ಕೂಡಿಗೆ, ಏ. ೨೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ಮತ್ತು ನಾಗದೇವರ ವಾರ್ಷಿಕ ಪೂಜೋತ್ಸÀವ ಮೇ ೧ ರಂದು ನಡೆಯಲಿದೆ.

ಹಾರಂಗಿ ನದಿಯಿಂದ ಮಂಗಳವಾದ್ಯದೊAದಿಗೆ ಗಂಗಾ ಪೂಜೆಯೊಂದಿಗೆ ಕಲಶ ತರುವುದು, ಗಣಪತಿ ಹೋಮ, ದುರ್ಗಾಹೋಮ, ಕಲಾವೃದ್ಧಿ ಹೋಮ, ಅಭಿಷೇಕ ಕಳಸ ಪ್ರತಿಷ್ಠೆ, ದೇವಿಗೆ ವಿಶೇಷ ಪೂಜೆ, ನಂತರ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ, ಸಂಜೆ ದೀಪಾಲಂಕಾರ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕೆ.ಸಿ. ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.