ಮಡಿಕೇರಿ, ಏ. ೨೯: ಗಾಂಜಾ ಸರಬರಾಜು ಹಾಗೂ ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಸಿಂಕೋನದಿAದ ಮಕ್ಕಂದೂರು ಕಡೆಗೆ ತೆರಳುವ ರಸ್ತೆಯಲ್ಲಿ ಗಾಂಜಾ ಮಾರಾಟ/ಸರಬರಾಜು ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ತಾ. ೨೮ ರಂದು ನಡೆಸಿದ ಪೊಲೀಸರು ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಲೋರಟುವಿನ ಜಾಬೀರ್ (೨೧), ಒರಿಸ್ಸಾದ ಕಂದನಮಾಲ್ ಜಿಲ್ಲೆಯ ಕಳಿಂಗ ಗ್ರಾಮದ ಸುಲ್ತಾನ್ ಪ್ರಧಾನ್ (೫೫), ಒರಿಸ್ಸಾದ ಕಂದನಮಾಲ್ ಜಿಲ್ಲೆಯ ಮದಿನಂಜು ಗ್ರಾಮದ ಸ್ವರ್ಣಲತಾ ನಾಯಕ್ (೩೫) ಎಂಬವರುಗಳನ್ನು ಬಂಧಿಸಿ ೧೫ ಕೆಜಿ ೯೦೩ ಗ್ರಾಂ ಗಾಂಜಾ ಹಾಗೂ ೩ ಮೊಬೈಲ್‌ಗಳನ್ನು ವವಶಪಡಿಸಿಕೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಐ.ಪಿ. ಮೇದಪ್ಪ, ಹೆಚ್.ವಿ. ಚಂದ್ರಶೇಖರ್, ಎಎಸ್ ಐ ಚರ್ಮಣ್ಣ ಸಿ.ಯು, ಮುಖ್ಯ ಪೇದೆಗಳಾದ ಮಹೇಶ್ ಎಂ.ಕೆ. ಉದಯ್ ಕುಮಾರ್ ಜಿ.ಆರ್., ಎಂ.ಎನ್. ನಿರಂಜನ್, ಬಿ.ಕೆ. ಪ್ರವೀಣ್, ಸಿ.ಕೆ. ರಾಜೇಶ್, ಪೇದೆಗಳಾದ ಶರತ್ ರೈ ಬಿ.ಜೆ., ಜಿ. ರುದ್ರಪ್ಪ, ಗಾಯತ್ರಿ ಎಂ ಪಾಲ್ಗೊಂಡಿದ್ದರು.