ಚೆಯ್ಯಂಡಾಣೆ, ಏ. ೨೯: ಸ್ಥಳೀಯ ಚೇಲಾವರ ಗ್ರಾಮದ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಮೇ ೨ ಹಾಗೂ ೩ ರಂದು ತೃತೀಯ ವರ್ಷದ ನೇಮೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ ೨ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಪೂಜೆ, ೧೦ ಗಂಟೆಗೆ ಮೊಗೇರ ದೈವಗಳಿಗೆ ಮಂಜಸೇವೆ, ಸಂಜೆ ೬ ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ಮಂತ್ರವಾದಿ ಗುಳಿಗ ದೈವದ ಕೋಲ, ರಾತ್ರಿ ೯ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ಪಾಷಾಣಮೂರ್ತಿ ದೈವದ ಕೋಲ, ವಯೊಂತಿ ದೈವದ ಕೋಲ ನಡೆಯಲಿದೆ.

ಮೇ ೩ ರಂದು ಬೆಳಿಗ್ಗೆ ೮ ಗಂಟೆಗೆ ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ದೈವದ ಕೋಲ, ಮಧ್ಯಾಹ್ನ ೧ ಗಂಟೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ.