ಮಡಿಕೇರಿ, ಏ. ೩೦: ಕೊಡವ ಕುಟುಂಬಗಳ ನಡುವಿನ ಕËಟುಂಬಿಕ ಕ್ರಿಕೆಟ್ ಉತ್ಸವ ಬೇತ್ರಿ ಮುಕ್ಕಾಟಿರ ಕಪ್‌ನ ಫೈನಲ್ ಪಂದ್ಯಾಟ ಮೇ ೧ ರಂದು (ಇಂದು) ಜರುಗಲಿದೆ. ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಪ್ರಸಕ್ತ ವರ್ಷದ ಕ್ರಿಕೆಟ್ ಉತ್ಸವದ ಅಂತಿಮ ಹಣಾಹಣಿ ನಡೆಯಲಿದ್ದು, ಸಕಲ ಸಿದ್ಧತೆ ನಡೆದಿದೆ.

ಪುರುಷರ ವಿಭಾಗದ ಫೈನಲ್ ಚೆಕ್ಕೇರ ಹಾಗೂ ಮಾಳೇಟಿರ (ಕೆದಮುಳ್ಳೂರು) ನಡುವೆ ಹಾಗೂ ಮಹಿಳಾ ವಿಭಾಗದಲ್ಲಿ ಮಣವಟ್ಟಿರ ಹಾಗೂ ಮುಕ್ಕಾಟಿರ (ಹರಿಹರ) ತಂಡಗಳ ನಡುವೆ ಜರುಗಲಿದೆ. ವಿಶೇಷ ಅತಿಥಿಗಳಾಗಿ ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಲಿರುವರು.