ಪೊನ್ನಂಪೇಟೆ, ಏ. ೨೯: ಗೋಣಿಕೊಪ್ಪಲು ವಿಶ್ವಕರ್ಮ ಸೇವಾ ಸಮಿತಿಯ ೧೧ ನೇ ವರ್ಷದ ವಾರ್ಷಿಕ ಮಹಾಸಭೆ ಗೋಣಿಕೊಪ್ಪಲಿನ ಮಹಿಳಾ ಸಮಾಜದಲ್ಲಿ ನಡೆಯಿತು. ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ ಮಣಿಕಂಠ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ವಿಶ್ವಕರ್ಮ ಜಿಲ್ಲಾ ಒಕ್ಕಾಟದ ಅಧ್ಯಕ್ಷ ದೇವದಾಸ್ ಅವರು ಮಾತನಾಡಿ, ವಿಶ್ವಕರ್ಮ ಜನಾಂಗದ ಯಾವುದೇ ಕಾರ್ಯ ಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯಬಾಂಧವರು ಸೇರುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಇದರಿಂದ ಸರ್ಕಾರದ ಅನುದಾನ ಪಡೆಯಲು ಸಾಧ್ಯವಾಗಲಿದ್ದು, ಸಂಘಟನೆಯ ಮೂಲಕ ವಿಶ್ವಕರ್ಮ ಸಮಾಜದ ಬೆಳವಣಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ನಾಗರಾಜ್ ಮಾತನಾಡಿ ಗೋಣಿಕೊಪ್ಪಲು ವಿಶ್ವಕರ್ಮ ಸೇವಾ ಸಮಿತಿಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೊಬ್ಬರು ಅತಿಥಿ ವಿಶ್ವಕರ್ಮ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿದ್ಯಾವೆಂಕಟರಮಣ ಮಾತನಾಡಿದರು. ವಿಶ್ವಕರ್ಮ ಸೇವಾ ಸಮಿತಿ ಕಾರ್ಯದರ್ಶಿ ರಾಘವನ್ ಸಂಘದ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ವಿಶ್ವ ಕರ್ಮ ಸಂಘದ ಅಧ್ಯಕ್ಷ ಲಿಂಗಮೂರ್ತಿ, ವಿಶ್ವಕರ್ಮ ಸೇವಾ ಸಮಿತಿ ಉಪಾಧ್ಯಕ್ಷ ಸುರೇಶ್ ಕುಮಾರ್, ಗೌರವ ಅಧ್ಯಕ್ಷ ಪ್ರಭಾಕರ್, ಸಹ ಕಾರ್ಯದರ್ಶಿ ರಾಜಗೋಪಾಲ್, ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಜನಾಂಗದ ಹಿರಿಯರಾದ ಜಾನಕಿ, ಪೊನ್ನಂಪೇಟೆಯ ಹಿರಿಯ ಛಾಯಾಗ್ರಾಹಕರಾದ ಎಸ್. ಎಲ್. ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಮನರಂಜನಾ ಸ್ಪರ್ಧೆಗಳು : ಮಹಾಸಭೆಯ ಅಂಗವಾಗಿ ವಿಶ್ವಕರ್ಮ ಜನಾಂಗ ಬಾಂಧವರಿಗೆ ವಿವಿಧ ಮನರಂಜನಾ ಕ್ರೀಡೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಣ್ಣಿಗೆ ಬಟ್ಟೆ ಕಟ್ಟಿ ಕುಡಿಕೆ ಒಡೆಯುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಸುಂದರ ರಾಜ್ ಪ್ರಥಮ, ಉಣ್ಣಿಕುಟ್ಟನ್ ವಿ.ಕೆ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ದಿವ್ಯ ಕೆ. ಕೆ ಪ್ರಥಮ, ಶಾಂತ ಕುಮಾರ್ ದ್ವಿತೀಯ, ಕ್ಯಾಂಡಲ್ ಹೊತ್ತಿಸುವ ಸ್ಪರ್ಧೆ ಪುರುಷರ ವಿಭಾಗದಲ್ಲಿ ಮಣಿ ಪ್ರಥಮ, ಅಯ್ಯಪ್ಪ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಆಶಾಕುಮಾರಿ ಪ್ರಥಮ, ದಿವ್ಯ ದ್ವಿತೀಯ, ಇಟ್ಟಿಗೆ ಬ್ಯಾಲೆನ್ಸ್ ಮಾಡುವ ಸ್ಪರ್ಧೆ ಪುರುಷರ ವಿಭಾಗದಲ್ಲಿ ಸುರೇಶ್ ಕುಮಾರ್. ಎಂ ಪ್ರಥಮ, ಚಂದ್ರಶೇಖರ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಮೋನಿಕಾ ಪ್ರಥಮ, ವಸಂತಿ ದ್ವಿತೀಯ, ಬಳೆಯಿಂದ ಬಾಟೆಲ್ ನಿಲ್ಲಿಸುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಪ್ರಶಾಂತ್. ವಿ. ಕೆ ಪ್ರಥಮ, ಸತ್ಯ ಜಿತ್ ದೇವದಾಸ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಅನುಷ್ಮ ಮನು ಪ್ರಥಮ, ಸನುಷ್ಮ ಮನು ದ್ವಿತೀಯ, ಕಣ್ಣಿಗೆ ಬಟ್ಟೆ ಕಟ್ಟಿ ವೃತ್ತದಲ್ಲಿ ಬಾಟೆಲ್ ಇಡುವ ಸ್ಪರ್ಧೆಯಲ್ಲಿ ಆಶಾ ಪ್ರಥಮ, ಶ್ರೀಜಾ ದ್ವಿತೀಯ, ಕ್ಯಾಟರ್ ಬಿಲ್‌ನಿಂದ ಚೆಂಡಿಗೆ ಗುರಿಯಿಡುವ ಸ್ಪರ್ಧೆಯಲ್ಲಿ ಮಣಿ ಪ್ರಥಮ, ಸುಜಿತ್ ಕುಮಾರನ್ ದ್ವಿತೀಯ, ಚಮಚದಲ್ಲಿ ನಿಂಬೆಹಣ್ಣು ಇಟ್ಟು ನಡೆಯುವ ಸ್ಪರ್ಧೆಯಲ್ಲಿ ಅನುಷ್ಮ ಮನು ಪ್ರಥಮ, ಹೈಮಾ ದ್ವಿತೀಯ ಬಹುಮಾನ ಪಡೆದುಕೊಂಡರು. ೧೨ ವರ್ಷದೊಳಗಿನ ಮಕ್ಕಳಿಗಾಗಿ ಏರ್ಪಡಿಸಿದ್ದ ದಾರ ಎಳೆಯುವ ಸ್ಪರ್ಧೆಯಲ್ಲಿ ಪ್ರಾಪ್ತಿ ಪ್ರಥಮ, ಆರದಿ ದ್ವಿತೀಯ, ಬಾಟಲ್‌ಗೆ ನೀರು ತುಂಬಿಸುವ ಸ್ಪರ್ಧೆಯಲ್ಲಿ ಅನಿಹ ಪ್ರಥಮ, ಆಭರಣ ದ್ವಿತೀಯ ಬಹುಮಾನ ಪಡೆದುಕೊಂಡರು.