ವೀರಾಜಪೇಟೆ, ಏ. ೨೮: ಊರು ಗ್ರಾಮ ಮತ್ತು ಕುಟುಂಬ ವರ್ಗ ಸುಭಿಕ್ಷವಾಗಿರಲು ಸಂಕಲ್ಪದೊAದಿಗೆ ಏರ್ಪಡಿ ಸುವ ಶಕ್ತಾö್ಯನುಸಾರ ನಡೆಸುವ ನೇಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಕೆದಮುಳ್ಳೂರು ಗ್ರಾಮ ತೆರ್ಮೆಮೊಟ್ಟೆ ಗ್ರಾಮದ ನಿವಾಸಿ ಬಿ.ಇ. ಹೊನ್ನಪ್ಪ (ನಾರಾಯಣ) ಮನೆಯಲ್ಲಿ ಶ್ರೀ ಪಾಷಾಣಮೂರ್ತಿ, ಗುಳಿಗ ದೈವಗಳ ನೇಮೋತ್ಸವ ವಿಜೃಂಭಣೆಯಿAದ ನಡೆ ಯಿತು.

ತಾ. ೨೨ ರಂದು ಗಣಪತಿ ಹೋಮ ಮತ್ತು ಸತ್ಯ ನಾರಾಯಣ ಪೂಜೆಯೊಂದಿಗೆ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ತಾ. ೨೪ ರಂದು ಸಂಜೆ ಗುರು ಹಿರಿಯರು ಕುಟುಂಬ ಸದಸ್ಯರಿಂದ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ವಿಶೇಷ ಎಣ್ಣೆಯನ್ನು ದೈವ ನರ್ತಕರಿಗೆ ನೀಡಲಾಯಿತು. ಸುಳ್ಯದ ಬೊಳಿಯ ಮಜಲು ಜಯರಾಂ ಅವರ (ದೈವ ನರ್ತಕರು) ಸಾನಿಧ್ಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕುಟುಂಬ ಮನೆಯಿಂದ ದೈವಗಳ ಭಂಡಾರ ಇಳಿಸಲಾಯಿತು. ಅನ್ನಸಂತರ್ಪಣೆ ನಡೆಸಲಾಯಿತು.

ರಾತ್ರಿ ೧೦.೩೦ಕ್ಕೆ ಪಾಷಾಣಮೂರ್ತಿ ದೈವ ನೇಮ ಮತ್ತು ಗುಳಿಗ ದೈವದ ನೇಮ ದೈವದ ನೇಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರ್ಶಿತ್ ಮತ್ತು ತಂಡ (ದೈವಗಳಿಗೆ ನುಡಿಸುವ ವಿಶೇಷ ವಾದ್ಯ) ನುಡಿಸಿದ ವಾದ್ಯ ಭಕ್ತರನ್ನು ಮಂತ್ರಮುಗ್ದವಾಗಿಸಿತು. ನೇಮೋತ್ಸವದಲ್ಲಿ ಕುಟುಂಬ ವರ್ಗ, ಗ್ರಾಮಸ್ಥರು ಹಾಗೂ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ಕೃಪೆಗೆ ಪಾತ್ರರಾದರು.