ಮುಳ್ಳೂರು, ಏ. ೩೦: ದೇವಸ್ಥಾನದಲ್ಲಿ ಕಳ್ಳರು ಬಾಗಿಲು ಒಡೆದು ನುಗ್ಗಿ ದೇವಸ್ಥಾನದಲ್ಲಿರುವ ಹುಂಡಿ ಮುಂತಾದವುಗಳನ್ನು ಕಳ್ಳತನ ಮಾಡುವ ಪ್ರಕರಣಗಳು ನಡೆಯುತ್ತಿರುತ್ತವೆ. ಆದರೆ ದೇವಸ್ಥಾನ ಮೇಲ್ಭಾಗದ ಗೋಪುರದಲ್ಲಿ ಅಳವಡಿಸಿರುವ ಕಳಸವನ್ನು ಕಳ್ಳತನ ಮಾಡಿರುವ ಪ್ರಕರಣ ಅಚ್ಚರಿಗೆ ಕಾರಣವಾಗಿದೆ.
ಮುಳ್ಳೂರು ಬಳಿಯ ಕಾರ್ಗೋಡು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಗೋಪುರದಲ್ಲಿದ್ದ ಕಳಸವನ್ನು ಕಳ್ಳತನ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ದೇವಸ್ಥಾನದ ಗೋಪುರದಲ್ಲಿ ಪಂಚಲೋಹದ ೫ ಕಳಸವನ್ನು ಅಳವಡಿಸಲಾಗಿತ್ತು. ಬುಧವಾರ ರಾತ್ರಿ ಕಳ್ಳರು ಗೋಪುರದಲ್ಲಿದ್ದ ೩೦ ಸಾವಿರ ರೂ. ಮೌಲ್ಯದ ೫ ಕಳಸವನ್ನು ಕದ್ದೊಯ್ದಿದ್ದಾರೆ. ಗುರುವಾರ ಬೆಳಿಗ್ಗೆ ದೇವಸ್ಥಾನದ ಗೋಪುರದಲ್ಲಿ ಅಳವಡಿಸಿದ್ದ ೫ ಗೋಪುರಗಳು ನಾಪತ್ತೆಯಾಗಿರುವುದು ಕಂಡುಬAದಿದ್ದು, ಗಮನಿಸಿದ ಸ್ಥಳೀಯರು ಮತ್ತು ದೇವಸ್ಥಾನ ಸಮಿತಿಯವರು ಈ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬAಧ ಠಾಣಾಧಿಕಾರಿ ಚಂದ್ರು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ. ಈ ಸಂಬAಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. - ಭಾಸ್ಕರ್ ಮುಳ್ಳೂರು