ಮಡಿಕೇರಿ, ಏ. ೨೮: ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಐತಿಹಾಸಿಕ ಹಿನ್ನೆಲೆಯ ಶ್ರೀ ಅರ್ಧನಾರೀಶ್ವರ ದೇವಾಲಯದ ವಾರ್ಷಿಕೋತ್ಸವ ತಾ. ೨೭ ರಿಂದ ಆರಂಭಗೊAಡಿದ್ದು, ಮೇ ೧ ರವರೆಗೆ ನಡೆಯಲಿದೆ.
ಉತ್ಸವದ ಆರಂಭಿಕ ದಿನ ಬೊಟ್ಲಪ್ಪ ದೇವಾಲಯದಿಂದ ತೀರ್ಥವನ್ನು ತಂದು ಶ್ರೀ ಅರ್ಧನಾರೀಶ್ವರನಿಗೆ ಅಭಿಷೇಕ ಪೂಜೆ ನೆರವೇರಿತು. ಇದರೊಂದಿಗೆ ಗಣಪತಿ ಹೋಮ, ಮಹಾಪೂಜೆಯೊಂದಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ದೇವರ ಭಂಡಾರ ತರುವುದು, ದೇವರ ಬಲಿ, ಅಂದಿಬೆಳಕು, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಗಳು ನಡೆದವು.
ತಾ. ೨೮ ರಂದು ಬೆಳಿಗ್ಗೆ ೫ ಗಂಟೆಗೆ ದೇವರ ನೃತ್ಯ ಬಲಿ, ೧೦ ಗಂಟೆಗೆ ಹಬ್ಬದ ಕಟ್ಟು ಮುರಿಯುವುದು, ಮಹಾಪೂಜೆ, ದೇವರು ನೆರಪು ಬಲಿ ಬರುವುದು, ವಸಂತ ಪೂಜೆ, ದೇವರ ಶಯನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಸಂಜೆ ೪ ಗಂಟೆಗೆ ದೇವರ ಜಳಕ ಕಾರ್ಯ ನಡೆಯಿತು. ದೇವರ ನೃತ್ಯ ಬಲಿ ಬಳಿಕ ಅನ್ನಸಂತರ್ಪಣೆ ನೆರವೇರಿತು.
ತಾ. ೨೯ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಶುದ್ಧ ಕಲಶ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ತಾ. ೩೦ ರಂದು ಸಂಜೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ೬ ಗಂಟೆಗೆ ತೋತಬರುವುದು, ದೀಪ ತರುವುದು, ಮೇಲೇರಿಗೆ ಅಗ್ನಿ ಸ್ಪರ್ಶ ಕಾರ್ಯಗಳು ನಡೆಯಲಿದೆ. ಮೇ ೧ ರಂದು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆ. ೧೦ ಗಂಟೆಯಿAದ ಮೇಲೇರಿ ಹಾಗೂ ಅಜ್ಜಪ್ಪ ದೈವದ ಕೋಲ, ಅನ್ನಸಂತರ್ಪಣೆ, ಮಧ್ಯಾಹ್ನ ೨.೩೦ ಗಂಟೆಗೆ ದೇವರಿಗೆ ಬೇಟೆ ಸಾಂಪ್ರದಾಯಿಕ ಆಚರಣೆಗಳು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.