ಮಡಿಕೇರಿ ಏ.೨೯ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಪುರುಷರ ವಿಭಾಗದಲ್ಲಿ ಚೆಕ್ಕೇರ, ಮಾಳೇಟಿರ (ಕೆದಮುಳ್ಳೂರು) ಮಹಿಳೆಯರ ವಿಭಾಗದಲ್ಲಿ ಮಣವಟ್ಟಿರ, ಮುಕ್ಕಾಟಿರ (ಹರಿಹರ) ತಂಡಗಳು ಫೈನಲ್ಗೆ ಲಗ್ಗೆ ಇಟ್ಟಿವೆ.
ಇಂದು ಚೆಕ್ಕೇರ ಮತ್ತು ಪಂದ್ಯAಡ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಚೆಕ್ಕೇರ ೨೯ ರನ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆಕ್ಕೇರ ೮ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೯೦ ರನ್ ಗಳಿಸಿತು. ಪಂದ್ಯAಡ ೮ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೬೧ ರನ್ ಗಳಿಸಿ ಸೋಲು ಕಂಡಿತು. ಚೆಕ್ಕೇರ ಕಾರ್ಯಪ್ಪ ೪೭ ರನ್ ಗಳಿಸಿ ೨ ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಪಂದ್ಯAಡ ದಿಲನ್ ೧೯ ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮಾಳೇಟಿರ (ಕೆದಮುಳ್ಳೂರು) ಮತ್ತು ಪಾರುವಂಡ ನಡುವಿನ ಪಂದ್ಯದಲ್ಲಿ ಮಾಳೇಟಿರ (ಕೆದಮುಳ್ಳೂರು) ೩೮ ರನ್ಗಳ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಾಳೇಟಿರ (ಕೆದಮುಳ್ಳೂರು) ೮ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೮೭ ರನ್ ಗಳಿಸಿತು. ಪಾರುವಂಡ ೭.೨ ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ೪೯ ರನ್ಗಳನ್ನಷ್ಟೇ ಗಳಿಸಿ ಸೋಲು ಅನುಭವಿಸಿತು. ಪಾರುವಂಡ ಪ್ರಿನ್ಸ್ ೧೬ ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮಾಳೇಟಿರ ರಾಣೆ ೪ ವಿಕೆಟ್ ಪಡೆದು ೪೩ ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮಹಿಳೆಯರ ಕ್ರಿಕೆಟ್ನಲ್ಲಿ
ಅರಮಣಮಾಡ (ಬೆಸಗೂರು) ಮತ್ತು ಮಣವಟ್ಟಿರ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಮಣವಟ್ಟಿರ ೩೦ ರನ್ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾಡಿಕೊಂಡ ಮಣವಟ್ಟಿರ ತಂಡ ೬ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸಿತು. ಅರಮಣಮಾಡ (ಬೆಸಗೂರು) ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೩೨ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮಣವಟ್ಟಿರ ಅರ್ಪಿತಾ ೨೧ ರನ್ ಗಳಿಸಿದರು. ಅರಮಣಮಾಡ ದರ್ಶಿನಿ ೧ ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮುಕ್ಕಾಟಿರ (ಹರಿಹರ) ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ೨೩ ರನ್ಗಳಿಂದ ವಿಜಯಿಯಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಕ್ಕಾಟಿರ ೬ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೫೪ ರನ್ ಗಳಿಸಿತು. ಚೆಕ್ಕೇರ ೬ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೩೧ ರನ್ ಗಳನ್ನು ಗಳಿಸಿ ಸೋಲು ಅನುಭವಿಸಿತು. ಚೆಕ್ಕೇರ ಸುಮನ್ ೧೧ ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮುಕ್ಕಾಟಿರ ಅಂಜನಾ ೨೭ ರನ್ ಗಳಿಸಿದರು.