಕೀಯ ಮೈದಾನವಲ್ಲ. ಸರಕಾರಗಳು ಒಗ್ಗೂಡಿ ಕ್ರೀಡೆಗೆ ಸಹಕಾರ ಮಾಡಬೇಕು. ರಾಜ್ಯ-ಕೇಂದ್ರ ಸರಕಾರಗಳು ಬೇರೆ-ಬೇರೆಯಾಗಿದ್ದರೂ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಚೇನಂಡ ಹಾಕಿ ಉತ್ಸವದಲ್ಲಿ ಇದು ಸಾಕಾರಗೊಂಡಿದೆ. ೪೪Àನೇ ಪುಟಕ್ಕೆ
(ಮೊದಲ ಪುಟದಿಂದ) ಇದೇ ರೀತಿ ದೇಶದ ಇತರೆಡೆಗಳಲ್ಲಿ ನಡೆಯುವ ಕ್ರೀಡಾ ಹಬ್ಬಗಳಲ್ಲಿ ಅಥವಾ ಕ್ರೀಡೆಯನ್ನು ಮುಂದೆ ತರಲು ಏನೇ ಕಾರ್ಯಕ್ರಮಗಳಿರಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರಾಜಕೀಯ ಮರೆತು ಒಗ್ಗೂಡಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಭರವಸೆಯನ್ನು ಅವರು ಈ ಸಂದರ್ಭ ನೀಡಿದರು.
ಚೇನಂಡ ಕಪ್ ವೀಕ್ಷಣೆಗೆ ಅಧಿಕ ಸಂಖ್ಯೆಯಲ್ಲಿ ಜನರು ಸೇರಿರುವ ಬಗ್ಗೆ ಶ್ಲಾಘಿಸಿದ ಅವರು, ಕೊಡವರ ಕ್ರೀಡಾ ಸಂಸ್ಕಾರವು ದೇಶಕ್ಕೆ ಮಾದರಿಯಾಗಿದ್ದು. ದೇಶದಲ್ಲಿನ ಕ್ರೀಡಾ ಚಳವಳಿಯನ್ನು ಮುಂದಕ್ಕೆ ಸಾಗಿಸಲು ಕೊಡವ ಕೌಟುಂಬಿಕ ಹಾಕಿ ಪ್ರೇರಣೆ ಎಂದರು.
ಪ್ರತಿ ವರ್ಷ ಒಂದೊAದು ಕುಟುಂಬ ಹಾಕಿ ಹಬ್ಬವನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಕ್ರೀಡೆಯು ಮನುಷ್ಯರನ್ನು ಒಗ್ಗೂಡಿಸುತ್ತದೆ. ಇದನ್ನು ಕೊಡವ ಸಮುದಾಯದವರು ಈ ಹಾಕಿ ಉತ್ಸವದ ಮೂಲಕ ಪ್ರದರ್ಶಿಸಿದೆ. ಚಿಕ್ಕ ಜಿಲ್ಲೆ ಕೊಡಗಿನಿಂದ ೧೮ ಒಲಂಪಿಯನ್‌ಗಳು ದೇಶವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಚಾರ. ಇದು ಜಿಲ್ಲೆ ಸೇರಿದಂತೆ ದೇಶದ ಹಿರಿಮೆಯನ್ನೂ ಹೆಚ್ಚಿಸುತ್ತದೆ ಎಂದರು.
೨೦೩೬ರಲ್ಲಿ ಭಾರತದಲ್ಲಿ ಒಲಂಪಿಕ್ಸ್ ಕ್ರೀಡಾಕೂಟ ಆಯೋಜಿಸಲು ಬಿಡ್ಡಿಂಗ್ ಮೂಲಕ ಪ್ರಯತ್ನಗಳು ನಡೆಯುತ್ತಿದೆ ಎಂದ ಅವರು, ಕೌಟುಂಬಿಕ ಹಾಕಿ ಸಂದರ್ಭ ಮೈದಾನದಲ್ಲಿನ ಉತ್ತಮ ಪ್ರತಿಭೆಗಳನ್ನು ಗುರುತಿಸಿ ಅವರುಗಳಿಗೆ ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟçದ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಬೇಕೆಂದರು.