ಸೋಮವಾರಪೇಟೆ, ಏ. ೨೮: ಇಲ್ಲಿನ ಅರಣ್ಯ ಇಲಾಖೆ ವತಿಯಿಂದ ಅರಣ್ಯದಂಚಿನ ಗ್ರಾಮಗಳ ಆಯ್ದ ಪಲಾನುಭವಿಗಳಿಗೆ ಜೇನುಪೆಟ್ಟಿಗೆ ಹಾಗೂ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಪಟ್ಟಣ ಸಮೀಪದ ಬಳಗುಂದ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಹುಲಿ ಮಿತ್ರ ಯೋಜನೆಯ ಜಾಗೃತಿ ಕಾರ್ಯಕ್ರಮ, ಕ್ರಿಕೆಟ್ ಪಂದ್ಯಾಟದ ವೇದಿಕೆಯಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು.
ಅರಣ್ಯ ಇಲಾಖೆಯಿಂದ ಶನಿವಾರಸಂತೆ ಹಾಗೂ ಸೋಮವಾರಪೇಟೆ ವಲಯಕ್ಕೆ ಸಂಬAಧಿಸಿದAತೆ ೩೦ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ೬೦ ಫಲಾನುಭವಿಗಳಿಗೆ ಜೇನುಪೆಟ್ಟಿಗೆ, ಪುಷ್ಪಗಿರಿ ವೈಡ್ಲೈಫ್ನಿಂದ ೧೦ ಮಂದಿಗೆ ಜೇನುತುಪ್ಪ ಶೇಖರಣಾ ಹಂಡೆಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಎಸಿಎಫ್ ಗೋಪಾಲ್ ತಿಳಿಸಿದರು.
ಈ ಸಂದರ್ಭ ಡಿಸಿಎಫ್ ಜಗನ್ನಾಥ್, ಪೊಲೀಸ್ ನಿರೀಕ್ಷಕ ಮುದ್ದುಮಹದೇವ, ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್ ಸೇರಿದಂತೆ ಇತರರು ಇದ್ದರು.